• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಅಲ್ಪ ಸಂಖ್ಯಾತರಿಗೆ ಸಿಗುವ ಸೌಲಭ್ಯ ಬ್ರಾಹ್ಮಣರಿಗೆ ಸಿಗುತ್ತಿಲ್ಲ!

ಸಂತೋಷ್ ಕುಮಾರ್ ಮುದ್ರಾಡಿ Posted On August 19, 2023
0


0
Shares
  • Share On Facebook
  • Tweet It

ರಾಜಕೀಯದ ಆಟಕ್ಕೆ ಬಲಿಯಾಗಿ ಬ್ರಾಹ್ಮಣರ ಬಹುಪಾಲು ಆಸ್ತಿ ಪಾಸ್ತಿಗಳು ಪರರ ಸ್ವತ್ತಾಗಿದೆ. ಕಳೆದುಕೊಂಡವರು ಇವತ್ತಿಗೂ ಕೂಡ ಎಲ್ಲೆಲ್ಲಿಯೋ ನಿರ್ಗತಿಗರಾಗಿ ಬದುಕುತ್ತಿದ್ದಾರೆ. ಪಡೆದುಕೊಂಡವರಾದರೂ ಉಳಿಸಿಕೊಂಡರೆ, ಅದೂ ಇಲ್ಲ. ಅದನ್ನು ಮಾರಿ ಪೇಟೆಗೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಸಿಗುವ ಮನೆಯನ್ನು ಕನಿಷ್ಠ ಪಕ್ಷದಲ್ಲಿ 15 ವರ್ಷ ಆತನಿಗೆ ಮಾರುವ ಅಧಿಕಾರವನ್ನು ಸರ್ಕಾರ ಕೊಡುವುದಿಲ್ಲ. ಆದರೆ ಇಲ್ಲಿ ಅದ್ಯಾವ ಕಾನೂನು ಕೂಡ ಅನ್ವಯವಾಗುವುದಿಲ್ಲ. ಅದೆಷ್ಟೋ ಊರುಗಳಲ್ಲಿ ಬ್ರಾಹ್ಮಣರಿಗೆ ಈಗ ಕೃಷಿಗಳೇ ನಿಂತು ಹೋಗಿದೆ. ಉಳಿಸಿಕೊಂಡ ಕೆಲವಷ್ಟು ಬ್ರಾಹ್ಮಣರು ಈಗಲೂ ಕೂಡ ಕೃಷಿಯ ಮೂಲಕ ಜೀವಿಸುತ್ತಿದ್ದಾರೆ. ಆದರೆ ಜಾಗವನ್ನು ಕಳೆದುಕೊಂಡ ಬಹು ಸಂಖ್ಯಾತ ಬ್ರಾಹ್ಮಣರು ಕೃಷಿ ಕೂಡ ಮಾಡಲಾಗದೆ ಬಡತನದಿಂದ ಯಾವ್ಯಾವ್ದೋ ಊರಿಗೆ ಹೋಗಿ ಕನಿಷ್ಠ ಮಟ್ಟದ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಅನುಭವದಿಂದ ಕಂಡುಕೊಂಡ ಸತ್ಯ.

ಇವತ್ತಿಗೆ ಕೇವಲ ಬ್ರಾಹ್ಮಣ ಸಮಾಜ ಮಾತ್ರ ಯಾವುದೋ ಕಾಲಘಟ್ಟದ ಒಂದೆರಡು ಘಟನೆಗಳನ್ನು ಹಿಡಿದುಕೊಂಡು ಈಗಲೂ ಕೂಡ ಬೈಗುಳವನ್ನು ತಿನ್ನುತ್ತಾ ಪ್ರಾಯಶ್ಚಿತ್ತವನ್ನು ಅನುಭವಿಸಿಕೊಳ್ಳುತ್ತಿರುವುದು. ಮತಾಂತರ, ಕೊಲೆ, ದರೋಡೆ, ಅತ್ಯಾಚಾರದ ಪರಂಪರೆಯುಳ್ಳವರು ಮೀಸೆ ತಿರುಗಿಸಿ ಹೆಮ್ಮೆಯಿಂದ ಬದುಕುತ್ತಿದ್ದಾರೆ. ಕಳೆದ ಸಾವಿರಾರು ವರ್ಷಗಳಿಂದ ತಮ್ಮ ಮತ ವಿಸ್ತಾರಕ್ಕಾಗಿ ಅನೇಕ ದೌರ್ಜನ್ಯಗಳನ್ನು ಹಾಗೂ ಇತಿಹಾಸದುದ್ದಕ್ಕೂ ಕಡಿದು ಕೊಂದ ಸತ್ಯ ಕಥೆಗಳು ನಮ್ಮ ಕಣ್ಣ ಮುಂದೆ ಇದೆ. ಆರ್ಯ ದ್ರಾವಿಡ ಎನ್ನುವ ಸುಳ್ಳು ಸಿದ್ಧಾಂತದಿಂದ ದೇಶವನ್ನು ಒಡೆದವರು ಈಗಲೂ ಮೆರೆದು ಬಾಳುತ್ತಿದ್ದಾರೆ. ಆದರೆ ಕಮ್ಯುನಿಸ್ಟ್ ಪ್ರೇರಿತ ಈ ದಲಿತಪರ ಹೋರಾಟಗಾರರಿಗೆ ಎದ್ದು ಕಾಣುವುದು ಹಾಗೂ ಹಗಲು ರಾತ್ರಿ ಅವರನ್ನು ಕಾಡುವುದು ಬ್ರಾಹ್ಮಣ ದೌರ್ಜನ್ಯ ಹಾಗೂ ಬ್ರಾಹ್ಮಣ್ಯದ ಹೇರಿಕೆ ಮಾತ್ರ.

ವಸ್ತುನಿಷ್ಠವಾಗಿ ವಿಮರ್ಶಿಸಲು ಹೊರಟರೆ ಇವತ್ತು ಬ್ರಾಹ್ಮಣ ಸಮಾಜ ಅಲ್ಪಸಂಖ್ಯಾತ ಸಮಾಜ. ಆದರೂ ಬ್ರಾಹ್ಮಣರಿಗೆ ಸರಕಾರದಿಂದ ಯಾವ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಆ ಸೌಲಭ್ಯಕ್ಕಾಗಿ ಈ ಸಮಾಜ ಕೈ ಕೂಡ ಚಾಚಲಿಲ್ಲ. ಸರಕಾರದ ಒಂದು ನೀತಿಯಿಂದ ತನ್ನ ಬಹುಪಾಲು ಸಂಪತ್ತನ್ನು ಕಳೆದುಕೊಂಡರು ಕೂಡ ಯಾವ ಮೀಸಲಾತಿಗೂ ಒಂದು ಬಾರಿಯೂ ಪ್ರಯತ್ನಪಡದೆ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿರುವ ಏಕೈಕ ಸಮಾಜ ಅದು ಬ್ರಾಹ್ಮಣ ಸಮಾಜ.

ಇವತ್ತು ಹಿಂದುಗಳಲ್ಲಿ ಎಲ್ಲಾ ಜಾತಿಗಳ ಜನಸಂಖ್ಯೆ ಕೂಡ ಕಡಿಮೆಯಾಗುತ್ತಿರುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಬೆಳೆಯುತ್ತಿರುವ ಜೀವನ ಶೈಲಿ ಹಾಗೂ ಖರ್ಚು ವೆಚ್ಚಕ್ಕೆ ತನ್ನನ್ನು ತಾನು ಒಡ್ಡಿಕೊಂಡ ಹಿಂದೂ,ತನ್ನ ಮಕ್ಕಳ ವಿಚಾರದಲ್ಲಿ ತಾನು ತಾನಾಗಿಯೇ ಒಂದೆರಡರಲ್ಲಿ ಕಟ್ಟಲ್ಪಟ್ಟಿಕೊಂಡಿದ್ದಾನೆ. ಅದರಲ್ಲೂ ಬ್ರಾಹ್ಮಣರಂತು ಕೇವಲ ಎರಡು ಶೇಕಡರಷ್ಟಕ್ಕೆ ಬಂದು ನಿಂತಿದ್ದಾರೆ. ಇವರು ಈಗಲೂ ಕೂಡ ಉಳಿದ ಎಲ್ಲಾ ಸಮಾಜದವರನ್ನು ಆಳುತ್ತಿದ್ದಾರೆ ಎಂದರೆ ನಂಬಬೇಕೆ. ಅಷ್ಟಕ್ಕೂ ಬ್ರಾಹ್ಮಣರಲ್ಲಿ ಎಲ್ಲರೂ ಕೂಡ ಶ್ರೀಮಂತರಿಲ್ಲ, ಹಾಗೂ ಎಲ್ಲರೂ ವಿದ್ಯಾವಂತರು ಕೂಡ ಅಲ್ಲವೇ ಅಲ್ಲ.

ಇವತ್ತು ಉತ್ತರ ಭಾರತದ ಬಹುತೇಕ ಕಡೆಯಲ್ಲಿ ಶೌಚಾಲಯದಲ್ಲಿ, ರಿಕ್ಷಾಗಳಲ್ಲಿ, ಅನೇಕ ರೈಲು ನಿಲ್ದಾಣದ ಕೂಲಿ ಕಾರ್ಮಿಕರುಗಳಲ್ಲಿ ಬ್ರಾಹ್ಮಣರ ಸಂಖ್ಯೆ ಬಹುತೇಕವಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಅಲ್ಪಸಂಖ್ಯಾತರಾಗಿಯೂ ಹಾಗೂ ದಲಿತರಿಗಿಂತಲೂ ನಿಕೃಷ್ಟವಾಗಿ ಬದುಕು ಸಾಧಿಸುತ್ತಿರುವವರು ಬ್ರಾಹ್ಮಣರು. ಏಕೆಂದರೆ ಯಾವ ರಾಜ್ಯಗಳಲ್ಲಿಯೂ ಬ್ರಾಹ್ಮಣರಿಗೆ ಯಾವ ಸೌಲಭ್ಯವನ್ನು ಯಾವ ಮೀಸಲಾತಿಯನ್ನು ಕೂಡ ಯಾವುದೇ ಸರಕಾರ ಕೊಡಲಿಲ್ಲ. ಇದಕ್ಕಿರುವ ಏಕೈಕ ಕಾರಣ ಇವರು ಅಲ್ಪಸಂಖ್ಯಾತರು ಎನ್ನುವುದೇ ಆಗಿದೆ. ಇವರ ಓಲೈಕೆಯ ಅವಶ್ಯಕತೆ ಯಾವ ಪಕ್ಷಕ್ಕೂ ಅಗತ್ಯವಿಲ್ಲ. ಈ ವಿಚಾರ ಮೀಸಲಾತಿಯನ್ನು ಅನುಭವಿಸಿ ತಿಂದು ತೇಗಿ ಕೂಗುವ ಹೋರಾಟಗಾರರಿಗೆ ಗೊತ್ತಾಗುವುದಿಲ್ಲ ಎನ್ನುವುದು ಖಂಡಿತ ಸುಳ್ಳು. ಗೊತ್ತಾದರೂ ಅವರು ದೂರುತ್ತಾರೆ, ಏಕೆಂದರೆ ತಮ್ಮ ಧೈರ್ಯವನ್ನು ಕುರಿಗಳ ಮುಂದೆ ತೋರಿಸುವ ತೋಳದಂತೆ ಇವರ ಪರಿಸ್ಥಿತಿ.

ವರ್ಣಗಳಲ್ಲಿ ಕೇವಲ ಬ್ರಾಹ್ಮಣರು ಮಾತ್ರವಲ್ಲ ಕ್ಷತ್ರಿಯರ ದೌರ್ಜನ್ಯಗಳು ಹಾಗೂ ಅಸ್ಪೃಶ್ಯತೆಯ ವಿಚಾರವಾಗಿರುವ ಬೇಕಾದಷ್ಟು ಸಂಗತಿಗಳು ನಡೆದಿದೆ ಹಾಗೆಂದು ಒಂದು ಬಾರಿ ಕೂಡ ಅಪ್ಪಿ ತಪ್ಪಿಯು ಇವರು ಅವರ ಗೋಜಿಗೆ ಹೋಗುವುದಿಲ್ಲ. ಹೇಳಿದರೆ ಆ ಕೂಡಲೇ ಅವರೆಲ್ಲರೂ ಸಂಘಟಿತರಾದರೆ ಇವರ ಬೆನ್ನುಮೂಳೆ ಕೂಡಲೆ ಮುರಿಯುತ್ತದೆ. ಹಾಗೆಯೇ ವ್ಯಾಪಾರಿ ವೈಶ್ಯರ ಮೋಸದ ಕಥೆಗಳು ಕೂಡ ಅಷ್ಟೇ ಮಟ್ಟಿಗಿದೆ. ಅಲ್ಲಿಯೂ ಇವರು ತಲೆ ಹಾಕುವುದಿಲ್ಲ. ಆ ವಿಚಾರ ಮಾತಾಡಿದರೆ ಇವರ ಗಂಜಿಗೆ ಕಲ್ಲು ಬೀಳುತ್ತದೆ. ಇವರು ಬೊಬ್ಬಿಡುವ ಅಸ್ಪೃಶ್ಯತೆಗೆ ಬ್ರಾಹ್ಮಣರು ಮಾತ್ರ ಕಾರಣರಲ್ಲ!!

(Continued )

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
ಸಂತೋಷ್ ಕುಮಾರ್ ಮುದ್ರಾಡಿ September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
ಸಂತೋಷ್ ಕುಮಾರ್ ಮುದ್ರಾಡಿ September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search