ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
ಹೇಗೆ ಮುಸ್ಲಿಮರ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಹಲಾಲ್ ಪ್ರಮಾಣಪತ್ರ ನೀಡಲಾಗುತ್ತದೆಯೋ ಅದೇ ರೀತಿ ಸಸ್ಯಹಾರಿಗಳಿಗಾಗಿ ವಿಶ್ವದ ಮೊದಲ ಅಧಿಕೃತ ಧೃಡಿಕರಣಪತ್ರ ಸಾತ್ವಿಕ್ ನೀಡಲಾಗುತ್ತದೆ ಎನ್ನುವುದು ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. ಹೇಗೆ ಮುಸ್ಲಿಮರು ಹಲಾಲ್ ಗುರುತನ್ನು ಮತ್ತು ಜ್ಯೂಯಿಸ್ ಗಳು ಕೋಶಿಯರ್ ಮೇಲೆ ನಂಬಿಕೆ ಇಟ್ಟುಕೊಳ್ಳುವರೋ ಅದೇ ಪ್ರಕಾರ ಸಸ್ಯಹಾರಿಗಳು ಸಾತ್ವಿಕ್ ಚಿನ್ನೆಯನ್ನು ಹೊಂದಿದ ಉತ್ಪನ್ನ ಅಥವಾ ಸ್ಥಳಗಳ ಮೇಲೆ ಭವಿಷ್ಯದಲ್ಲಿ ಹೆಚ್ಚು ಅವಲಂಬಿತರಾಗಬಹುದು. ನಾಲ್ಕು ರೀತಿಯಲ್ಲಿ ಇದರಲ್ಲಿ ಪ್ರಮಾಣಪತ್ರ ಸಿಗುತ್ತದೆ. ಅದು “ಸಾತ್ವಿಕ್ ಸತ್ವಂ”, “ಸಾತ್ವಿಕ್ ವೆಜಿಟೇರಿಯನ್”, “ಸಾತ್ವಿಕ್ ವೆಗನ್” ಮತ್ತು “ಸಾತ್ವಿಕ್ ಜೈನ್”.
ಸಾತ್ವಿಕ್ ಪ್ರಮಾಣಪತ್ರವನ್ನು ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ನೀಡುತ್ತಿದ್ದು, ಸಸ್ಯಹಾರಿಗಳಿಗೆ ಉತ್ತಮ ಸಾತ್ವಿಕ ವಾತಾವರಣವನ್ನು ನೀಡಲು ಇದು ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದ ಸ್ಥಾಪಕ ಅಭಿಷೇಕ್ ಬಿಸ್ವಾಸ್ ಮಾಹಿತಿ ನೀಡಿ ಸುಮಾರು 200 ವೈವಿದ್ಯತೆಗಳಾದ ಆಹಾರ, ಆತಿಥ್ಯ, ಉಡುಗೆ, ಡೈರಿ ಉತ್ಪನ್ನಗಳಿಗೆ ಇದನ್ನು ಬಳಸಬಹುದು. ನಾವು ಈ ಮೂಲಕ ಸಸ್ಯಹಾರವನ್ನೇ ಬಳಸಬೇಕು ಎಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಅದರ ಬದಲಾಗಿ ಸಸ್ಯಹಾರಿಗಳಿಗೆ ಉತ್ತಮ ಯೋಗ್ಯ ವಾತಾವರಣವನ್ನು ಕಲ್ಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಾಗರಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಪ್ರಸ್ತುತ 170 ದೇಶಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. 2025 ರ ಒಳಗೆ ಅಂದಾಜು ಒಂದು ಮಿಲಿಯನ್ ಘಟಕ ಮುಖ್ಯವಾಗಿ ಕಿಚನ್, ಹೋಟೇಲ್, ಆಹಾರ ಮತ್ತು ಬಟ್ಟೆಬರೆಗಳ ಮೇಲೆ ಸಾತ್ವಿಕ್ ಮಾರ್ಕ್ ಬೀಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೌನ್ಸಿಲ್ ತಿಳಿಸಿದೆ. ಸಾತ್ವಿಕ್ ಮಾರ್ಕ್ ಬಳಸಬೇಕಾದವರು ಕೌನ್ಸಿಲ್ ಜೊತೆ ಒಪ್ಪಂದ ಮಾಡಿಕೊಂಡು ಮುಂದುವರೆಯಬಹುದು ಎಂದು ಹೇಳಲಾಗಿದೆ .
Leave A Reply