ಇದು ಸನಾತನದಲ್ಲಿ ಬರುವ ಮಹಿಷಾಸುರ ಅಲ್ಲ….!
#ಬನ್ನಿ_ಬೌದ್ದ_ಬಿಕ್ಕು_ಮಹಾದೇವನ_ಬಗ್ಗೆ_ತಿಳಿಯೋಣ
ಈ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವವರು ಯಾರು ಗೊತ್ತಾ….
ಮೌರ್ಯ ಸಾಮ್ರಾಜ್ಯದ ಆಶೋಕ ಚಕ್ರವರ್ತಿ ಕಳುಹಿಸಿಕೊಟ್ಟಿದ್ದ ಬೌದ್ದ ಬಿಕ್ಕು ಮಾಹಾದೇವ.
ಈ ಬೌದ್ದಬಿಕ್ಕು ಮಹಾದೇವನನ್ನು ಈ ಮನುವಾದಿಗಳು, ವೈದಿಕರು ಕೆಟ್ಟದಾಗಿ ಕ್ರೂರಿಯಂತೆ ಚಿತ್ರಿಸಿ ಹೀಗೆ ವಿಕಾರವಾಗಿ ಚಾಮುಂಡಿ ದೇವಿಯ ದೇವಾಲಯದ ಬಳಿ ನಿಲ್ಲಿಸಿದರು
ಅದನ್ನು ನಾವು ಈಗ ಸರಿ ಮಾಡುತ್ತಿದ್ದೇವೆ… ನಮ್ಮ ವೈಭವೋಪೇತ ಇತಿಹಾಸವನ್ನು ನಾವು ಜನರ ಮುಂದೆ ಇಡುತ್ತಿದ್ದೇವೆ… ನಮ‌್ಮ ಆದಿ ದೊರೆಯನ್ನು, ಜನ ಮಚ್ಚಿದ ನಾಯಕನನ್ನು ಗೌರವಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ…. ಅದಕ್ಕಾಗಿ ನಾವು ಮಹಿಷ ದಸರಾ ಆಚರಿಸುತ್ತಿದ್ದೇವೆ….
ಅರೆ… ಬೌದ್ದ ಬಿಕ್ಕು ಮಹಾದೇವ ಮಹಿಷ ಹೇಗಾದ ಅಂತ ಯೋಚಿಸ್ತಾ ಇದ್ದೀರಾ… ಊಹೂಂ ಅದು ಉತ್ತರ ಸಿಗದ ಚಿದಂಬರ ರಹಸ್ಯ.
ಈ ಆದಿ ದೊರೆ ಮಹಿಷ ತುಂಬಾ ಬಲಶಾಲಿಯಾದ್ದರಿಂದ ಅವನ ಬೆಟ್ಟಕ್ಕೆ ಮಹಾಬಲಾದ್ರಿ ಬೆಟ್ಟ ಅಂತ ಕರೆಯಲಾಗುತ್ತಿತ್ತಂತೆ….
ಹಾಗಾದ್ರೆ ಬೆಟ್ಟದ ಮೇಲಿರುವ ಮಹಬಲೇಶ್ವರ ದೇವಸ್ಥಾನದ ಕತೆ ಏನು… ಆ ದೇವಾಲಯದಿಂದಲೇ ಆ ಬೆಟ್ಟಕ್ಕೆ ಮಹಾಬಲಾದ್ರಿ ಬೆಟ್ಟ ಅಂತ ಹೆಸರು ಬಂತೆಂಬ ಇತಿಹಾಸ ಏನು ಅಂತ ಮಾತ್ರ ಕೇಳಬೇಡಿ…ಹಾಗೆ ಕೇಳಿದ್ರೆ ನೀವು ಬಹುಜನ ಮತ್ತು ಮೂಲನಿವಾಸಿ ಹಾಗು ನೈಜ ಇತಿಹಾಸದ ವಿರೋಧಿಯ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ ನೋಡಿ.
ಹಿಂಗೆಲ್ಲ Logic Less ವಾದವನ್ನು ಮಾಡುತ್ತಾ ನಾಚಿಕೆ ಮಾನ ಮರಿಯಾದೆ ಇಲ್ಲದೆ ಈ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುತ್ತಿರುವ ಪರ ಗತಿಪರರಿಗೆ ನನ್ನದೊಂದು Open Challenge….
ಈ ಲೇಖನದ ಮೂಲಕ ನಾನು ಎತ್ತುವ ಪ್ರಶ್ನೆಗಳಿಗೆ ಸಮರ್ಥ ಉತ್ತರವನ್ನು ಯಾವನಾದರೂ ಕೊಟ್ಟರೆ ನಾನು ಅವರ ಮನೆಯ ಜೀತದಾಳಾಗಿರುತ್ತೇನೆ…. ಪಕ್ಕಾ ಸನಾತನಿ ಆಗಿರುವ ನಾನು ಸನಾತನ ಧರ್ಮವನ್ನು ವಿರೋಧಿಸುತ್ತೇನೆ…. ಯಾವನಾದರೂ ಧಮ್ಮು ತಾಕತ್ತು ಇರುವವರು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನನನ್ನು ಅವರ ಅಡಿಯಾಳು ಮಾಡಿಕೊಳ್ಳಬಹುದು.
ಮೊದಲನೆಯದಾಗಿ ಬೌದ್ದ ಬಿಕ್ಕು ಮಹಾದೇವ ಮಹಿಷ ಹೇಗಾದ ಅನ್ನೋದಕ್ಕೇ ಉತ್ತರವಿಲ್ಲ….ಅವರ Logic ಪ್ರಕಾರವೇ ಬೌದ್ದಬಿಕ್ಕು ಮಹಾದೇವನನ್ನು ಕುತಂತ್ರದಿಂದ ಮಹಿಷಾಸುರನೆಂಬ ಕ್ರೂರಿಯಾಗಿ ಚಿತ್ರಿಸಲಾಗಿದೆ… ಆದರೆ ಪಾಪ ಈ ಪರ ಗತಿಪರರೂ ಮಹಾದೇವನನ್ನು ಮಹಿಷ ಅಂತಲೇ ಒಪ್ಪಿ ಈಗ ಅದೇ ಮಹಿಷನಿಗಾಗಿ ಮಹಿಷ ದಸರಾವನ್ನೂ ಆಚರಿಸುತ್ತಿದ್ದಾರೆ.
ಮಹಿಷ ಅಂದ್ರೆ ಎಮ್ಮೆ…. ವಿಜ್ಞಾನವೇ ಅವತಾರ ತಾಳಿ ಬಂದಂತೆ ವೈಜ್ಞಾನಿಕ ಬದುಕು ನಡೆಸುವ ಪರ ಗತಿಪರರು ಎಮ್ಮೆ ಹೇಗೆ ರಾಜನಾಗಲಿಕ್ಕೆ ಸಾಧ್ಯ ಅಂತ ಮಾತ್ರ ಹೇಳೋದಿಲ್ಲ….
ಮಹಿಷನನ್ನು ತಮ್ಮ ಆದಿಪುರುಷ ಎನ್ನುವವರು ಎಮ್ಮೆಯ ವಂಶದಲ್ಲಿ ಹುಟ್ಟಿದವರು ತಾವು ಹೇಗೆ ಮನುಷ್ಯರಾಗಿ ಹುಟ್ಟಿದೆವು ವೈಜ್ಞಾನಿಕವಾಗಿ ಇದು ಹೇಗೆ ಸಾಧ್ಯ ಅಂತ ಮಾತ್ರ ಹೇಳೋದಿಲ್ಲ
ಇವರ ಪ್ರಕಾರ ಮಹಿಷ Truth ( ಇತಿಹಾಸ) ಮತ್ತು ಚಾಮುಂಡಿ Myth ( ಪುರಾಣ).
ಈ ಐತಿಹಾಸಿಕ ಪುರುಷ ಮಹಾದೇವನನ್ನು ಸಾಮ್ರಾಟ ಅಶೋಕ ಮೈಸೂರಿಗೆ ಕಳುಹಿಸಿದನಂತೆ… ನಾನು ಆಗಲೇ ಹೇಳಿದಂತೆ ಮಹಾದೇವ ಮಹಿಷ ಹೇಗಾದ ಮತ್ತು ಬೌದ್ದ ಬಿಕ್ಕುವಾದ ಮಹಾದೇವ ಹಿಂದೂ ದೇವರಾದ ಶಿವನ ಹೆಸರನ್ನು ಯಾಕೆ ಹೊಂದಿದ್ದ ಅಂತ ಮಾತ್ರ ಕೇಳಬೇಡಿ.
ಒಟ್ಟಾರೆ ಇಂತಹ ಬೌದ್ದ ಬಿಕ್ಕು ಇಂದಿನ ಮೈಸೂರು ಪ್ರದೇಶಕ್ಕೆ ಬಂದು ಇಲ್ಲಿ ಉತ್ತಮ ಆಡಳಿತ ನೀಡಿದ ಜನಾನುರಾಗಿ ದೊರೆಯಾಗಿದ್ದ…ಅದಕ್ಕಾಗಿ ಆತನ ಹೆಸರನ್ನು ಈ ಪ್ರದೇಶಕ್ಕೆ ಇಡಲಾಯಿತು.
ನಾನು ಮೊದಲೇ ಹೇಳಿದಂತೆ ಇದು ಸನಾತನದಲ್ಲಿ ಬರುವ ಮಹಿಷಾಸುರ ಅಲ್ಲ….
ಹಾಗಿದ್ದರೆ ಈ ಮಹಿಷ ಯಾವಾಗ ಹುಟ್ಟಿದ, ಅಶೋಕ ಇವನಿಗೆ ಯಾವಾಗ ಮೈಸೂರಿಗೆ ಹೋಗೆಂದು ಆದೇಶ ಕೊಟ್ಟ, ಇವನು ಯಾವ ಇಸವಿಯಲ್ಲಿ ಮೈಸೂರಿಗೆ ಬಂದ…. ಯಾವ ದಾರಿ ಸವೆಸಿ ಬಂದ.. ಎಷ್ಟು ದಿನ ಪ್ರಯಾಣ ಮಾಡಿದ, ಯಾವ ಸಾರಿಗೆ ಬಳಸಿ ಪ್ರಯಾಣ ಮಾಡಿದ… ಎಷ್ಟು ವರ್ಷಗಳ ವರೆಗೆ ಮೈಸೂರಿನಲ್ಲಿ ಇದ್ದ… ಅವನಿಗೆ ಈ ಪ್ರದೇಶದ ಆಡಳಿತಗಾರನಾಗಿ ಯಾವಾಗ ಪಟ್ಟಾಭಿಷೇಕ ಆಯಿತು.
ಅವನು ಹೇಗೆಲ್ಲ ಆಡಳಿತ ನಡೆಸಿದ, ಯಾವ ಯಾವ ಸುಧಾರಣೆಗಳನ್ನು ತಂದ…. ಇವನ ರಾಜ್ಯಕ್ಕೆ ಭೇಟಿ ಕೊಟ್ಟವರ ಅಭಿಪ್ರಾಯಗಳು ಏನೇನು….ಇವನ ಯಾವ ಸುಧಾರಣೆಗಳು ಇವನಿಗೆ ಜನಾನುರಾಗಿಯ ಪಟ್ಟ ತಂದು ಕೊಟ್ಟಿತು…. ಇವನು ಯಾವಾಗ ಮರಣಿಸಿದ…. ಇವನ ನಂತರ ಇವನ ಸಾಮ್ರಾಜ್ಯ ಏನಾಯಿತು…..
ಇವನು ಮೈಸೂರಿನಲ್ಲೇ ಮರಣಿಸಿದನಾ ಅಥವಾ ಬೇರೆ ಕಡೆ ಸತ್ತನಾ… ಊಹೂಂ ಒಂದೇ ಒಂದು ಪ್ರಶ್ನೆಗೂ ಉತ್ತರ ಇಲ್ಲ…. ಆದರೂ ಈ ಮಹಿಷ ಇತಿಹಾಸ ಪುರುಷ…
ಈಗ ಪೌರಾಣಿಕ ಮಹಿಷನ ವಿಚಾರಕ್ಕೆ ಬರೋಣ… ಪೌರಾಣಿಕ ಮಹಿಷ ಋಷಿ ಕಶ್ಯಪ ಮತ್ತು ಅವರ ಪತ್ನಿ ಧಿತಿ ದೇವಿಯ ಮಗ…. ಆತ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪೀಡದ ರಾಜ…. ಅವನಿಗೆ ಹೆಣ್ಣಿನಿಂದ ಮಾತ್ರ ಸಾವು ಸಂಭವಿಸುತ್ತದೆಂಬ ವರವಿತ್ತು…. ಜಗತ್ತಿನ ಯಾವ ಗಂಡಸೂ ತನ್ನನ್ನು ಏನೂ ಮಾಡಲಾರ ಇನ್ನು ಒಂದು ಹೆಣ್ಣು ತನ್ನನ್ನು ಏನು ತಾನೇ ಮಾಡಿಯಾಳೆಂಬ ಮದದಿಂದ ಮರೆದಾಡುತ್ತಿದ್ದ ಮಹಿಷ ತಾನು ಸಾವನ್ನೇ ಗೆದ್ದೆನೆಂಬ ಭ್ರಮೆಯಲ್ಲಿ ಇದ್ದ…. ಹೀಗಾಗಿ ಅದೇ ಮದದಿಂದ ಪಾಪ – ಪುಣ್ಯದ ಅರಿವಿಲ್ಲದೆ ಪ್ರಜೆಗಳನ್ನು ಪೀಡಿಸುತ್ತಿದ್ದ…. ಅವನ ಪಾಪದ ಕೊಡ ತುಂಬಿದಾಗ ಸಾಕ್ಷಾತ್ ತಾಯಿ ದುರ್ಗೆ ಚಾಮುಂಡಿಯಾಗಿ ಅವತರಿಸಿ ಆತನೊಂದಿಗೆ ಹತ್ತು ದಿನಗಳ ಘನಘೋರ ಯುದ್ದ ಮಾಡಿ ಆತನನ್ನು ಯುದ್ದದಲ್ಲಿ ಸಂಹರಿಸಿದಳು…ಅಲ್ಲಿಗೆ ಕೆಡುವಿನ ವಿರುದ್ಧ ಒಳ್ಳೆಯದು ಗೆದ್ದಿತು…
ಇದರ ನೆನಪಿಗಾಗಿ ನಾವು ಪ್ರತಿವರ್ಷ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಢ್ಯದಿಂದ ಶುರುಮಾಡಿ ದಶಮಿಯ ತನಕ ಹಬ್ಬ ಆಚರಿಸಿ ಮಹಿಷನ ಸೋಲನ್ನೂ, ದೇವಿಯ ಗೆಲುವನ್ನು ಸಂಭ್ರಮಿಸುತ್ತೇವೆ.
ಇನ್ನು ಅವನ ಸಂಹಾರ ಮಾಡಿದ ಚಾಮುಂಡಿಯ ವರ್ಧಂತಿಯನ್ನೂ ನಾವು ಪ್ರತಿವರ್ಷ ಆಶಾಢ ಮಾಸದ ಕೃಷ್ಣ ಪಕ್ಷದ ಸಪ್ತಮಿಯಂದು ಆಚರಿಸುತ್ತೇವೆ.
ಪೌರಾಣಿಕವಾದ ಚಾಮುಂಡಿ ಮತ್ತು ಮಹಿಷನ ಬಗ್ಗೆ ನಮ್ಮ ಸನಾತನ ಧರ್ಮ ಇಷ್ಟೆಲ್ಲ ಮಾಹಿತಿ ಮತ್ತು Clarity ಕೊಡುತ್ತದೆ…ಆದರೆ So called ಐತಿಹಾಸಿಕ ಮಹಿಷನ ಬಗ್ಗೆ ಯಾವುದೇ ಮಾಹಿತಿ ಇಲ್ಲ
ಇನ್ನು ಮಹಿಷ ದಸರಾ.. ಆ ದಸರಾಗೆ ಒಂದು ದಿನಾಂಕ ಅಂತ ನಿಗಧಿ ಇದೆಯಾ….. ಊಹೂಂ… ಸನಾತನಿಗಳ ದಸಾರವೇ So called ಐತಿಹಾಸಿಕ ಮಹಿಷನ ಅಸ್ತಿತ್ವ ಕೂಡ…. ಅಲ್ಲ…. ನಾವು ಮಹಿಷ ಸತ್ತದಕ್ಕೆ ಹಬ್ಬ ಮಾಡಿದರೆ ಇವರೂ ಅದೇ ದಿನಗಳಲ್ಲಿ ಯಾಕೆ ಹಬ್ಬ ಮಾಡುತ್ತಾರೆ ಅನ್ನೋದನ್ನ ಸ್ವತಃ ಆ ಮಹಿಷನೇ ಹೇಳಬೇಕು…..
ಇನ್ನು ಮೈಸೂರಿನ ಬೆಟ್ಟಕ್ಕೆ ಮಹಾಬಲಾದ್ರಿ ಬೆಟ್ಟ ಅಂತ ಕರೆಯುತ್ತಿದ್ದುದು ಅಲ್ಲಿನ ಮಹಾಬಲೇಶ್ವರ ದೇವಸ್ಥಾನದ ಕಾರಣಕ್ಕಾಗಿ… ಆದರೆ So Called ಐತಿಹಾಸಿಕ ಮಷಿಷನ ಕಾರಣಕ್ಕಾಗಿ ಅದನ್ನು ಮಹಾಬಲಾದ್ರಿ ಬೆಟ್ಟ ಅಂತ ಯಾವ ಕಾರಣಕ್ಕಾಗಿ ಕರೆಯಲಾಗುತ್ತಿತ್ತು ಅದಕ್ಕೆ ಆಧಾರ ಏನು ಅನ್ನೋದನ್ನ ಆ ಮಹಾಬಲೇಶ್ವರನೇ ಬಲ್ಲ…
ಈಗ ಮಹಿಷನ ಪ್ರತಿಮೆಯ ವಿಚಾರಕ್ಕೆ ಬರೋಣ….. ಆ ಪ್ರತಿಮೆಯನ್ನು ನಿರ್ಮಿಸಿದ್ದು 1940 ರ ಆಸುಪಾಸಿನಲ್ಲಂತೆ….ಹಿಂಗಂತ ಪರ ಗತಿಪರ ಭಗವಾನ್ ಹೇಳಿದ್ದು… ಅದು ಅವ ಹೇಳಿದ ಹೊಸ ಸಂಶೋಧನೆಯ ಇತಿಹಾಸ…. ನೀವು ನೈಜ ಇತಿಹಾಸ ಹುಡುಕುತ್ತಾ ಹೊರಟರೆ ಆ ಮಹಿಷ ಪ್ರತಿಮೆಯನ್ನು ನಿರ್ಮಿಸಿದ್ದು ದೊಡ್ಡ ದೇವರಾಜ ಒಡೆಯರು ಮತ್ತವರ ಕಾಲಮಾನ ಹದಿನೇಳನೇ ಶತಮಾನ ಎಂಬುದು ನಿಮಗೆ ತಿಳಿಯುತ್ತದೆ….
ಆ ಮಹಿಷನ ಪ್ರತಿಮೆಯ ಕೈಲಿರುವ ಕತ್ತಿ ಒಂದರ ಪ್ರತೀಕವಂತೆ…ಅವನು ಮತ್ತೊಂದು ಕೈಲಿ ಹಾವು ಹಿಡಿದಿರುವುದು ಆತ ನಾಗ ವಂಶಕ್ಕೆ ಸೇರಿವದವನೆಂಬುದನ್ನು ಸಾರಿ ಹೇಳುತ್ತದಂತೆ….. ಆದರೂ ಆ ಪ್ರತಿಮೆ ಸರಿ ಇಲ್ಲವಂತೆ… ಹಾಗಾಗಿ ಅದನ್ನು ಒಡೆದು ಹಾಕಬೇಕಂತೆ
ಮೈಸೂರಿನ ಒಡೆಯರು So Called ಐತಿಹಾಸಿಕ ಬೌದ್ದಬಿಕ್ಕು ಮಹಿಷನನ್ನು ಒಪ್ಪಿದರಂತೆ… ಹಾಗಾಗಿಯೇ ತಮ್ಮ ದಾಖಲಾತಿಗಳಲ್ಲಿ ಮೈಸೂರನ್ನು ಮಹಿಷೂರು ಅಂತ ಬರೆದದ್ದಂತೆ….
ಆದರೆ ಅದೇ ಒಡೆಯರು So Called ಮನುವಾದಿಗಳ ಚಾಮುಂಡಿಯನ್ನು ತಮ್ಮ ಅಧಿದೇವತೆ ಎಂದು ಒಪ್ಪಿದ್ದರೆಂಬುದು ನಿಜ ಇತಿಹಾಸ Prends….
ಇವರ ಯೋಗ್ಯತೆಗೆ ಮಹಿಷನ ಒಂದೇ ಒಂದು ಐತಿಹಾಸಿಕ ದಾಖಲಾತಿಯನ್ನೂ ಇವರಿಗೆ ಜನರ ಮುಂದಿಡಲು ಆಗಿಲ್ಲ ಮತ್ತು ಆಗೋದೂ ಇಲ್ಲ….ಇವರ So called ಐತಿಹಾಸಿಕ ಮಹಿಷನಿಗೆ ಒಂದು Separate ಅಸ್ತಿತ್ವವೂ ಇಲ್ಲ… ಒಂದೇ ಒಂದು ಐತಿಹಾಸಿಕ ದಾಖಲಾತಿಯನ್ನೂ ಇವರು Quote ಮಾಡೋದಿಲ್ಲ….
ಆದರೆ ಇವರನ್ನು ಪ್ರಶ್ನೆ ಮಾಡಿದವರಿಗೆ ಮಹಿಷನ ಇತಿಹಾಸ ತಿಳಿದುಕೊಂಡು ಮಾತಾಡಿ ಎಂಬ ಸಿದ್ದ ಉತ್ತರ ಇವರಿಂದ ಬರುತ್ತದೆ
ಅದರೆ ನಾವು ಇಂತಹ ದಾಖಲಾತಿ ಪರಿಶೀಲಿಸಿ, ಇಂತಹ ಪುಸ್ತಕ ಓದಿ ಅದರ ಆಧಾರದ ಮೇಲೆ ಈ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳುವ ದಮ್ಮೂ ಇವಕ್ಕೆ ಇಲ್ಲ…. ಏಕೆಂದರೆ ಇವರ ಬಳಿ ಇವರು ಹೇಳುತ್ತಿರುವ ಯಸವ ವಿಚಾರಕ್ಕೂ ದಾಖಲಾತಿ ಇಲ್ಲ….. ಇವು ಸುಮ್ಮನೆ ಸದ್ದು ಮಾಡುವ ಖಾಲಿ ದಬ್ಬಗಳು…
ಇವರ ಬಳಿ ನಿಜವಾಗಲೂ ದಾಖಲೆಗಳಿದ್ದರೆ… ಇವರು ಹೇಳುತ್ತಿರುವ ವಿಚಾರಗಳಲ್ಲಿ ಸತ್ಯ ಇದ್ದರೆ ಇವರು ಸುಮ್ಮನೆ ಕೂರುವ ಮಂದಿಯೂ ಅಲ್ಲ…..
ಸಣ್ಣ ಅವಕಾಶ ಸಿಕ್ಕರೂ ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಮಂದಿ ಇವು… ಅದಕ್ಕೆ ನಾನು ಪ್ರಮಾಣವನ್ನೂ ಕೊಡಬಲ್ಲೆ…..
ನಟ ಉಪೇಂದ್ರ ಅವರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಸಿಕ್ಕ ಅವಕಾಶವನ್ನು ಇದೇ ಮಂದಿ ಹೇಗೆ ಬಳಸಿಕೊಂಡರು ಅನ್ನೋದು ನಿಮಗೆಲ್ಲ ಮರೆತು ಹೋಗಿರಲಿಕ್ಕಿಲ್ಲ…
ಹಾಗಾಗಿ ಹೇಳುತ್ತೇನೆ ಕೇಳಿ…. ಇವು ಹೇಳುವ ವಿಚಾರದಲ್ಲಿ ಸತ್ಯ ಮತ್ತು ಸತ್ವ ಇದ್ದಿದ್ದರೆ ಇವು ವಿಶ್ವವಿಖ್ಯಾತ ಮೈಸೂರು ದಸರಾಗೆ ಕಾನೂನಿನ ಮೂಲಕ ತೊಡರುಗಾಲು ಹಾಕಿ ಯಾವುದೋ ಕಾಲ ಆಗಿರುತ್ತಿತ್ತು….
Leave A Reply