• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸುಳ್ಳನ್ನು ಹರಡಿಸುವವರು ಸಂವಿಧಾನ ವಿರೋಧಿ!

Hanumantha Kamath Posted On July 1, 2023
0


0
Shares
  • Share On Facebook
  • Tweet It

ಸಮಾನ ನಾಗರಿಕ ಸಂಹಿತೆಯನ್ನು ನಾವು ವಿರೋಧಿಸಿದರೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರಕ್ಕೆ ಚುನಾವಣೆಯಲ್ಲಿ ಮತ ಧ್ರುವಿಕರಣವಾಗಿ ಲಾಭವಾಗುತ್ತದೆ. ಆದ್ದರಿಂದ ತಟಸ್ಥ ನಿಲುವನ್ನು ತೆಗೆದುಕೊಳ್ಳೋಣ ಎಂದು ಮುಸ್ಲಿಂ ಸಮುದಾಯದ ಪರಮೋಚ್ಚ ಮಂಡಳಿ ಸೆಂಟ್ರಲ್ ಮುಸ್ಲಿಂ ಕಮಿಟಿ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ. ಅವರು ಯಾರಿಗೋ ಲಾಭವಾಗುತ್ತೆ ಎಂದು ಸುಮ್ಮನೆ ಕೂರುತ್ತಾರೆ ಎಂದು ನಂಬುವುದೇ ಮೂರ್ಖತನ. ಇಲ್ಲಿ ಲಾಭ, ನಷ್ಟದ ವಿಷಯ ಬರುವುದೇ ಇಲ್ಲ. ಯುಸಿಸಿ ಜಾರಿಗೆ ಬರುವುದರಿಂದ ಈ ದೇಶಕ್ಕೆ ಲಾಭ ಇದೆ ಎನ್ನುವುದು ಸತ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದರಿಂದ ಮುಸ್ಲಿಮರಿಗಾಗಲಿ, ಕ್ರೈಸ್ತರಿಗಾಗಲಿ ನಷ್ಟವಿಲ್ಲ ಎನ್ನುವುದು ಕೂಡ ಅಪ್ಪಟ ನಿಜ. ಆದರೆ ಸಮಾನ ನಾಗರಿಕ ಸಂಹಿತೆಯಿಂದ ತಮ್ಮ ಹಕ್ಕುಗಳು ನಾಶವಾಗುತ್ತವೆ ಎನ್ನುವ ಭ್ರಮೆಯನ್ನು ಹಿಂದೆ ಮುಸ್ಲಿಮ್ ಸಮುದಾಯದ ಮನಸ್ಸಿನಲ್ಲಿ ಕೆಲವರು ತುಂಬಿದ್ದರು. ಅದರಿಂದ ಈಗ ಮುಸ್ಲಿಂ ಸಮುದಾಯ ಹೊರಗೆ ಬಂದಿರಬಹುದು ಎಂದು ಅನಿಸುತ್ತದೆ. ಯಾಕೆಂದರೆ ಸಂವಿಧಾನವನ್ನು ರಚಿಸುವಾಗ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೂಡ ಯುಸಿಸಿ ಪರವಾಗಿಯೇ ಇದ್ರು. ಈ ಕಾನೂನು ಜಾರಿಯಾಗಲೇಬೇಕೆಂದು ಆಗ್ರಹಿಸಿದ್ದರು. ಆದರೆ ಆಗ ಇದಕ್ಕೆ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಕೆಲವು ಮುಸ್ಲಿಂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಅವರು ನೀಡಿದ್ದ ಕಾರಣ ಈಗ ನಮ್ಮ ಸಮುದಾಯ ಯುಸಿಸಿಯನ್ನು ಒಪ್ಪಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಮಾನಸಿಕವಾಗಿ ತಯಾರಾಗಿಲ್ಲ ಎನ್ನುವುದೇ ವಾದವಾಗಿತ್ತು. ಈಗ 75 ವರ್ಷಗಳ ಬಳಿಕ ಮುಸ್ಲಿಂ ಸಮುದಾಯ ಯುಸಿಸಿಯನ್ನು ಸ್ವೀಕರಿಸಲು ಸಜ್ಜಾಗಿರುವಂತಿದೆ. ಆದರೂ ಕೆಲವು ಪಕ್ಷಗಳು ಮುಸ್ಲಿಂ ಸಮುದಾಯದಲ್ಲಿ ಗೊಂದಲವನ್ನು ಏರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಯುಸಿಸಿ ಬಂದರೆ ಮೀಸಲಾತಿ ಹೋಗುತ್ತದೆ ಎಂದು ಕೂಡ ಹೆದರಿಸುತ್ತಿದ್ದಾರೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಹೋದರೆ ಏನು ಎನ್ನುವ ಗುಮ್ಮವನ್ನು ಜನರಲ್ಲಿ ತುಂಬುವ ಕೆಲಸ ನಡೆಯುತ್ತಿದೆ. ಒಂದು ವಿಷಯವಂತೂ ಸ್ಪಷ್ಟ. ಯುಸಿಸಿಗೂ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಈ ಕಾನೂನು ಜಾರಿಗೆ ಬಂದರೆ ಮೀಸಲಾತಿಯ ಸಮೀಕರಣ ಬದಲಾಗುತ್ತೆ ಎನ್ನುವುದು ಒಂದು ಹುಸಿ ನಂಬಿಕೆಯಷ್ಟೇ.

ಸುಳ್ಳನ್ನು ಹರಡಿಸುವವರು ಸಂವಿಧಾನ ವಿರೋಧಿ!

ಯುಸಿಸಿಯಿಂದ ಮುಖ್ಯವಾಗಿ ಮದುವೆ, ವಿಚ್ಚೇದನ, ವಾರಿಸುದಾರಿಕೆ, ದತ್ತು ಸ್ವೀಕಾರ ಮತ್ತು ಆಸ್ತಿಯ ವಿಚಾರದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಪ್ರಸ್ತುತ ಈ ವಿಷಯಗಳಲ್ಲಿ ದೇಶದಲ್ಲಿ ಒಂದೇ ಕಾನೂನು ಇಲ್ಲ. ಯುಸಿಸಿ ಬಂದರೆ ಇದೆಲ್ಲವೂ ಒಂದೇ ಕಾನೂನಿನ ಅಡಿಯಲ್ಲಿ ಬರುತ್ತದೆ. ಹಾಗಂತ ಇದನ್ನು ಜಾರಿಗೆ ತರಲು ಬಿಜೆಪಿ ಸರಕಾರ ತುದಿಗಾಲಲ್ಲಿ ನಿಂತಿದೆ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. 1985 ರಲ್ಲಿಯೇ ಸುಪ್ರೀಂ ಕೋರ್ಟ್ ಈ ಕಾನೂನಿನ ರೂಪುರೇಶೆಗಳನ್ನು ಸಿದ್ಧಪಡಿಸುವಂತೆ ಆಗಿನ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ಆದರೆ ಆ ನಂತರ ಬಂದ ಯಾವುದೇ ಸರಕಾರಗಳು ಇದನ್ನು ಜಾರಿಗೆ ತರುವ ಧೈರ್ಯವನ್ನು ಮಾಡಿಯೇ ಇಲ್ಲ.
ಭಾರತದ ಸಂವಿಧಾನದ ಆರ್ಟಿಕಲ್ 44 ರ ಅಡಿಯಲ್ಲಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಹೇಳಲಾಗಿದೆ. ಆದ್ದರಿಂದ ಈ ಕಾನೂನು ಈಗ ಜಾರಿಗೆ ಬರುತ್ತಿರುವುದು ಸಂವಿಧಾನಕ್ಕೆ ಪೂರಕವಾಗಿದೆಯೇ ವಿನ: ಯಾವುದೇ ಕಾರಣಕ್ಕೂ ಸಂವಿಧಾನದ ವಿರೋಧಿಯಾಗಿಲ್ಲ. ಆದ್ದರಿಂದ ಈ ಕಾನೂನನ್ನು ವಿರೋಧಿಸುವವರು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ ಎಂದೇ ಅಂದುಕೊಳ್ಳಬಹುದು. ಗೋವಾದಲ್ಲಿ ಅಲ್ಲಿಯದ್ದೇ ಆದ ನಾಗರಿಕ ಸಂಹಿತೆ ಅಸ್ತಿತ್ವದಲ್ಲಿದೆ. ಈಗ ಯುಸಿಸಿ ಜಾರಿಗೆ ಬಂದರೆ ಗೋವಾವನ್ನು ಸೇರಿಸಿಕೊಂಡು ಇಡೀ ದೇಶದಲ್ಲಿ ಒಂದೇ ಸಂಹಿತೆ ಜಾರಿಗೆ ಬರಲಿದೆ.

ಕೇಂದ್ರದ ಮತ್ತೊಂದು ಮಾಸ್ಟರ್ ಸ್ಟೋಕ್!

ಭಾರತದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳಲ್ಲಿ ಅನೇಕ ಜಾತಿ, ಉಪಜಾತಿಗಳು ಇವೆ. ಇಂತಹ ಕಾನೂನು ಬಂದರೆ ಹಿಂದೂ, ಮುಸ್ಲಿಂ, ಕ್ರೈಸ್ತ ಸಹಿತ ಎಲ್ಲಾ ಧರ್ಮ, ಮತ, ಜಾತಿ, ಪಂಗಡಗಳಿಗೆ ಒಂದೇ ಕಾನೂನು ಅನ್ವಯಿಸಲಿದೆ. ಜಾತಿ, ಮತಗಳನ್ನು ಮೀರಿ, ಲಿಂಗ ಭೇದ ತೊರೆದು ಎಲ್ಲರೂ ಒಂದೇ ಕಾನೂನಿಗೆ ಬಾಧ್ಯರಾಗಿರಬೇಕಾಗುತ್ತದೆ. ಕೊನೆಗೂ ಕೇಂದ್ರ ಸರಕಾರ ಇಂತಹ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ತ್ರಿವಳಿ ತಲಾಖ್ ನಿಷೇಧ, ಆರ್ಟಿಕಲ್ 370 ರದ್ದು, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದಂತಹ ಮೂರು ಯಶಸ್ವಿ ಸಾಧನೆಗಳ ಬಳಿಕ ಬಾಕಿ ಇದ್ದ ಯೂನಿಫಾರಂ ಸಿವಿಲ್ ಕೋಡ್ ಜಾರಿಗೆ ತರುವ ಮೂಲಕ ಮೋದಿಯವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಪ್ರಮುಖ ಭರವಸೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾನೂನನ್ನು ಕೇಂದ್ರ ಸರಕಾರ ಒಮ್ಮಿಂದೊಮ್ಮೆಲ್ಲೆ ಜಾರಿಗೆ ತರುತ್ತಿಲ್ಲ. ಇದರ ಕುರಿತು ನಾಗರಿಕರ ಅಭಿಪ್ರಾಯವನ್ನು ಕೇಳಲಾಗಿದೆ. ದೇಶದ ಪ್ರಜೆಗಳು ತಮ್ಮ ಸಲಹೆ, ಆಕ್ಷೇಪಗಳನ್ನು ಅಥವಾ ಅಭಿಪ್ರಾಯಗಳನ್ನು ಕೇಂದ್ರ ಸರಕಾರಕ್ಕೆ ಬರೆದು ತಿಳಿಸಬಹುದು. ಅದರ ಮೇಲೆ ಸಂಸತ್ತಿನಲ್ಲಿ ಚರ್ಚೆಯಾಗಲಿದೆ. ಬಹುಶ: ಮುಂದಿನ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಬಹುದು. ಆ ನಂತರ ಚರ್ಚೆ ನಡೆದು ಅದು ಕಾಯ್ದೆಯ ಸ್ವರೂಪ ಪಡೆದುಕೊಳ್ಳುತ್ತದೆ. ಒಟ್ಟಿನಲ್ಲಿ ರಾಷ್ಟ್ರ ಸಧೃಡ ಶಕ್ತಿಯ ಕೈಯಲ್ಲಿದೆ. ಆದ್ದರಿಂದ ಯಾವ ಮತ, ಧರ್ಮದವರು ಕೂಡ ಹೆದರುವ ಅಗತ್ಯವಿಲ್ಲ. ಯಾಕೆಂದರೆ ಸಬ್ ಕಾ ವಿಕಾಸ್, ಸಬ್ ಕೆ ವಿಶ್ವಾಸ್ ಮೇಲೆ ಸರಕಾರ ನಡೆಯುತ್ತಿದೆ!

0
Shares
  • Share On Facebook
  • Tweet It




Trending Now
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
Hanumantha Kamath August 22, 2025
ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
Hanumantha Kamath August 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
  • Popular Posts

    • 1
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 2
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • 3
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 4
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 5
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!

  • Privacy Policy
  • Contact
© Tulunadu Infomedia.

Press enter/return to begin your search