ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
ಶಿವಮೊಗ್ಗದಲ್ಲಿ ಔರಂಗಾಜೇಬ್, ಟಿಪ್ಪು, ಆಯುಧ ಪ್ರದರ್ಶನ ಮತ್ತು ಗಲಾಟೆ!!
ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ ಮಹಾನ್ ದೊರೆ ಔರಂಗಜೇಬ್ ಎನ್ನುವ ಸ್ವಾಗತ ಕಮಾನು, ಟಿಪ್ಪು ಸಾಮ್ರಾಜ್ಯ ಎನ್ನುವ ಹೋರ್ಡಿಂಗ್ಸ್, ಕಿಂಗ್ ಆಫ್ ಶಿವಮೊಗ್ಗ ಅಮೀರ್ ಅಹ್ಮದ್ ಸಾಹೇಬ್ ಎಂದು ಬರೆದ ಫ್ಲೆಕ್ಸ್, ಶಿವಮೊಗ್ಗದಲ್ಲಿ ಹಾರಾಡುತ್ತಿರುವ ಇಸ್ಲಾಂ ಧ್ವಜಗಳು ಮತ್ತು ಇದಕ್ಕೆಲ್ಲವೂ ಕಲಶಪ್ರಾಯದಂತೆ ಟ್ಯಾಬ್ಲೋದಲ್ಲಿ ಕಂಗೊಳಿಸುತ್ತಿದ್ದ ಎರಡು ಹಲಗಿನ ಬೃಹತ್ ಖಡ್ಗ ಎಲ್ಲವೂ ಏನನ್ನು ಸೂಚಿಸುತ್ತದೆ. ಅಷ್ಟಕ್ಕೂ ಔರಂಗಾಜೇಬ್ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ್ದ ಮಹಾನ್ ದೊರೆ ಎನ್ನುವುದರಲ್ಲಿ ಒಂದು ಸಾಸಿವೆಯ ಕಣದಷ್ಟಾದರೂ ಸತ್ಯ ಇದೆಯಾ? ಔರಂಗಾಜೇಬ್ ದಿ ಲೈಫ್ ಅಂಡ್ ಲೇಗೆಸಿ ಆಫ್ ಇಂಡಿಯಾ’ಸ್ ಮೋಸ್ಟ್ ಕಂಟ್ರೋವರ್ಸಿಯಲ್ ಕಿಂಗ್ ಎನ್ನುವ ಪುಸ್ತಕ ಬರೆದಿರುವ ಔಡ್ರೆ ಟ್ರೂಸ್ಕೆ ಎನ್ನುವ ಲೇಖಕಿ ಭಾರತ ಚರಿತ್ರೆಯಲ್ಲಿ ಅತೀ ಹೆಚ್ಚು ದ್ವೇಷಕ್ಕೆ ಗುರಿಯಾದ ವ್ಯಕ್ತಿ ಔರಂಗಾಜೇಬ್ ಎಂದು ಬರೆದಿದ್ದಾರೆ. ಪಕ್ಕಾ ಮತೀಯವಾದಿ, ಹಿಂದೂ ವಿರೋಧಿ, ದಕ್ಷಿಣ ಏಷ್ಯಾವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡು ಹೊರಟಿದ್ದ ಮನುಷ್ಯ ಎಂದು ಅವರು ತಮ್ಮ ಪುಸ್ತಕದಲ್ಲಿ ಬಣ್ಣಿಸಿದ್ದಾರೆ. ವಿದೇಶಿಗರೇ ಔರಂಗಾಜೇಬನನ್ನು ಒಪ್ಪದಿರುವಾಗ ಈ ಮಣ್ಣಿನಲ್ಲಿ ಹುಟ್ಟಿ, ಇಲ್ಲಿನ ನೀರು, ಆಹಾರ ಕುಡಿದು ಬದುಕಿರುವವರು ಅವನನ್ನು ಕೊಂಡಾಡುವುದು ಸರಿಯಾ?
ಇನ್ನು ಟಿಪ್ಪು ಸಾಮ್ರಾಜ್ಯ ಎಂದು ದೊಡ್ಡ ದೊಡ್ಡ ಹೋರ್ಡಿಂಗ್ ಹಾಕುವ ಮೂಲಕ ಕೆಲವರು ಶಿವಮೊಗ್ಗ ಸಹಿತ ಕರ್ನಾಟಕಕ್ಕೆ ಕೊಡುತ್ತಿರುವ ಸಂದೇಶ ಏನು? ಇದು ಟಿಪ್ಪು ಸಾಮ್ರಾಜ್ಯ ಹೇಗಾಗುತ್ತದೆ. ಹಿಂದೂಗಳನ್ನು ಮತಾಂತರಗೊಳಿಸಲು ತನ್ನ ಎಲ್ಲಾ ಶಕ್ತಿ, ಸಾಮರ್ತ್ಯ ಪ್ರದರ್ಶಿಸಿದ, ಉರ್ದು ಭಾಷೆಗೆ ಹೆಚ್ಚು ಒತ್ತು ಕೊಟ್ಟ, ಇಸ್ಲಾಂ ವಿಸ್ತರಿಸಲು ಹರಸಾಹಸ ಪಟ್ಟ ಇತಿಹಾಸದ ಅತ್ಯಂತ ವಿವಾದಾತ್ಮಕ ಅರಸನ ಸಾಮ್ರಾಜ್ಯ ಎಂದು ಶಿವಮೊಗ್ಗದಲ್ಲಿ ಹೋರ್ಡಿಂಗ್ಸ್ ಇದು ಬೇಕಿತ್ತಾ?
ಒಂದು ಟ್ಯಾಬ್ಲೋದಲ್ಲಿ ಅತ್ಯಂತ ಭರ್ಬರವಾಗಿ ಎರಡು ಹಲಗಿನ ಶೈಲಿಯ ಖಡ್ಗವನ್ನು ಪ್ರದರ್ಶಿಸಲಾಗಿತ್ತು. ಆಯುಧವೊಂದನ್ನು ಹೀಗೆ ಟ್ಯಾಬ್ಲೋದಲ್ಲಿ ಮೆರವಣಿಗೆ ಮಾಡುವ ಅಗತ್ಯ ಇತ್ತಾ? ಇದಕ್ಕೆಲ್ಲಾ ಅನುಮತಿ ನೀಡಿದವರು ಯಾರು? ಕರ್ನಾಟಕ ರಾಜ್ಯದಲ್ಲಿ ಈಗ ಮುಸ್ಲಿಮರ ಕೃಪೆಯಿಂದ ಬಂದಿರುವ ಕಾಂಗ್ರೆಸ್ ಸರಕಾರ ಇದೆ. ಆದ್ದರಿಂದ ಮುಸ್ಲಿಮರು ಏನು ಮಾಡಿದರೂ ಮೌನ ಸಮ್ಮಿತಿಸುವ ಆಡಳಿತ ನಡೆಯುತ್ತಿದೆ. ಅವರು ಮಾಡುತ್ತಿರುವುದನ್ನು ವಿರೋಧಿಸಿದರೆ ಮುಂದಿನ ಚುನಾವಣೆಯಲ್ಲಿ ಕಷ್ಟವಾಗಬಹುದು ಎನ್ನುವ ಆತಂಕ ಆಳುತ್ತಿರುವ ಪಕ್ಷಕ್ಕೆ ಇರಬಹುದು.
ಹೀಗೆ ಶನಿವಾರ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಹೋಗುವಾಗ ಗಲಾಟೆ ಆಗಿದೆ. ಎರಡೂ ಸಮುದಾಯದಿಂದ ಪರಸ್ಪರ ಕಲ್ಲು ತೂರಾಟ ನಡೆದಿದೆ. ಹಲವು ಮನೆಗಳಿಗೆ, ವಾಹನಗಳಿಗೆ ಕಲ್ಲು ಬಿಸಾಡಿ ಹಾನಿ ಮಾಡಲಾಗಿದೆ. ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಈಗ ವಿಷಯ ಇರುವುದು ಈ ದೇಶದ ಮೇಲೆ ದಂಡೆತ್ತಿ ಬಂದ ಪರದೇಶಿಯರನ್ನು ಈ ದೇಶದಲ್ಲಿ ಕೊಂಡಾಡುವ ಮನಸ್ಥಿತಿ ಯಾಕೆ? ಅದಕ್ಕೆ ಅನುಮತಿ ನೀಡುವುದು ಯಾಕೆ? ಆಯುಧ ಭಯ ಉತ್ಪಾದಿಸುವ ರೀತಿಯಲ್ಲಿ ಟ್ಯಾಬ್ಲೋ ಪ್ರದರ್ಶಿಸುವುದು ಸರಿಯಾ? ಸದ್ಯ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡವಾಗಿದೆ .
Leave A Reply