• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಟೂರಿಸ್ಟ್ ವೀಸಾದಲ್ಲಿ ಬಿಜೆಪಿಗೆ ಬಂದವರು ಹಿಂತಿರುಗುವ ಹೊತ್ತಾಯಿತು!

Hanumantha Kamath Posted On August 22, 2023
0


0
Shares
  • Share On Facebook
  • Tweet It

ಕಾಂಗ್ರೆಸ್ಸಿನಿಂದ ವಲಸೆ ಬಂದಿದ್ದ ಶಾಸಕರು, ಮಾಜಿ ಶಾಸಕರು ಭಾರತೀಯ ಜನತಾ ಪಾರ್ಟಿಯಿಂದ ಒಂದು ಕಾಲು ಹೊರಗೆ ಇಟ್ಟಿರುವುದರಿಂದ ಬಿಜೆಪಿ ಮುಖಂಡರು ಎಚ್ಚರಗೊಂಡಿದ್ದಾರೆ. ಇಲ್ಲಿಯೇ ನಿಲ್ಲಲು ಮನವೋಲಿಸೋಣ. ಆದರೆ ಕೈಕಾಲು ಹಿಡಿಯುವುದು ಬೇಡಾ ಎನ್ನುವ ತೀರ್ಮಾನ ಬಿಜೆಪಿ ಕೋರ್ ಕಮಿಟಿಯಲ್ಲಿ ಆದಂತಿದೆ. ಅದನ್ನೇ ವಲಸಿಗರು ಬಯಸುತ್ತಿರುವುದು. ಏನು ಸಿಗಬೇಕಿತ್ತೋ ಅದನ್ನು ಸ್ವೀಕರಿಸಿ, ಯಾವ ಸ್ಥಾನಮಾನವನ್ನು ಬಯಸಿ ಅವರು ಬಂದಿದ್ದರೋ ಅದರಲ್ಲಿ ಈಗ ಏನೂ ಉಳಿದಿಲ್ಲ ಎಂದು ಅವರಿಗೆ ಅನಿಸುತ್ತಿದೆ. ಈಗ ಸ್ಥಾನ, ಮಾನ, ಧನ ಇದರಲ್ಲಿ ಮೂರು ಕೂಡ ಬಿಜೆಪಿಯಲ್ಲಿ ಅವರಿಗೆ ಸಿಗುವುದು ಡೌಟು. ಆದ್ದರಿಂದ ತಮ್ಮ ಮೂಲಕ್ಕೆ ಅವರು ಹೊರಟಿದ್ದಾರೆ. ಅವರ ಕಾಲು ಹಿಡಿಯುವುದು ಬೇಡಾ ಎಂದು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.
ಕೆಟ್ಟ ಮೇಲೆ ಬುದ್ಧಿ ಬಂತು ಎಂದು ಹೇಳುವುದು ಇದಕ್ಕೆ. ಸಿದ್ಧಾಂತ ಇಲ್ಲದವರ ಕೈಕಾಲು ಹಿಡಿದು ಆವತ್ತು ಕರೆದುಕೊಂಡು ಬರುವ ಬದಲು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದ ಕಾರ್ಯಕರ್ತರನ್ನು ಸ್ವಲ್ಪ ಕರೆದು ಮಾತನಾಡಿಸಿದರೂ ಇವತ್ತು ಪಕ್ಷಕ್ಕೆ ಒಂದು ಘನತೆ ಸಿಗುತ್ತಿತ್ತು. ಆದರೆ ಅಧಿಕಾರಕ್ಕಾಗಿ ಆ ವಲಸಿಗರನ್ನು ಐಷಾರಾಮಿ ರೆಸಾರ್ಟ್ ನಲ್ಲಿ, ಪಂಚತಾರಾ ಹೋಟೇಲಿನಲ್ಲಿ ಕುಳ್ಳಿರಿಸಿ, ಮೋಜು, ಮಸ್ತಿಗೆ ಅವಕಾಶ ಮಾಡಿಕೊಟ್ಟು ಇತ್ತ ಕಾರ್ಯಕರ್ತರನ್ನು ತಿರುಗಿ ಕೂಡ ನೋಡದೇ ನಾಲ್ಕೂವರೆ ವರ್ಷಗಳಷ್ಟು ಸಮಯವನ್ನು ಕಳೆದ ಪರಿಣಾಮವನ್ನು ರಾಜ್ಯ ಬಿಜೆಪಿ ಅನುಭವಿಸುತ್ತಿದೆ.

ಆದರೆ ಹಿಂದೆ ಬಿಜೆಪಿ ಹೀಗೆ ಇರಲಿಲ್ಲ!

ಕಾರ್ಯಕರ್ತರ ಮನೆಯಲ್ಲಿ ಬೆಳಿಗ್ಗೆ ಉಪಹಾರ ಸೇವಿಸಿ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಹೊರಡುತ್ತಿದ್ದರು. ಈಗ ಯಾವ ಹೋಟೇಲಿನಲ್ಲಿ ಬ್ರೇಕ್ ಫಾಸ್ಟ್ ಮಾಡಿ, ಆಗ ಜೊತೆಗಿರುವ ಕಾರ್ಯಕರ್ತರಿಗೆ ಬೇಕಾದಷ್ಟು ತಿನ್ನಿಸಿ ಪ್ರಚಾರ ಆರಂಭಿಸುವುದು ಎನ್ನುವ ವಾತಾವರಣವಿದೆ. ಸೋಡಾ, ಕಬ್ಬಿನ ಹಾಲು ಕುಡಿದು ಸಂಜೆ ಪ್ರಚಾರಕ್ಕೆ ಹೋದವರು ರಾತ್ರಿ ತಮ್ಮ ಮನೆಗಳಲ್ಲಿಯೇ ಊಟ ಮಾಡುತ್ತಿದ್ದರು. ಈಗ ರಾತ್ರಿ ಯಾವ ಹೋಟೇಲಿನಲ್ಲಿ ಬಣ್ಣದ ನೀರು, ಕೋರಿ ಊಟ ಎಂದು ಇಳಿಸಂಜೆಯಾಗುತ್ತಲೇ ಚರ್ಚೆಯಾಗುತ್ತದೆ.
ಯಾಕೆಂದರೆ ಹಿಂದೆ ಬಿಜೆಪಿ ನಾಯಕರು ಕೂಡ ಹಾಗೆ ಇದ್ದರು. ಮಂಗಳೂರಿನಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾರಾಯಣ ಶೆಟ್ಟಿ, ಮಾರಪ್ಪ ಶೆಟ್ಟಿ, ರಘುವೀರ್ ನಾಯಕ್, ಸುಂದರ ಹೆಗ್ಡೆ, ಶಾರದಾ ಆಚಾರ್ ಹೀಗೆ ಬೇರೆ ಬೇರೆ ನಾಯಕರು ಇದ್ದರು. ಸಂಜೀವ್ ಗಟ್ಟಿ ಎನ್ನುವ ಕಾರ್ಪೋರೇಟರ್ ಬೆಳಗ್ಗೆ ತಮ್ಮ ಸೈಕಲ್ಲಿನಲ್ಲಿ ವಾರ್ಡ್ ತುಂಬಾ ಸಂಚರಿಸಿ ಜನರ ತೊಂದರೆಗಳನ್ನು ಪರಿಹರಿಸಲು ಓಡಾಡುತ್ತಿದ್ದರು. ನಾರಾಯಣ ಶೆಟ್ಟಿಯವರು ಕೂಡ ಈ ವಿಷಯದಲ್ಲಿ ಎತ್ತಿದ ಕೈ. ಆಗೆಲ್ಲಾ ನಾಯಕರು ಜನಸಾಮಾನ್ಯರಾಗಿಯೇ ಇದ್ದರು. ಆದರೆ ಕಾಲ ಬದಲಾಯಿತು. ಜನ ಬದಲಾದರು. ಬಿಜೆಪಿ ಅಧಿಕಾರದ ರುಚಿ ನೋಡಿತು. ಅದರ ನಂತರ ಜನರ ನಡುವೆ ವಿಷಯಗಳು ಕೂಡ ಬದಲಾದವು, ಈಶ್ವರಪ್ಪನವರ ಮನೆಯಲ್ಲಿ ಹಣ ಲೆಕ್ಕ ಮಾಡುವ ಯಂತ್ರ ಇದೆಯಂತೆ, ಸಿಟಿ ರವಿಯವರ ಮನೆಯ ವಾಶ್ ರೂಂನಲ್ಲಿ ಎಷ್ಟೋ ಲಕ್ಷದ ಟೈಲ್ಸ್ ಹಾಕಲಾಯಿತಂತೆ, ಯಡ್ಡಿ ಎಷ್ಟೋ ಕೋಟಿ ಹೊಂದಿಸಿ ಆಪರೇಶನ್ ಕಮಲ ಮಾಡಿದರಂತೆ ಹೀಗೆ ಗಾಳಿಯಲ್ಲಿ ಸುದ್ದಿಗಳು ಓಡಾಡಿದವು. ಅಷ್ಟೊತ್ತಿಗೆ ಕಾರ್ಯಕರ್ತನಿಗೆ ಇವರ ಅದೇ ಸಜ್ಜಿಗೆ, ಅವಲಕ್ಕಿ ಸಾಕಾಗಿತ್ತು. ನಂತರ ಬಿಜೆಪಿಯಿಂದಲೂ ಪಾಪದವರು ಚುನಾವಣೆಗೆ ನಿಲ್ಲುವುದು ಕಷ್ಟಸಾಧ್ಯವಾಯಿತು.

ಸಮಾಜಕ್ಕೆ ಸ್ವಲ್ಪ, ತಮಗೆ ಸರ್ವಸ್ವ!

ಈಗಂತೂ ಒಂದು ಹೆಜ್ಜೆ ಮುಂದಕ್ಕೆ ಪರಿಸ್ಥಿತಿ ಹೋಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಸದಾ ವತ್ಸಲೇ ಮಾತೃಭೂಮಿ ಎಂದು ಹೇಳಿ ಸಂಘಟನೆಯಿಂದ ಪಕ್ಷಕ್ಕೆ ಬಂದ ಮೂಲ ಬಿಜೆಪಿ ನಾಯಕರು ಟಿಕೆಟ್ ಸಿಗಲಿಲ್ಲ ಎಂದು ಬೇರೆ ಪಕ್ಷಕ್ಕೆ ಜಂಪ್ ಹೊಡೆದುಬಿಡುತ್ತಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದ ಪಕ್ಷಕ್ಕೆ ತಿಲಾಂಜಲಿ ನೀಡಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಅಡ್ಡಡ್ಡ ಮಲಗಿಸಿದ ಜಗದೀಶ್ ಶೆಟ್ಟರ್, ಸೋತರೂ ಡಿಸಿಎಂ ಮಾಡಿದ್ದ ಪಕ್ಷವನ್ನು ಬಿಟ್ಟು ಈಗ ಬೇರೆ ಪಕ್ಷದಲ್ಲಿ ಸಾಮಾನ್ಯ ಶಾಸಕರಾಗಿರುವ ಸವದಿ, ರಾಜ್ಯಸಭೆಯಿಂದ ವಿಧಾನಪರಿಷತ್ ತನಕ ಎಲ್ಲಾ ಸದನದಲ್ಲಿಯೂ ಅವಕಾಶ ನೀಡಿದ್ದ ಪಕ್ಷಕ್ಕೆ ಚೂರಿ ಹಾಕಿ ಕಾಂಗ್ರೆಸ್ ಬಾಗಿಲಲ್ಲಿ ತೆರೆಯೋ ಶಿವನೇ ಎಂದು ಗೋಗರೆಯುತ್ತಿರುವ ಆಯನೂರು ಮಂಜುನಾಥ್ ಹೀಗೆ ಹಲವರನ್ನು ನೋಡಿದ ನಂತರ ಪಕ್ಷದ ಕಾರ್ಯಕರ್ತ ಕೂಡ ಒಬ್ಬರು ಮೋದಿ ಇಲ್ಲದಿದ್ದರೆ ಬಿಜೆಪಿಗೆ ನಮಸ್ಕಾರ ಎಂದು ಹೇಳುತ್ತಿದ್ದನೋ ಏನೋ? ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಹೇಳುವುದು ನಮಗೆ ಮಾತ್ರವಾ ಎಂದು ಕಾರ್ಯಕರ್ತ ಕೇಳುತ್ತಿದ್ದಾನೆ. ಉತ್ತರ ಹೇಳುವವರು ಪಕ್ಷದಲ್ಲಿ ಯಾರೂ ಕಾಣುತ್ತಾ ಇಲ್ಲಾ!

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search