• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾಂಗ್ರೆಸ್ ತನ್ನ ಸುಖವನ್ನು ಬಿಡಲಿ!

Hanumantha Kamath Posted On June 23, 2023
0


0
Shares
  • Share On Facebook
  • Tweet It

ಸಿದ್ದು ಹಾಗೂ ಡಿಕೆಶಿ ಕರ್ನಾಟಕದಲ್ಲಿ ರಾಬಿನ್ ಹುಡ್ ನ ಅಪರಾವತಾರವನ್ನು ತೋರಿಸುವ ಉಮ್ಮೇದಿನಲ್ಲಿದ್ದಾರೆ. ರಾಬಿನ್ ಹುಡ್ ಅಂದರೆ ಉಳ್ಳವರಿಂದ ಕಿತ್ತುಕೊಂಡು ಬಡವರಿಗೆ ಹಂಚುವ ಕೆಲಸವನ್ನು ಮಾಡುವವನಿಗೆ ಪರ್ಯಾಯವಾಗಿ ಬಳಸುವ ಹೆಸರು. ಆದರೆ ಈ ಕರ್ನಾಟಕದ ಈ ರಾಬಿನ್ ಹುಡ್ ಗಳು ಮಧ್ಯಮ ವರ್ಗದವರಿಂದ ಕಿತ್ತು ಇದ್ದವರಿಗೆ, ಇಲ್ಲದವರಿಗೆ ಎಲ್ಲರಿಗೂ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಹೀಗೆ ಮಾಡುವುದರಿಂದ ಎಲ್ಲವೂ ಅಲ್ಲೋಲ ಕಲ್ಲೋಲವಾಗಿ ಕೊನೆಗೆ ಕಾಂಗ್ರೆಸ್ ಸರಕಾರಕ್ಕೆ ಮಹಾಮಂಗಳಾರತಿಯೊಂದಿಗೆ ಮುಕ್ತಾಯವಾಗಲಿದೆ. ಇದರ ಅರಿವು ಕಾಂಗ್ರೆಸ್ಸಿಗೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಡಿಕೆಶಿಗೆ ಇದೆ. ಆದರೆ ರಾಜಕೀಯದ ಕೊನೆಯ ಆಟದ ಸ್ಲೋಗ್ ಓವರ್ ನಲ್ಲಿ ತಾನು ಮಾತ್ರ ಮಿಂಚಿದರೆ ಸಾಕು ಎನ್ನುವ ಹಪಾಹಪಿಯೊಂದಿಗೆ ಸಿದ್ದು ಇನ್ನಿಂಗ್ಸ್ ಮುಗಿಸುವ ಧಾವಂತದಲ್ಲಿದ್ದಾರೆ. ಕಾಂಗ್ರೆಸ್ಸಿನ ಭವಿಷ್ಯ ಹೇಗೆ ಬೇಕಾದರೂ ಹಾಳಾಗಿ ಹೋಗಲಿ, ತಾನು ಮಾತ್ರ ದೇವರಾಜ್ ಅರಸು ಅವರಂತವರ ಲೆವೆಲ್ಲಿಗೆ ಹೋಗಬೇಕು ಎನ್ನುವುದು ಸಿದ್ದು ಗುರಿ. ನಾಯಕನಾದವನಿಗೆ ಹಡಗು ಮುಳುಗಿ ಹೋದರೂ ಪರವಾಗಿಲ್ಲ, ನಾನೇ ನಾವಿಕನಾಗಿ ಮಿಂಚಬೇಕು ಎನ್ನುವ ಏಕೈಕ ಉದ್ದೇಶ ಇದ್ದರೆ ಅವನತಿಗೆ ಅವನೇ ಮುನ್ನುಡಿ ಬರೆದಂತೆ. ಇದು ತನ್ನ ಕೊನೆಯ ಚುನಾವಣೆ ಎನ್ನುವುದು ಗೊತ್ತಿರುವುದರಿಂದ ರಾಜ್ಯ ಸರಕಾರದ ಖಜಾನೆಯಲ್ಲಿ ಇದ್ದಬದ್ದ ಹಣವನ್ನು ಮುಗಿಸಿ ತಾವು ರಾಜಕೀಯದ ವಾನಪ್ರಸ್ಥಕ್ಕೆ ಹೋಗುವ ಮನಸ್ಥಿತಿ ಸಿದ್ದುಜಿದು.

ಯಾವುದಕ್ಕೆಲ್ಲಾ ಬೆಲೆ ಜಾಸ್ತಿಯಾಗಿದೆ?

ಕಾಂಗ್ರೆಸ್ ಘೋಷಿಸಿರುವ ಎಲ್ಲಾ ಉಚಿತಗಳನ್ನು ಕೊಡಬೇಕಾದರೆ ಅದಕ್ಕೆ ಬೇರೆಡೆಯಿಂದ ಹಣವನ್ನು ಹೊಂದಿಸಬೇಕಾಗುತ್ತದೆ. ಆ ಬೇರೆಡೆಯಿಂದ ಹಣ ಹೊಂದಿಸುವುದು ಹೇಗೆ? ಇದ್ದಬದ್ದ ವಸ್ತುಗಳಿಗೆಲ್ಲ ಬೆಲೆ ಹೆಚ್ಚಿಸಬೇಕಾಗುತ್ತದೆ. ಅವುಗಳಿಗೆಲ್ಲಾ ಎಂಟಾಣೆ, ಎಪ್ಪತ್ತೈದು ಪೈಸೆ ಹೆಚ್ಚು ಮಾಡಿದರೆ ಸಾಕಾಗುವುದಿಲ್ಲ. ಭರ್ತಿ ಹಣ ಹೆಚ್ಚು ಮಾಡಬೇಕಾಗುತ್ತದೆ. ಹಾಗೇ ಹೆಚ್ಚು ಮಾಡಿಸಿಕೊಂಡ ಕ್ಷೇತ್ರಗಳಲ್ಲಿ ಒಂದು ಸಾರಿಗೆ. ಒಂದು ಕಡೆಯಲ್ಲಿ ಮಹಿಳೆಯರಿಗೆ ಕೆಂಪು ಬಸ್ಸುಗಳಲ್ಲಿ ಪ್ರಯಾಣ ಫ್ರೀ ಮಾಡಿರಬಹುದು. ಇನ್ನೊಂದು ಕಡೆಯಲ್ಲಿ ಸರಕಾರದ ಬೇರೆ ಬಸ್ಸುಗಳಿಗೆ (ಕೆಂಪು ಬಿಟ್ಟು) ದರ ಜಾಸ್ತಿ ಮಾಡಲಾಗಿದೆ. ರಾಜಹಂಸ, ಸ್ಲೀಪರ್ ಎಸಿ/ನಾನ್ ಎಸಿ, ವೋಲ್ವೋಗಳಾದ ಐರಾವತ, ಅಂಬಾರಿ, ಉತ್ಸವ್ ಹೀಗೆ ಬಸ್ಸುಗಳ ಟಿಕೆಟ್ ದರ ಮಂಗಳೂರು- ಬೆಂಗಳೂರು ಸರಾಸರಿ ಪ್ರತಿ ಟಿಕೆಟಿಗೆ ಇನ್ನೂರು ರೂಪಾಯಿಗೂ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ. ಒಂದು ಕಡೆಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದು. ಇಷ್ಟೇ ಅಲ್ಲ, ಹಾಲಿನ ದರವನ್ನು ಲೀಟರಿಗೆ ಐದು ರೂಪಾಯಿ ಹೆಚ್ಚಿಸುವ ಪ್ರಸ್ತಾಪವೂ ಸರಕಾರದ ಮುಂದೆ ಇದೆ. ಈಗ ಕಾಂಗ್ರೆಸ್ ಸರಕಾರ ಇದಕ್ಕೆ ಅಸ್ತು ಎಂದರೆ ಹಾಲಿನ ಬೆಲೆ ಕೂಡ ಹೆಚ್ಚಳವಾಗುತ್ತದೆ. ನಂತರ ನಾವು ಹೆಚ್ಚಿಸಿದ್ದಲ್ಲ. ಹಾಲು ಉತ್ಪಾದಕ ಮಹಾಮಂಡಲದವರು ಎಂದು ಸಿದ್ದು ಹೇಳಿದರೂ ಹೇಳಬಹುದು. ಈಗ ವಿದ್ಯುತ್ ದರದ ವಿಷಯದಲ್ಲಿ ನಾವು ಹೆಚ್ಚಿಸಿದ್ದಲ್ಲ, ವಿದ್ಯುತ್ ಬೋರ್ಡಿನವರು ಎಂದು ಹೇಳುತ್ತಿದ್ದಾರಲ್ಲ, ಹಾಗೆ ಹೈನುಗಾರರಿಗೆ ನೀಡುವ ಪ್ರೋತ್ಸಾಹಧನವನ್ನು ಕೂಡ ಸರಕಾರ ಒಂದೂವರೆ ರೂಪಾಯಿ ಇಳಿಸಿದೆ. ಕೇಳಿದರೆ ಅದು ಬೇಸಿಗೆ ಸಮಯದಲ್ಲಿ ಮಾತ್ರ ನೀಡುವ ಕ್ರಮ ಎನ್ನುವ ಅರ್ಥದ ಮಾತುಗಳನ್ನು ಹೇಳುತ್ತಿದೆ. ಸಾರಿಗೆ, ಹಾಲು ನಂತರ ವಿದ್ಯುತ್ ದರದ ವಿಷಯಕ್ಕೆ ಬರುವುದಾದರೆ ಅದು ಈಗಾಗಲೇ ಹೆಚ್ಚಳವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. 11 ಜಿಲ್ಲೆಗಳ ಕೈಗಾರಿಕೆಗಳು ಮುಷ್ಕರ ಹೂಡಿವೆ. ರಾಜ್ಯದಲ್ಲಿ ಇದು ಹೀಗೆ ಮುಂದುವರೆದರೆ ಅಭಿವೃದ್ಧಿ ಕುಂಠಿತವಾಗುವುದರಲ್ಲಿ ಸಂಶಯವಿಲ್ಲ. ಹಿಂದೆ ವಿದ್ಯುತ್ ದರ ಇದ್ದ ಸ್ಲ್ಯಾಬ್ ಪದ್ಧತಿಯಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತಿತ್ತು. ಈಗ ಹಿಂದಿನ ಸ್ಲ್ಯಾಬ್ ದರ ತೆಗೆದುಹಾಕಿ ಹೊಸ ಸ್ಲ್ಯಾಬ್ ದರ ಅನುಷ್ಟಾನಕ್ಕೆ ತರಲಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗಿದೆ.

ಕಾಂಗ್ರೆಸ್ ತನ್ನ ಸುಖವನ್ನು ಬಿಡಲಿ!

ನೀವು ಉಚಿತ ಘೋಷಣೆಗಳನ್ನು ಅನುಷ್ಠಾನ ಮಾಡುವಾಗ ಅದರ ಸೈಡ್ ಎಫೆಕ್ಟ್ ಗಳ ಬಗ್ಗೆನೂ ಗಮನಿಸಬೇಕು. ಯಾಕೆಂದರೆ ಈ ದೇಶದ ಒಬ್ಬ ಮಧ್ಯಮ ವರ್ಗದ ಉದ್ಯೋಗಿಯ ಸರಾಸರಿ ವರಮಾನ ಹೆಚ್ಚು ಕಡಿಮೆ ಅನೇಕ ವರ್ಷಗಳ ತನಕ ಒಂದೇ ಇರುತ್ತದೆ. ಒಬ್ಬ ತಿಂಗಳಿಗೆ ಇಪ್ಪತ್ತು ಸಾವಿರ ದುಡಿಯುತ್ತಿದ್ದರೆ ನೀವು ಮಹಿಳೆಯರಿಗೆ ಕೆಲವು ಬಸ್ ಗಳಲ್ಲಿ ಫ್ರೀ ಟಿಕೆಟ್ ಮಾಡಿ ಇತ್ತ ಹಾಲಿನ ದರ 5 ರೂ ಹೆಚ್ಚಿಸಿದರೆ ಅದರ ಹೊರೆ ಕಡಿಮೆ ಏನಲ್ಲ. ಅತ್ತ ಕೆಲವು ಮನೆಗಳಿಗೆ 200 ಯೂನಿಟ್ ತನಕ ವಿದ್ಯುತ್ ಫ್ರೀ ಮಾಡಿ ಬೇರೆ ಕಡೆ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿದರೆ ಅದರಿಂದ ಮಧ್ಯಮ ವರ್ಗದವನಿಗೆ ಆಗುವ ನಷ್ಟ ಬೇರೆಯದ್ದೇ ಆಯಾಮ ಪಡೆದುಕೊಂಡಿರುತ್ತದೆ. ರಾಜ್ಯ ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷರು ಈಗಾಗಲೇ ಮಾಧ್ಯಮಗಳಿಗೆ ತಮ್ಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ತಾವು ಕಾಫಿ, ಟೀ ಮತ್ತು ಆಹಾರ ವಸ್ತುಗಳ ಬೆಲೆಯನ್ನು ಹೆಚ್ಚಿಸುವ ಅನಿವಾರ್ಯತೆಯನ್ನು ರಾಜ್ಯ ಸರಕಾರ ತಂದಿಟ್ಟಿದೆ ಎಂದು ಹೇಳಿದೆ. ಯಾಕೆಂದರೆ ಹೋಟೇಲುಗಳಿಗೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ. ಹಾಲಿನ ದರ ಜಾಸ್ತಿಯಾಗಲಿದೆ. ಇದರೊಂದಿಗೆ ನಿತ್ಯದ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗುತ್ತಿದೆ. ಮಧ್ಯಮ ವರ್ಗದವರ ಸಂಬಳ ಮಾತ್ರ ಇಷ್ಟೇ ಇದೆ. ಯಾರನ್ನೋ ಖುಷಿ ಮಾಡಲು ಇನ್ಯಾರನ್ನೋ ಬೋಳಿಸುವುದು ಸರಿಯಲ್ಲ. ಇದರ ಬದಲಿಗೆ ಕಾಂಗ್ರೆಸ್ ಸರಕಾರ ಒಂದು ಮಾಡಬಹುದು. ಹೇಗೂ ತಾವು ರಾಜ್ಯದ ಜನರ ಉದ್ಧಾರಕ್ಕಾಗಿ ಅಧಿಕಾರಕ್ಕೆ ಬಂದವರು. ನಿಮ್ಮ ವಿಧಾನಸಭೆ, ವಿಧಾನಪರಿಷತ್ ಅಷ್ಟೂ ಶಾಸಕರುಗಳ ವೇತನದಿಂದ ಹಿಡಿದು ಅಷ್ಟೂ ಭತ್ಯೆಗಳನ್ನು ಕೈಬಿಡಲಿ. ಮಾಜಿ ಕಾಂಗ್ರೆಸ್ ಶಾಸಕರುಗಳು ಕೂಡ ಇದನ್ನು ಅನುಸರಿಸಲಿ. ಆಗ ಸ್ವಲ್ಪ ಹೊರೆ ರಾಜ್ಯದ ಮೇಲೆ ಕಡಿಮೆಯಾಗುತ್ತದೆ. ಆಗುತ್ತಾ

0
Shares
  • Share On Facebook
  • Tweet It




Trending Now
ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
Hanumantha Kamath October 22, 2025
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
Hanumantha Kamath October 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
  • Popular Posts

    • 1
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 2
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • 3
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search