• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ವತ್ತಃ ಬ್ರಿಟೀಷರೇ ತಮ್ಮ Survey ಯಲ್ಲಿ ಉಲ್ಲೇಖಿಸಿದ ನಗ್ನಸತ್ಯ?

Subhash Bangarpete Posted On August 31, 2023


  • Share On Facebook
  • Tweet It

ಬ್ರಾಹ್ಮಣರು ತಾವು ಮಾತ್ರ ಶಿಕ್ಷಣ ಪಡೆದು ಇತರೆ ಜನಾಂಗಗಳನ್ನು ಶಿಕ್ಷಣದಿಂದ ದೂರ ಇಟ್ಟರು ಅನ್ನೋ ಭ್ರಮೆಯನ್ನು ಯಾರೋ ಹುಟ್ಟು ಹಾಕಿದರು ಮತ್ತು ಇಂದಿಗೂ ಅದನ್ನು ಕೆಲವರು ನಂಬುತ್ತಾರೆ.

ಇನ್ನೂ ಮಜವಾದ ವಿಷಯಗಳನ್ನು ಹೇಳ್ತೀನಿ ಕೇಳಿ…..

ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಜಾರಿಗೆ ಬಂದಿದ್ದು 1835 ರ English Education Act ನ ಮೂಲಕ….

ನಿಮಗೆಲ್ಲ ತಿಳಿದಿರುವಂತೆ 1947 ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂತು….ಅಂದ್ರೆ English ಶಿಕ್ಷಣ ಜಾರಿಯಾಗಿ ಕೇವಲ 112 ವರ್ಷಗಳ ನಂತರ ಬ್ರಿಟಿಷರೇ ಭಾರತ ಬಿಟ್ಟು ಹೋದರು…..

English ಭಾಷೆ, ಅಥವಾ ಅವರ ಶಿಕ್ಷಣ ಪದ್ದತಿ ಇಡೀ ಭಾರತೀಯ ಸಮುದಾಯಕ್ಕೇ ಹೊಸತು….. ಹಾಗಾಗಿ ಅವಶ್ಯಕತೆ ಇದ್ದವರು ಮಾತ್ರ ಆ ಶಿಕ್ಷಣ ಕಲಿತರು ಮತ್ತು ಉಳಿದವರು ಅದರಿಂದ ದೂರವೇ ಉಳಿದರು…..

ನಿಜ ಹೇಳಬೇಕು ಅಂದ್ರೆ ಬ್ರಿಟಿಷರು ಇಡೀ ಭಾರತದ ಮೂಲ ಶಿಕ್ಷಣ ಪದ್ದತಿಯನ್ನು ನಾಶ ಮಾಡಿ ಅದರ ಜಾಗಕ್ಕೆ ತಮ್ಮ ಶಿಕ್ಷಣ ಪದ್ದತಿಯನ್ನು ತುರುಕಿ ಇಡೀ ದೇಶದಾದ್ಯಂತ Industrialisation ಮಾಡಿ‌ ಭಾರತೀರರೆಲ್ಲರೂ ತಮ್ಮ ಮೂಲ ಕಸುಬುಗಳನ್ನು ಬಿಟ್ಟು ಇಂಗ್ಲಿಷ್ ಶಿಕ್ಷಣ ಪದ್ದತಿಯ ಪ್ರಕಾರ ಶಿಕ್ಷಣ ಪಡೆಯುವಂತೆ ಮತ್ತು ಹೊಸದಾಗಿ ಶುರುವಾದ Industry ಗಳಲ್ಲಿ ಕಾರ್ಮಿಕರಾಗಿ ದುಡಿಯುವಂತೆ ಮಾಡಿದರು… ಇದರ ಜೊತೆಗೆ ಭಾರತೀಯ ಭಾಷೆಗಳನ್ನು ಕೊಂದು English ಅನ್ನು ಭಾರತದ ಆಡಳಿತ ಭಾಷೆ ಮಾಡಿದರು.

ಇನ್ನೂ Blunt ಆಗಿ ಹೇಳಬೇಕು ಅಂದ್ರೆ ಇಷ್ಟೊಂದು ವೈವಿಧ್ಯತೆ ಇದ್ದ ಭಾರತವನ್ನು ಅರ್ಥ ಮಾಡಿಕೊಳ್ಳಲು, ಆಳಲು ಬ್ರಿಟೀಷರಿಗೆ ಭಾರತೀಯ ನೌಕರರು, ಮತ್ತವರ ಸಹಕಾರ ಬೇಕಿತ್ತು…. ಅವೆರಡೂ ಗುರಿ ಸಾಧಿಸಲು ಅವರು ತಮ್ಮ ಶಿಕ್ಷಣವನ್ನು ಭಾರತದಲ್ಲಿ ಜಾರಿ ಮಾಡಿದರು.

ಹಾಗಾದರೆ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ದತಿ ಜಾರಿ ಆಗೋದಕ್ಕೂ ಮುನ್ನ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿತ್ತು ಅನ್ನೋದಕ್ಕೂ ಬ್ರಿಟೀಷರೇ Maintain ಮಾಡಿದ್ದ ದಾಖಲಾತಿಗಳು ಮತ್ತು ಕಡತಗಳೇ ಉತ್ತರ ಕೊಡುತ್ತವೆ.

ಇಲ್ಲಿ ಪ್ರತಿ ಗ್ರಾಮದಲ್ಲೂ ಒಂದು ಪಾಠಶಾಲೆ ಇತ್ತು….‌!

ಅಲ್ಲಿ ಸಂಸ್ಸೃತ ಮತ್ತು ಸ್ಥಳೀಯ ಭಾಷೆಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ನಮ್ಮ ಪುರಾತನ ಪಠ್ಯವನ್ನು ಕಲಿಸಲಾಗುತ್ತಿತ್ತು…. ಇದರ ಜೊತೆಗೆ ಗಣಿತ ಮತ್ತು ವಿಜ್ಞಾನಗಳನ್ನೂ ಪುರುಷ ಮತ್ತು ಮಹಿಳೆ ಇಬ್ಬರಿಗೂ ಕಲಿಸಲಾಗುತ್ತಿತ್ತು…… ಆ ಶಾಲೆಗಳಲ್ಲಿ ವೈಶ್ಯ ಮತ್ತು ಶೂದ್ರ ವರ್ಣಕ್ಕೆ ಸೇರಿದವರೇ ಹೆಚ್ಚಾಗಿ ಕಲಿಯುತ್ತಿದ್ದರು ಅವರ ಸಂಖ್ಯೆ ಬ್ರಾಹ್ಮಣರಿಗಿಂತ ಜಾಸ್ತಿ ಇತ್ತು.

ಈ ದೇಶದ Almost ಪ್ರತಿ ವ್ಯಕ್ತಿಗೂ ತನ್ನ ಸ್ಥಳೀಯ ಭಾಷೆ ಅಥವಾ ಸಂಸ್ಕೃತದಲ್ಲಿ ಓದಲು, ಬರೆಯಲು ಬರುತ್ತಿತ್ತು…. ಆ ಪಾಠಶಾಲೆಗಳಿಗೆ ಆ ಊರಿನ ದೇವಾಲಯಗಳು ಧನಸಹಾಯ ಮಾಡುತ್ತಿದ್ದವು……

ಹೀಗಿತ್ತು ನಮ್ಮ ಶಿಕ್ಷಣ ವ್ಯವಸ್ಥೆ….

ಇದು ನಾನು ಬರೆದ ಕಲ್ಪಿತ ಕಥೆ ಅಲ್ಲ…‌ ಬದಲಿಗೆ ಇದು ಸ್ವತ್ತಃ ಬ್ರಿಟೀಷರೇ ತಮ್ಮ Survey ಯಲ್ಲಿ ಉಲ್ಲೇಖಿಸಿದ ನಗ್ನಸತ್ಯ…

ಈ ನಗ್ನಸತ್ಯ London ನಲ್ಲಿ ಇದ್ದ #ಧರಂಪಾಲ್ ಜಿ ಅವರಿಗೆ ಕಂಡಿತು ಮತ್ತು ಅವರ ಮೂಲಕ ನಮ್ಮೆಲ್ಲರಿಗೂ ತಲುಪಿತು. ಬ್ರಿಟೀಷರೇ ಹೇಳುವಂತೆ ಇಲ್ಲಿ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದ ಜನರಿಗೂ ಶಿಕ್ಷಣ ದೊರೆಯುತ್ತಿತ್ತು….. ಮತ್ತು ಭಾರತದ Literacy rate almost 100% ಇತ್ತು….. ಇಲ್ಲಿ ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಣ ಎಂದಿಗೂ ವ್ಯಾಪಾರ ಆಗಿರಲ್ಲ…. ಯಾಕೆಂದರೆ ಸಮಾಜಕ್ಕೆ ಶಿಕ್ಷಣ ನೀಡುವ ಜವಾಬ್ದಾರಿ ದೇವಾಲಯಗಳದಾಗಿತ್ತು……

ಹೀಗಾಗಿ ಬ್ರಿಟೀಷರೇ ಹೇಳುವಂತೆ ಹಿಂದೆ ಜಾರಿ ಇದ್ದ ಶಿಕ್ಷಣ ಪದ್ದತಿಯಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿತ್ತು…. ಅವರ ಶಿಕ್ಷಣ ಪದ್ದತಿ ಜಾರಿಯಾದ ನಂತರ ಬ್ರಾಹ್ಮಣರೇ ಅವರ ಶಿಕ್ಷಣವನ್ನು ಪಡೆದಿರಲಿಲ್ಲ…. ಮತ್ತು ಬ್ರಾಹ್ಮಣರಿಗೂ English ಶಿಕ್ಷಣ ಹೊಸದಾಗಿತ್ತು…..‌

ಇದೆಲ್ಲದರ ಜೊತೆಗೆ ” ಕೆಲವರು ” ಹೇಳುವ ಪ್ರಕಾರ ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ ಶಿಕ್ಷಣವನ್ನು ಬ್ರಿಟೀಷರು ಎಲ್ಲರಿಗೂ ಸಮಾನವಾಗಿ ನೀಡಿದರು….‌ ಹೀಗಾಗಿ ಆಳುವ ಬ್ರಿಟೀಷರೇ ಎಲ್ಲರಿಗೂ ಶಿಕ್ಷಣ ನೀಡುವ ತೀರ್ಮಾನ ಮಾಡಿದಾಗ ಬ್ರಾಹ್ಮಣರು ಅದನ್ನು ಹೇಗೆ ತಡೆಯಲು ಸಾಧ್ಯ….?

ಹೀಗಾಗಿ ಒಟ್ಟಾರೆ ಬ್ರಾಹ್ಮಣರು ಇತರ ಸಮುದಾಯಗಳನ್ನು ಶಿಕ್ಷಣದಿಂದ ವಂಚಿಸಿದರು ಅನ್ನೋದೇ ಒಂದು‌ ಭ್ರಮೆ ಮತ್ತು ಅದೇ ಭ್ರಮೆಯಲ್ಲಿ ಇಂದಿಗೂ ಅನೇಕರು ಬದುಕುತ್ತಿದ್ದಾರೆ ಅನ್ನೋದೇ ಸತ್ಯ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Subhash Bangarpete May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Subhash Bangarpete May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search