ದರ್ಶನ್ ಗೆ ರಾಕಿ ಕಟ್ಟಿದ ತುಳುನಾಡ ಚೆಲುವೆ, ಕಾರಣ?
ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಹಾರಿ ಅಲ್ಲಿ ಉತ್ತಮ ಅವಕಾಶವನ್ನು ಗಳಿಸುತ್ತಾ ಇರುವ ತುಳುನಾಡ ಚೆಲುವೆ ಸೋನಾಲ್ ಮೊಂತೇರೋ ಅವರು ರಕ್ಷಾ ಬಂಧನದ ದಿನ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸಕ್ಕೆ ತೆರಳಿ ರಾಕಿ ಕಟ್ಟಿ ಬಂದಿದ್ದಾರೆ. ಬನಾರಸ್ ಚಿತ್ರದ ಹೀರೋಯಿನ್ ಸೋನಾಲ್ ಅವರು ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಅವರದ್ದು ದರ್ಶನ್ ತಂಗಿಯ ಪಾತ್ರ. ಸಿನೆಮಾದಲ್ಲಿ ಸ್ಟಾರ್ ನಟನೊಬ್ಬನಿಗೆ ತಂಗಿಯಾಗಿ ನಟಿಸಲು ಚಾಲ್ತಿಯಲ್ಲಿರುವ ಹೀರೋಯಿನ್ ಗಳು ಒಪ್ಪುವುದು ಕಡಿಮೆ. ಯಾಕೆಂದರೆ ಒಮ್ಮೆ ತಂಗಿಯಾಗಿ ನಟಿಸಿದ ಬಳಿಕ ಅದೇ ಹೀರೋಗೆ ನಾಯಕಿಯಾಗಿ ನಟಿಸಿದರೆ ಫ್ಯಾನ್ಸ್ ಒಪ್ಪುವುದಿಲ್ಲ. ಯಾಕೆಂದರೆ ಸ್ಟಾರ್ ನಟನ ಸಿನೆಮಾಗಳನ್ನು ಆತನ ಅಭಿಮಾನಿಗಳು ಸಾಕಷ್ಟು ಬಾರಿ ನೋಡಿರುತ್ತಾರೆ. ಆಗ ಅವರಿಗೆ ಹೀರೋ ತಂಗಿಯ ಪಾತ್ರ ಕೂಡ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಹಾಗಿರುವಾಗ ಭವಿಷ್ಯದ ಯಾವುದೇ ಸಿನೆಮಾದಲ್ಲಿ ಆ ಸ್ಟಾರ್ ನಟನಿಗೆ ತಂಗಿಯ ಪಾತ್ರವನ್ನು ಮಾಡಿದವಳನ್ನು ಹೀರೋಯಿನ್ ಮಾಡುವುದು ಕಷ್ಟಸಾಧ್ಯ. ಇನ್ನು ದರ್ಶನ್ ಹಾಗೂ ಸೋನಾಲ್ ಜೋಡಿಯೂ ಅಣ್ಣ ತಂಗಿಯ ಜೋಡಿಯಂತೆ ಕಂಗೊಳಿಸುತ್ತದೆ. ರಾಬರ್ಟ್ ಚಿತ್ರದ ತಂಗಿ ನಿಜ ಜೀವನದಲ್ಲಿಯೂ ರಾಕಿ ಕಟ್ಟುವ ಮೂಲಕ ತಂಗಿಯಾಗಿಯೇ ಮುಂದುವರೆದಿದ್ದಾರೆ.
Leave A Reply