ಪ್ರಸಾದ್ ಭಂಡಾರಿಯವರು ಪಟ್ಟಿ ಮಾಡಿದ ಪುತ್ತಿಲರ ಹಣೆಬರಹ!!
ನೀವು ಪದೇ ಪದೇ ನಮ್ಮ ಅರುಣ್ ಕುಮಾರ್ ಪುತ್ತಿಲ ಅವರ ಬಗ್ಗೆನೆ ಯಾಕೆ ಬರೆಯುತ್ತೀರಿ. ಅಲ್ಲಿ ಅಶೋಕ್ ಕುಮಾರ್ ರೈ ಅವರು ಕೂಡ ಇದ್ದಾರಲ್ಲ, ಅವರ ಬಗ್ಗೆ ಯಾಕೆ ಬರೆಯಲ್ಲ ಎಂದು ಪುತ್ತಿಲ ಬೆಂಬಲಿಗರು ಎಂದು ಅನಿಸಿಕೊಂಡಿರುವ ಕೆಲವರು ಕೇಳುತ್ತಿದ್ದಾರೆ. ಅದಕ್ಕೆ ನಾನು ಹೇಳುವುದು ಏನೆಂದರೆ ಲೆಕ್ಕಕ್ಕೆ ಇದ್ದವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕೆ ವಿನ: ಯಾರ್ಯಾರೋ ಇದ್ದಾರೆ ಎಂದು ಸುಮ್ಮನೆ ಮಾತನಾಡಲು ದಕ್ಷಿಣ ಕನ್ನಡ ಜನರಿಗೆ ಬೇರೆ ಕೆಲಸ ಇಲ್ಲ ಎಂದಲ್ಲ. ಅಶೋಕ್ ರೈ ಅವರು ಈಗ ಲೆಕ್ಕಕ್ಕೆ ಬರುವಂತೆ ಮಾಡಿದ್ದೇ ಈ ಪುತ್ತಿಲ. ಇಲ್ಲದಿದ್ದರೆ ಭಾರತೀಯ ಜನತಾ ಪಾರ್ಟಿಯ ಎದುರು ಸಂಘ ಪರಿವಾರದ ಭದ್ರ ಕೋಟೆಯಲ್ಲಿ ಯಾರ್ಯಾರೋ ಬಂದು ನನ್ನದು ಎಲ್ಲಿ ಇಡಲಿ ಎಂದು ಕೇಳುತ್ತಾರೆ ಎಂದರೆ ಅದಕ್ಕೆ ಕಾರಣ ಪುತ್ತಿಲ. ಇಲ್ಲದಿದ್ದರೆ ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಸದ್ದು ಗೌಡರ ಆಪ್ತರು ಎನ್ನುವುದು ಬಿಟ್ಟರೆ ಕೊಡಿಂಬಾಡಿಯವರಿಗೆ ಬೇರೆ ಏನೂ ಪೋಸ್ಟ್ ಇದೆ. ಕೋಪ ಬಂದಾಗ ಪಿಸ್ತೂಲ್ ತೆಗೆದು ಶೂಟ್ ಮಾಡುತ್ತೇನೆ ಎಂದು ಪಾಪದವರನ್ನು ಹೆದರಿಸುತ್ತಾರೆ ಎನ್ನುವುದೇ ಅವರ ಅರ್ಹತೆನಾ? ಜಾಗದ ಸರ್ವೆ ಮಾಡಲು ಬಂದವರ ಮೇಲೆ ಹರಿಹಾಯ್ದು ದಬ್ಬಾಳಿಕೆ ತೋರಿಸುತ್ತಾರೆ ಎನ್ನುವುದೇ ಅವರ ಹೆಚ್ಚುಗಾರಿಕೆನಾ? ಹೇಳಿ ಪುತ್ತಿಲ ಬೆಂಬಲಿಗರೇ ಏನೆಂದು ಅವರ ಬಗ್ಗೆ ಬರೆದು ಸಮಯ ವೇಸ್ಟ್ ಮಾಡಬೇಕು. ಯೋಧನೊಬ್ಬನ ಜಾಗದ ವಿಷಯದಲ್ಲಿ ರೌಡಿಸಂ ತೋರಿಸಿದ್ದು ಮಾಧ್ಯಮದಲ್ಲಿ ಬಂದದ್ದನ್ನು ಮತ್ತೆ ಬರೆದು ಅವರ ಪೌರುಷ ಹೇಳಬೇಕಾ? ಅವರ ಬಗ್ಗೆ ಮಾತನಾಡಲು ಇರುವ ವಿಷಯವಾದರೂ ಏನಿದೆ? ಆದರೆ ಪುತ್ತಿಲರ ಶಾಸಕನಾಗಬೇಕೆಂಬ ಏಕೈಕ ಹಟ ಗಟ್ಟಿಯಾದರೆ ಭವಿಷ್ಯದಲ್ಲಿ ಏನೂ ಅಲ್ಲದವರು ಕೂಡ ಏನಾದರೂ ಆದರೆ ನಂತರ ಖಂಡಿತ ಪುತ್ತೂರು ಪಶ್ಚಾತ್ತಾಪ ಪಡಬೇಕಾದೀತು. ಇನ್ನು ಆಶಾ ತಿಮ್ಮಪ್ಪ ಗೌಡರ ಬಗ್ಗೆ ಯಾಕೆ ಬರೆಯಲ್ಲ ಎಂದು ಇಂತವರೇ ಕೇಳುತ್ತಾರೆ. ಆಶಾ ಅವರು ಇವತ್ತು ನಿನ್ನೆಯಿಂದ ಭಾರತೀಯ ಜನತಾ ಪಾರ್ಟಿಯವರೇನಲ್ಲ. ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಅವರ ಅವಧಿಯಲ್ಲಿ ಭ್ರಷ್ಟಾಚಾರದ ಲವಲೇಶವೂ ಅಲ್ಲಿ ಸುಳಿದಿರಲಿಲ್ಲ ಎನ್ನುವುದು ಅವರ ಅವಧಿಯಲ್ಲಿ ಸೇವೆ ಸಲ್ಲಿಸಿದವರಿಗೆ ಗೊತ್ತಿದೆ. ರಾಜಕೀಯದ ಅನುಭವ ಇದ್ದವರು. ಇನ್ನು ತನ್ನ ಮಗನನ್ನು ಸಂಘದ ಪ್ರಚಾರಕರಾಗಿ ಸಮರ್ಪಿಸಿದ ಹೆಣ್ಣುಮಗಳ ಬಗ್ಗೆ ಏನೆಂದು ಬರೆಯುವುದು ಪುತ್ತಿಲ ಹಿಂಬಾಲಕರೇ? ಅವರಿಗೆ 64 ವರ್ಷ ವಯಸ್ಸಾಯಿತು ಎನ್ನುವ ಕಾರಣಕ್ಕೆ ಬೇಡಾ ಎನ್ನುವ ನಿಮ್ಮ ಆರೋಪಕ್ಕೆ ಪುತ್ತೂರಿನ ಡಾ. ಪ್ರಸಾದ್ ಭಂಡಾರಿಯವರು ಸರಿಯಾದ ಜವಾಬು ನೀಡಿದ್ದಾರೆ. “ಹಾಗಾದ್ರೆ ಮೋದಿಯವರಿಗೂ ಅಷ್ಟೇ ವಯಸ್ಸು. ಅದಕ್ಕೆ ಏನು ಹೇಳುತ್ತೀರಿ” ಅಷ್ಟಕ್ಕೂ ಪುತ್ತೂರಿಗೆ ಒಬ್ಬ ಶಾಂತಸ್ವರೂಪಿ, ಪುತ್ತೂರನ್ನು ನೆಮ್ಮದಿಯಿಂದ ಕಾಣಲು ಇಷ್ಟಪಡುವವರು ಬೇಕು. ಅದನ್ನು ಆಶಾ ಅವರು ಮಾಡಲಿದ್ದಾರೆ ಎನ್ನುವ ಭರವಸೆ ಪ್ರಸಾದ್ ಭಂಡಾರಿ, ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅಂತವರಿಗೆ ಇದೆ. ಅಂತವರಿಗಿಂತ ಪುತ್ತಿಲ ದೊಡ್ಡ ಜನವಾ? ಪ್ರಸಾದ್ ಭಂಡಾರಿಯವರು ಒಬ್ಬ ವ್ಯಕ್ತಿಯ ಬಗ್ಗೆ ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಮಾಡುವ ಮೊದಲು ನೂರು ಬಾರಿ ಯೋಚಿಸುವವರು. ಅಂತಹ ಘನ ವ್ಯಕ್ತಿತ್ವ ಅವರದ್ದು. ಅಂತವರು ಪುತ್ತಿಲ ಬಗ್ಗೆ ಒಂದು ಸುದ್ದಿಗೋಷ್ಟಿಯನ್ನು ಕರೆದು ಒಂದು ಇಡೀ ಕಾಗದದಲ್ಲಿ ಅಂಶಗಳನ್ನು ಬರೆದುಕೊಂಡು ಬಂದು ಮಾತನಾಡುತ್ತಿದ್ದಾರೆ ಎಂದರೆ ಪುತ್ತಿಲ ಅವರಿಗೆ ಇನ್ನು ಕೂಡ ಗೆಲ್ಲುವ ಆಶಾವಾದ ಇದೆ ಎಂದರೆ ಅದು ಪುತ್ತಿಲ ಬೆಂಬಲಿಗರ ಭ್ರಮೆ.
ಪುತ್ತಿಲ ಹಿಂದೂತ್ವಕ್ಕಾಗಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆ ಕಲ್ಲಡ್ಕ ಭಟ್ ಹಾಗೂ ಪ್ರಸಾದ್ ಭಂಡಾರಿ ಇಬ್ಬರೂ ವೈದ್ಯರು ಕೇಳಿದ್ದಾರೆ. ಯಾವುದೇ ಒಂದು ಗಲಾಟೆಯಲ್ಲಿ ಮುಂದೆ ಹೋಗಿ ಅಲ್ಲಿ ಪೋಸ್ ಕೊಟ್ಟು, ತೊಂದರೆ ಆದರೆ ಅಲ್ಲಿಂದ ಎಸ್ಕೇಪ್ ಆಗುವುದೇ ಹಿಂದೂತ್ವದ ರಕ್ಷಣೆ ಮಾಡುವುದು ಎಂದುಕೊಳ್ಳುವುದೇ ಮೂರ್ಖತನ. ಪುತ್ತಿಲ ತಾವು ಕೈ ಹಾಕಿದ ಯಾವುದೇ ಬ್ರಹ್ಮಕಲಶೋತ್ಸವ, ಶನಿಪೂಜೆ, ದೇವಸ್ಥಾನಗಳ ಜೀರ್ಣೋದ್ಧಾರಗಳ ಲೆಕ್ಕಪತ್ರವನ್ನು ಇಲ್ಲಿ ತನಕ ನೀಡಿಲ್ಲ ಎನ್ನುವ ವಿಷಯ ಚಿಕ್ಕದಲ್ಲ. ಇದಾ ಹಿಂದೂತ್ವ ಎನ್ನುವುದನ್ನು ಪುತ್ತಿಲ ವಿವರಿಸಬೇಕು. ನಾಗನಕಟ್ಟೆಯೊಂದನ್ನು ನವನಿರ್ಮಾಣ ಮಾಡುವಾಗ ಅದಕ್ಕೆ ತಡೆಯಾಜ್ಞೆ ತರುವುದು, ಅದು ಕಟ್ಟದಂತೆ ಪದೇ ಪದೇ ಅಡ್ಡಿಪಡಿಸುವುದು ಇದಾ ಹಿಂದೂತ್ವ? ತನ್ನ ವಾಹನದ ಕೆಳಗೆ ಹೆಣ್ಣು ಮಗಳೊಬ್ಬಳು ಬಿದ್ದು ಹೆಣವಾದಾಗ ಅದನ್ನು ಮುಚ್ಚಿ ಹಾಕಿದ್ದು ಹಿಂದೂ ಮುಖಂಡನಾ ವ್ಯಕ್ತಿತ್ವನಾ? ಶ್ರೀರಾಮಸೇನೆಗೆ ಸೇರಿ ಮರಾಠಿಯಲ್ಲಿ ಪ್ರಾರ್ಥನೆ ಮಾಡಿದ್ದು ನಿಮಗೆ ಶೋಭೆ ತರುತ್ತದಾ? ಹಿಂದೂ ಸೇನೆ ಕಟ್ಟಿ ಸಂಘದ ವಿರುದ್ಧ ಕೆಲಸ ಮಾಡಿದ್ದು ಹಿಂದೂಪರನಾ? ಮಲ್ಲಿಕಾ ಪ್ರಸಾದ್ ಭಂಡಾರಿಯವರು ಚುನಾವಣೆಗೆ ನಿಂತಾಗ ಅವರ ವಿರುದ್ಧ ಅಷ್ಟೂ ಕಿತಾಪತಿ ಮಾಡಿದ್ದು ಬಿಜೆಪಿ ಕಾರ್ಯಕರ್ತ ಎಂದು ಹೇಳಲು ಸಾಧ್ಯವೇ? ಹಿಂದೂ ಕಾರ್ಯಕರ್ತರೊಬ್ಬರ ಮನೆಗೆ ದಾಳಿ ಮಾಡಿ ಸಿಸಿಟಿವಿ ಕ್ಯಾಮೆರಾ ಪುಡಿ ಮಾಡಿದ್ದು ಹಿಂದೂತ್ವವೇ? ಹೀಗೆ ಡಾ. ಪ್ರಸಾದ್ ಭಂಡಾರಿಯವರು ಪಟ್ಟಿ ಮಾಡಿ ಸುದ್ದಿಗೋಷ್ಟಿ ಕರೆದು ಪುತ್ತಿಲ ಅವರ ಹಣೆಬರಹವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಉತ್ತರ ಕೊಡಲು ಇಡೀ ವರ್ಷ ಪುತ್ತಿಲ ಅವರಿಗೆ ಬೇಕಾಗಬಹುದು. ರಾಷ್ಟ್ರದ ಗೃಹಸಚಿವ ಅಮಿತ್ ಶಾ ಅವರು ಕರೆ ಮಾಡಿ ಮಾತನಾಡಲು ಬಯಸಿದ್ದನ್ನು ಕೂಡ ತಿರಸ್ಕರಿಸುವಷ್ಟು ದೊಡ್ಡ ಜನ ಪುತ್ತಿಲ ಅಲ್ಲ ಎನ್ನುವುದು ಅವರಿಗೆ ಗೊತ್ತಾಗುವಾಗ ತಡವಾಗದಿರಲಿ ಎನ್ನುವ ಆಶಯ ಸಜ್ಜನ ಪುತ್ತೂರಿಗರಲ್ಲಿದೆ. ಸಂಘ ಯಾರನ್ನು ಬೇಕಾದರೂ ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಬಹುದು. ಯಾರಾದರೂ ಹಿಂದೂತ್ವದ ವಿರುದ್ಧ ಸ್ವಾರ್ಥದಿಂದ ಮಸಲತ್ತು ನಡೆಸಿದಾಗ ಅಂತವರ ಕಿವಿಹಿಂಡುವ ಕೆಲಸವನ್ನು ಕೂಡ ಸಂಘ ಮಾಡುತ್ತದೆ. ಪುತ್ತಿಲ ಅವರಿಗೆ ಶಾಸಕನಾಗಲು ಹಿಂದೂ ಪರ ಸಂಘಟನೆ ಒಂದು ಮೆಟ್ಟಿಲು ಮಾತ್ರ ಆಗಿರುವುದರಿಂದ ಅವರ ಹಣೆಬರಹ ಈಗ ಬಯಲಾಗಿದೆ!
Leave A Reply