ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
ಭಾರತೀಯ ಕುಸ್ತಿ ಫೆಡರೇಶನಿನ ರಾಷ್ಟ್ರೀಯ ಅಧ್ಯಕ್ಷರು ಈಗ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದು ಬಹುತೇಕ ಐದು ತಿಂಗಳು ಆಗುತ್ತಾ ಬರುತ್ತಿದೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ವಿವಾದಿತ ಮಸೀದಿ ಕಟ್ಟಡವನ್ನು ಧರಾಶಾಯಿಗೊಳಿಸಿದ ಘಟನೆಯಲ್ಲಿ ಮುಂಚೂಣಿಯಲ್ಲಿ ಇದ್ದ ಪ್ರಕರಣದಿಂದ ಲೈಮ್ ಲೈಟಿಗೆ ಬಂದ, ಉತ್ತರ ಪ್ರದೇಶದ ಆರು ಬಾರಿಯ ಸಂಸದ, ಭಾರತೀಯ ಕುಸ್ತಿ ಮೇಲೆ ತನ್ನ ಪ್ರಬಲ ಹಿಡಿತವನ್ನು ಹೊಂದಿರುವ ಸ್ವಕುಸ್ತಿಪಟು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇರುವುದು ಲೈಂಗಿಕ ದೌರ್ಜನ್ಯದ ಕೇಸುಗಳು. ಒಂದು ಪೋಕ್ಸೋ ಪ್ರಕರಣ ಕೂಡ ದಾಖಲಾಗಿದ್ದು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿ ಸಾಕ್ಷಿ ಮಲ್ಲಿಕ್, ವಿನೇಶ್ ಪೊಗೊಟ್, ಸಂಗೀತಾ ಪೊಗೊಟ್ ಪ್ರತಿಭಟನೆಗೆ ಇಳಿದಿದ್ದಾರೆ. ಇವರ ಮನವಿಯ ಮೇರೆಗೆ ಜನವರಿಯಲ್ಲಿಯೇ ಕೇಂದ್ರ ಸರಕಾರ ಒಂದು ಪರಿಶೀಲನಾ ಸಮಿತಿಯನ್ನು ರಚಿಸಿ ಬಾಕ್ಸಿಂಗ್ ದಂತಕಥೆ ಮೇರಿ ಕೋಮ್ ಅವರಿಗೆ ನೇತೃತ್ವ ವಹಿಸಿತ್ತು. ನಾಲ್ಕು ವಾರದೊಳಗೆ ವರದಿ ನೀಡಬೇಕು ಎಂದು ಸೂಚಿಸಿದ್ದರೂ ಆ ಸಮಿತಿ ವರದಿ ನೀಡಿದ್ದು ಎಪ್ರಿಲ್ ಮೊದಲವಾರದಂದು. ಆ ಸಮಿತಿಯ ಪ್ರಮುಖ ಅಂಶಗಳನ್ನು ನೋಡುವುದಾದರೆ ” ಫೆಡರೇಶನ್ ಒಂದು ಆಂತರಿಕ ಸಮಿತಿಯನ್ನು ರಚಿಸಿ ಕ್ರೀಡಾಳುಗಳ ದೂರು ದುಮ್ಮಾನಗಳನ್ನು ಆಲಿಸಬೇಕಿತ್ತು” ಆರಂಭದಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆಗೆ ಕುಳಿತುಕೊಂಡಾಗ ಸಹಜವಾಗಿ ಅವರ ಬಗ್ಗೆ ರಾಷ್ಟ್ರದಲ್ಲಿ ಅನುಕಂಪದ ಅಲೆಗಳು ಮೂಡಿತ್ತು. ಆದರೆ ನಿಧಾನವಾಗಿ ಅನುಕಂಪ ಕರಗುತ್ತಿದೆ. ಕಾರಣಗಳು ವಿಭಿನ್ನವಾಗಿದೆ. ಒಂದೊಂದೇ ಅಂಶಗಳನ್ನು ನೋಡುತ್ತಾ ಹೋಗೋಣ.
ಮೊದಲನೇಯದಾಗಿ ತಂಡದ ಒಬ್ಬಳು ವೈದ್ಯಕೀಯ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಆದರೆ ಸಮಿತಿಯ ಮುಂದೆ ಆಕೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇರಲಿ, ಅದರಲ್ಲಿ ಒತ್ತಡ ಇತ್ತು ಎಂದೇ ಒಂದು ಕ್ಷಣ ಅಂದುಕೊಳ್ಳೋಣ. ಆದರೆ ಪ್ರತಿಭಟನಾಕಾರರ ಎರಡನೇ ಅಂಶ ನೋಡೋಣ. 2015 ರಲ್ಲಿ ಟರ್ಕಿ ಪ್ರವಾಸದ ಸಂದರ್ಭದಲ್ಲಿ ಸಾಕ್ಷಿ ಮಲ್ಲಿಕ್ ಹಾಗೂ ವಿನೇಶ್ ಪೊಗೊಟ್ ತಮಗೆ ಬ್ರಿಜ್ ಭೂಷಣ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆ ಪ್ರವಾಸದಲ್ಲಿ ಬ್ರಿಜ್ ಭೂಷಣ್ ಇರಲೇ ಇಲ್ಲ. ಅವರು ಟರ್ಕಿಗೆ ಹೋಗಿರಲೇ ಇಲ್ಲ. ಸಮಿತಿ ಈ ಸತ್ಯವನ್ನು ಪತ್ತೆಹಚ್ಚಿದ ನಂತರ ವಿನೇಶ್ ಪೊಗೊಟ್ ಇನ್ನೊಂದು ಆರೋಪ ಮಾಡುತ್ತಾ ತಮಗೆ ಕನ್ಫೂಸ್ ಆಗಿದ್ದು, 2016 ರಲ್ಲಿ ಮೊಂಗೋಲಿಯಾ ಟೂರ್ ಅವಧಿಯಲ್ಲಿ ಬ್ರಿಜ್ ಭೂಷಣ್ ತಮಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಮಿತಿ ಈ ವಿಷಯದ ಜಾಡು ಹಿಡಿದು ಹೊರಟಾಗಲೂ ಕಂಡು ಬಂದ ಸತ್ಯ ಏನೆಂದರೆ ಮೊಂಗೋಲಿಯಾ ಪ್ರವಾಸದಲ್ಲಿಯೂ ಬ್ರಿಜ್ ಭೂಷಣ್ ಇರಲೇ ಇಲ್ಲ. ನಂತರ ಪ್ರತಿಭಟನಾಕಾರರು ಇನ್ನೊಂದು ಆರೋಪ ಮಾಡಿ ಕನಿಷ್ಟ ಸಾವಿರ ಹೆಣ್ಣುಮಕ್ಕಳು ಬ್ರಿಜ್ ಭೂಷಣ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕೆ ಕಮಿಟಿಯವರು ಸಾವಿರ ಮಂದಿ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅದರಲ್ಲಿ ಕನಿಷ್ಟ ಕೆಲವು ಹೆಸರಾದರೂ ತಾವು ನೀಡಿದ್ದಲ್ಲಿ ತಾವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿತು. ಆದರೆ ಪೊಗೊಟ್ ಅಥವಾ ಮಲ್ಲಿಕ್ ಒಂದೇ ಒಂದು ಹೆಸರನ್ನು ನೀಡಿಲ್ಲ. ಆ ಸಾವಿರ ಮಂದಿಯಲ್ಲಿ ಒಬ್ಬರಾದರೂ ಕೇಸ್ ದಾಖಲಿಸಿದ್ದಾರಾ ಎಂದು ನೋಡಿದರೆ ಅದು ಕೂಡ ಇಲ್ಲ. ಆದರೆ ಪ್ರತಿಭಟನಾಕಾರರ ಒತ್ತಾಯ ಒಂದೇ. ಬ್ರಿಜ್ ಭೂಷಣ್ ರನ್ನು ಇಳಿಸಬೇಕು.
ಇವರ ಆರೋಪಗಳಿಗೆ ಸಾಕ್ಷ್ಯ ಇಲ್ಲ!!
ಮೊದಲನೇಯದಾಗಿ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್ ಐಆರ್ ದಾಖಲಾಗುವುದಿಲ್ಲ. ಪೂರಕ ಸಾಕ್ಷಿಗಳನ್ನು ಪ್ರತಿಭಟನಾಕಾರರು ನೀಡುವುದಿಲ್ಲ. ಎರಡನೇಯದಾಗಿ ಅವರಿಗೆ ಈ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ಮಾಡುವುದು ಇಷ್ಟವಿಲ್ಲ. ಅವರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇದ್ದಂತೆ ಕಾಣುವುದಿಲ್ಲ. ಅವರು ಮೇರಿ ಕೋಮ್ ನೇತೃತ್ವದ ಸಮಿತಿಯ ವರದಿಯನ್ನು ಒಪ್ಪುತ್ತಿಲ್ಲ. ಯಾವುದೇ ಯುವತಿಯನ್ನು ಅವರು ಸಮಿತಿಯ ಮುಂದೆ ತಂದು ನಿಲ್ಲಿಸಿ ದೌರ್ಜನ್ಯಕ್ಕೆ ಸಾಕ್ಷ್ಯ ನೀಡಿಲ್ಲ. ಅದರೊಂದಿಗೆ 2015 ರಲ್ಲಿ ನಡೆದಿದೆ ಎಂದು ಇವರು ಹೇಳುತ್ತಿರುವ ಪ್ರಕರಣದಲ್ಲಿ ತನಿಖೆ ಆಗಬೇಕು ಎಂದು ಅವರು ಈಗ ಪ್ರತಿಭಟನೆಗೆ ಕುಳಿತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ತನಿಖೆ ಇಲ್ಲದೇ ಬ್ರಿಜ್ ಭೂಷಣ್ ಅವರನ್ನು ಆ ಸ್ಥಾನದಿಂದ ಇಳಿಸಬೇಕು ಎನ್ನುವುದು ಏಕಮೇಮ ಒತ್ತಾಯ. ಪ್ರತಿಭಟನಾಕಾರರಲ್ಲಿ ಪ್ರಮುಖರಾಗಿರುವ ಸಂಗೀತಾ ಪೊಗೊಟ್ ಹಾಗೂ ಭಜರಂಗಿ ಪೂಣಿಯ ಅವರು ತಮ್ಮ ಇನ್ಟಾಗ್ರಾಂನಲ್ಲಿ ಮೋದಿ ವಿರುದ್ಧ ಆಕ್ಷೇಪಾರ್ಹ ಶಬ್ದಗಳನ್ನು ಬರೆದಿದ್ದು, ಜಾಟ್ ಸಮುದಾಯವನ್ನು ಶ್ಲಾಘಿಸಿದ್ದಾರೆ. ಈ ದಂಪತಿಯೊಂದಿಗೆ ಸಂಗೀತಾ ಪೋಗೋಟ್ ಳ ಓರ್ವ ಸಹೋದರಿ ವಿನೀಶಾ ಪೊಗೊಟ್ ಮಾತ್ರ ಸೇರಿಕೊಂಡಿದ್ದು, ಗೀತಾ ಪೊಗೊಟ್ ಹಾಗೂ ಬಬಿತಾ ಪೊಗೊಟ್ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲದೇ ಪ್ರಿಯಾಂಕಾ ವಾದ್ರಾ ಅವರಿಗೂ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಗೀತಾ ಹಾಗೂ ಬಬಿತಾ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಗಾದ್ರೆ ಪ್ರತಿಭಟನೆ ಯಾಕೆ?
ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಾಕ್ಷಿ ಮಲ್ಲಿಕ್, ವಿನೀಶಾ ಪೊಗೊಟ್ ಹಾಗೂ ಸಂಗೀತಾ ಜೊತೆ ಗಂಡ ಭಜರಂಗಿ ಪೂನಿಯಾ ಅವರ ತಂತ್ರ ಏನೆಂದರೆ ಅವರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದಾರೆ. ತಮ್ಮದೇನಿದ್ದರೂ ಒಲಿಂಪಿಕ್ಸ್ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳು ಮಾತ್ರ ಎನ್ನುವುದು ಅವರ ಏಕೈಕ ಉದ್ದೇಶ. ಇದನ್ನು ಬ್ರಿಜ್ ಭೂಷಣ್ ಒಪ್ಪುತ್ತಿಲ್ಲ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಹೇಳಿದ್ದಾರೆ. ಈಗ ನಿನ್ನನ್ನೇ ಇಳಿಸುತ್ತೇವೆ ಎಂದು ಇವರು ಹೋರಾಟಕ್ಕೆ ಇಳಿದಿದ್ದಾರೆ. ಅದಕ್ಕೆ ಟಿಕಾಯತ್ ಅವರಂತಹ ಕೃಷಿಕರ ಹೆಸರಿನಲ್ಲಿ ಮುಖವಾಡ ತೊಟ್ಟ ಐಷಾರಾಮಿ ರೈತರು ಸಾಥ್ ನೀಡುತ್ತಿದ್ದಾರೆ.
Leave A Reply