• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಟೀಕೆ ಮಾಡಬೇಕಾದ್ರೂ ಅದರ ಬಗ್ಗೆ ಜ್ಞಾನ ಇರಬೇಕು!

ಸುಭಾಷ್ ಬಂಗಾರಪೇಟೆ Posted On August 8, 2023
0


0
Shares
  • Share On Facebook
  • Tweet It

#who_is_a_Hindu

1. ಹಿಂದೂ ಎಂದರೆ ಯಾರು.
2. ಹಿಂದೂ ಧರ್ಮದ ಸ್ಥಾಪಕ ಯಾರು.
3. ಹಿಂದೂ ಧರ್ಮ ಗ್ರಂಥಗಳು ಯಾವುವು
4. ಹಿಂದೂ ಧರ್ಮ ಯಾವಾಗ ಸ್ಥಾಪನೆ ಆಯಿತು.
5. ಹಿಂದೂ ಧರ್ಮದಲ್ಲಿ ದಲಿತರ ಸ್ಥಾನ ಏನು

ಇದು So called ವಿಚಾರವ್ಯಾಧಿ ಗ್ಯಾಂಗ್ ಯಾವಾಗಲೂ ಕೇಳುವ ಪ್ರಶ್ನೆಗಳು..

ಬನ್ನಿ ಇದಕ್ಕೆ ಉತ್ತರ ತಿಳಿಯೋಣ.

ದೇವರ ಅಸ್ತಿತ್ವದಲ್ಲಿ ನಂಬಿಕೆ ಇಟ್ಟು ಹಿಂದೂ ಧರ್ಮದ ಸಂಸ್ಕಾರಗಳನ್ನು ಅಳವಡಿಸಿಕೊಂಡು, ಈ ಧರ್ಮದ ಆಶಯದಂತೆ ಬದುಕು ನಡೆಸುತ್ತಿರುವ ಪ್ರತಿಯೊಬ್ಬನೂ ಹಿಂದುವೇ.

ಹಿಂದೂ ಧರ್ಮ ಒಬ್ಬರಿಂದ ಹುಟ್ಟಿದ್ದು ಅಲ್ಲವೇ ಅಲ್ಲ…

ಇದು ನಮ್ಮ ಸನಾತನ ಪರಂಪರೆಯ ಖುಷಿಗಳ ಅನುಭವದ ಪಾಠ, ಅವರು ಜೀವನ ಪರ್ಯಂತ ಮಾಡಿದ ಸಾಧನೆಗಳ ಫಲವಾಗಿ ಅವರು ಕಂಡುಕೊಂಡ ಕೆಲ ಸತ್ಯಗಳ ಮಾರ್ಗಸೂಚಿ.

ಹಿಂದೂ ಧರ್ಮಕ್ಕೆ ವೇದವೇ ಪರಮೋಚ್ಚ…,..

ಅಂತಹ ವೇದಗಳೇ ಸಾವಿರಾರು ವರ್ಷಗಳ ಕಾಲ Printed Book ಗಳೇ ಇಲ್ಲದೆ ಗುರು ಶಿಷ್ಯ ಪರಂಪರೆಯ ಮೂಲಕ ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಂದ ಬಾಯಿಗೆ ಹರಡಿ ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ….ಹಾಗಾಗಿ ವೇದಗಳನ್ನು ಶೃತಿಗಳು ಅಂತಲೂ ಕರೆಯುತ್ತಾರೆ.

ಈಗ ಆಚರಣೆಯಲ್ಲಿ ಇರುವುದು ವೇದಾಂತ ದರ್ಶನದ ಹಿಂದೂ ಧರ್ಮ……ವೇದಾಂತ ಎಂದರೆ ಉಪನಿಷತ್ತು…

ಉಪನಿಷತ್ತುಗಳನ್ನು ವೇದಾಂತ ಎಂದು ಯಾಕೆ ಕರೆಯುತ್ತಾರೆಂದರೆ ಉಪನಿಷತ್ತುಗಳು ವೇದ ಸಾಹಿತ್ಯಕ್ಕೆ Add ಆದ ಕೊನೆಯ ಭಾಗಗಳು ಆಮೇಲೆ ವೇದ ಸಾಹಿತ್ಯ ಬೆಳೆಯಲಿಲ್ಲ….

ಇಂತಹ ವೇದಾಂತ ದರ್ಶನದ ಹಿಂದೂ ಧರ್ಮಕ್ಕೆ ಮುಖ್ಯವಾದವು ಮೂರು ಗ್ರಂಥಗಳು…

ಅವುಗಳನ್ನು ಪ್ರಸ್ಥಾನತ್ರಯಗಳು ಎನ್ನುತ್ತಾರೆ…

ಆ ಮೂರು ಗ್ರಂಥಗಳನ್ನು ಪ್ರಸ್ಥಾನಪ್ರಯಗಳು ಎಂದು ಗುರುತಿಸಿದವರು ಶಂಕರಾಚಾರ್ಯರು.

ಪ್ರಸ್ಥಾನಪ್ರಯಗಳು ಯಾವುದೆಂದೆರೆ

1. ಉಪನಿಷತ್ತು.
2. ಬ್ರಹ್ಮಸೂತ್ರಗಳು
3. ಭಗವದ್ಗೀತೆ.

ಉಪನಿಷತ್ತುಗಳು ವೇದ ಸಾಹಿತ್ಯದ ಭಾಗ..‌ ವೇದಸಾಹಿತ್ಯ ಯಾರೋ ಒಬ್ಬರಿಂದ ಹುಟ್ಡಿದ್ದಲ್ಲ…..‌ ಅದು ನಮ್ಮ ಖುಷಿ ಪರಂಪರೆಯ ಅನುಭವದ ಸಾರ ( ಜನಪದ ಸಾಹಿತ್ಯದಂತೆ)

ಬ್ರಹ್ಮಸೂತ್ರಗಳನ್ನು ಬರೆದವರು ಖುಷಿ ಬಾದರಾಯಣರು…

ಇದರಲ್ಲಿ ಆತ್ಮ ಮತ್ತು ಪರಮಾತ್ಮ ( ಬ್ರಹ್ಮ) ದ ಬಗೆಗಿನ ವಿಚಾರಗಳು ಇವೆ…ಬ್ರಹ್ಮ ಎಂದರೆ ಚತುರ್ಮುಖ ಬ್ರಹ್ಮ ಅಲ್ಲ…. ಪರಬ್ರಹ್ಮ…… ಅಂದರೆ ಈ ಜಗತ್ತಿನ ಎಲ್ಲದಕ್ಕೂ ಕಾರಣವಾದ ಚೈತನ್ಯ ಶಕ್ತಿ.

ಇನ್ನು ಭಗವದ್ಗೀತೆ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ್ದು..

ಇದು ಕೇವಲ ವೇದಾಂತ ದರ್ಶನದ ಹಿಂದೂ ಧರ್ಮ…

ವೇದಾಂತ ದರ್ಶನದ ಕಾಲ ಶುರುವಾಗೋದಕ್ಕೂ ಮೊದಲು ಕಾಲಕ್ರಮದಲ್ಲಿ ಐದು ದರ್ಶನಗಳನ್ನು ಗುರುತಿಸಲಾಗಿದೆ… ( ದರ್ಶನ ಎಂದರೆ View point)

ಆ ಐದು ದರ್ಶನಗಳು ಈ ಕೆಳಗಿನಂತೆ ಇವೆ.

1. ಸಾಂಖ್ಯ
2. ಯೋಗ.
3. ನ್ಯಾಯ.
4. ವೈಶೇಷಿಕ
5. ಮೀಮಾಂಸೆ ( ಪೂರ್ವ ಮೀಮಾಂಸೆ)

ಇದರ ನಂತರ ಶುರುವಾದದ್ದು ವೇದಾಂತ ದರ್ಶನ… ಅಲ್ಲಿಗೆ ಹಿಂದೂ ಧರ್ಮ ಎಷ್ಟು ಹಳೆಯದ್ದು ಮತ್ತು ಎಷ್ಟೆಲ್ಲಾ ವೈವಿಧ್ಯಮಯ ಚಿಂತನೆಗಳು ಹಿಂದೂ ಧರ್ಮದಲ್ಲಿ ಇದ್ದವು ಮತ್ತು ಇದೆ ಮತ್ತು ಇದೆ ಎಂಬುದನ್ನು ಊಹಿಸಿ.

ದಲಿತರೂ ಹಿಂದುಗಳೇ..‌ ಅದರಲ್ಲಿ ನಮಗ್ಯಾರಿಗೂ ಸಂದೇಹ ಇಲ್ಲ…‌ ಇರೋದು ನಿಮಗೆ….

ಆ ಸಂದೇಹ ನಮಗೆ ಇಲ್ಲದಿರೋದಕ್ಕೇ ದಲಿತ ಸಮುದಾಯದ ವೇಣುಗೋಪಾಲ ಯುವಾ ಬ್ರಿಗೇಡ್ ನ ತಾಲ್ಲೂಕು ಸಂಚಾಲಕ ಆಗಿದ್ದಿದ್ದು.

ನಾನು ಈ ಮೊದಲೇ ಹೇಳಿದೆ… ಹಿಂದೂ ಧರ್ಮದಲ್ಲಿ ವೇದವೇ ಪರಮೋಚ್ಚ ಆಂತ ಮತ್ತು ಆ ವೇದ ಸಾಹಿತ್ಯ ಜನಪದ ಸಾಹಿತ್ಯದಂತೆ ಅನುಭವದ ಆಧಾರದಲ್ಲಿ ಹುಟ್ಟಿದ್ದು ಅಂತ So ಹಿಂದೂ ಧರ್ಮ ಯಾವಾಗ ಹುಟ್ಟಿತು ಮತ್ತು ಯಾರಿಂದ ಹುಟ್ಟಿತು ಅನ್ನೋದು ಪರಮ ಅಜ್ಞಾನದ ಮತ್ತು ಮೂರ್ಖತನದ ಪ್ರಶ್ನೆ…..

ಇದೆಲ್ಲವೂ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡಿದ ಚಿಕ್ಕ ಮಗುವಿಗೂ ಗೊತ್ತಿರುತ್ತದೆ

ಆದರೆ ನನಗೆ ಗೊತ್ತಿದೆ.. ವಿಚಾರವ್ಯಾಧಿಗಳಿಗೆ ಇದ್ಯಾವುದರ ಬಗ್ಗೆಯೂ ಮಾಹಿತಿ ಇರೋದಿಲ್ಲ.. ಮತ್ತು ಬಹುಶಃ ಅವರು ತಮ್ಮ ಜೀವನದಲ್ಲಿ ಇದೆಲ್ಲದರ ಬಗ್ಗೆ ಕೇಳುತ್ತಿರುವುದೇ ಇದೇ ಮೊದಲು ಅಂತ…..

ಆದರೂ ಇದ್ಯಾವುದೂ ಗೊತ್ತಿಲ್ಲದೆಯೇ ನನಗೆ ಹಿಂದೂ ಧರ್ಮ ಬಗ್ಗೆ ಎಲ್ಲಾ ಗೊತ್ತು ಅಂದುಕೊಂಡು ಹಿಂದೂ ಧರ್ಮವನ್ನು ನಿಂದಿಸುತ್ತಾರೆ.

ಯಾವುದಾದರೂ ವಿಚಾರವನ್ನು ಟೀಕೆ ಮಾಡಬೇಕಾದ್ರೂ ಅದರ ಬಗ್ಗೆ ಜ್ಞಾನ ಇರಬೇಕು ಅಲ್ವಾ…?

ಗೊತ್ತಿಲ್ಲದಿದ್ದರೆ ಕೇಳಬಹುದು… ಹೇಳಿಕೊಡ್ತೀವಿ… ಸಾಕಷ್ಟು Open Source ಇದೆ ಅಧ್ಯಯನ ಮಾಡಬಹುದು.

ಏನೂ ಗೊತ್ತಿಲ್ಲದೆ ನಮಗೇ ಎಲ್ಲ ಗೊತ್ತಿದೆ ಅಂದುಕೊಳ್ಳೋದು ಪರಮ ಮೂರ್ಖತನ.

 

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
ಸುಭಾಷ್ ಬಂಗಾರಪೇಟೆ July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
ಸುಭಾಷ್ ಬಂಗಾರಪೇಟೆ July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search