ಕುಕ್ಕರ್ ಬಾಂಬ್ ಆರೋಪಿಗೆ ಸಿಮ್ ಪೂರೈಸಿದವನ ಬಂಧನ
Posted On June 13, 2023

ಮಂಗಳೂರಿನಲ್ಲಿ ಕಳೆದ ವರ್ಷ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಮೋಬೈಲ್ ಸಿಮ್ ಪೂರೈಕೆ ಮಾಡಿದ್ದ ವ್ಯಕ್ತಿಯನ್ನು ಒಡಿಶಾ ವಿಶೇಷ ಕಾರ್ಯಪಡೆ ಬಂಧಿಸಿದೆ.
ಮಂಗಳೂರಿನಲ್ಲಿ ಕಳೆದ ವರ್ಷ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಮೋಬೈಲ್ ಸಿಮ್ ಪೂರೈಕೆ ಮಾಡಿದ್ದ ವ್ಯಕ್ತಿಯನ್ನು ಒಡಿಶಾ ವಿಶೇಷ ಕಾರ್ಯಪಡೆ ಬಂಧಿಸಿದೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ರಚಿಸಲಾದ ವಿಶೇಷ ಕಾರ್ಯಪಡೆ ತಂಡಕ್ಕೆ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.
ಜಾಜ್‌ಪುರ ಜಿಲ್ಲೆಯ ಪ್ರೀತಂಕಾರ್ (31) ಬಂಧಿತ ಆರೋಪಿಯಾಗಿದ್ದು, ತನಿಖೆ ವೇಳೆ 2022ರ
ನವೆಂಬರ್‌ನಲ್ಲಿ ನಡೆದಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಲಿಂಕ್ ಇರುವುದು ಪತ್ತೆಯಾಗಿದೆ.
ಈ ಸಂಬಂಧ ಕರ್ನಾಟಕ ಪೊಲೀಸ್ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಲಾಗಿದೆ ಎಂದು
ಒಡಿಶಾ ಪೊಲೀಸರು ತಿಳಿಸಿದ್ದಾರೆ.
- Advertisement -
Leave A Reply