ಮುಂದಿನ ಶುಕ್ರವಾರ ಮುಸ್ಲಿಮರಿಗೆ ಗಲಭೆಗೆ ಕರೆಕೊಟ್ಟ ಖಾಲಿದ್ ಮಶಾಲ್!
ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು ಹಣಕಾಸು ಪೂರೈಕೆದಾರ ಖಾಲಿದ್ ಮಶಾಲ್ ವಿಶ್ವದ್ಯಾಂತ ಇರುವ ಮುಸ್ಲಿಮರಿಗೆ ಗಲಭೆಗೆ ಕರೆ ಕೊಟ್ಟಿದ್ದಾನೆ. ಮುಂದಿನ ಶುಕ್ರವಾರ ಜಗತ್ತಿನಾದ್ಯಂತ ಇರುವ ಮುಸ್ಲಿಮರು ಮತ್ತು ಮುಸ್ಲಿಮ್ ದೇಶದಲ್ಲಿ ವಾಸಿಸುವವರಿಗೆ ಎಲ್ಲಿ ಇದ್ದಿರೋ ಅಲ್ಲಿಂದಲೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವಂತೆ ಸೂಚನೆ ನೀಡಿದ್ದಾನೆ. ನಿಮ್ಮ ಆಕ್ರೋಶ ಹೇಗಿರಬೇಕು ಎಂದರೆ ಅದು ಪ್ರವಾಹದ ರೀತಿಯಲ್ಲಿ ಕಾಣಬೇಕು. ನಿಮ್ಮ ಉತ್ತರ ಯಹೂದಿಗಳಿಗೆ ಮತ್ತು ಅಮೇರಿಕಾಕ್ಕೆ ಸಂದೇಶ ನೀಡಬೇಕು ಎಂದು ತಿಳಿಸಿದ್ದಾನೆ.
“ಫೈನಾನ್ಸಿಯಲ್ ಜಿಹಾದ್”
ಅವನ ಎರಡನೇಯ ಸಂದೇಶ ಏನೆಂದರೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಮುಸ್ಲಿಮರು “ಫೈನಾನ್ಸಿಯಲ್ ಜಿಹಾದ್” ಇದಕ್ಕೆ ಕೈಜೋಡಿಸಬೇಕು. ಎಲ್ಲಾ ಕಡೆಯಿಂದ ಹಣ ಸಂಗ್ರಹವಾಗಬೇಕು. ಈ ಹಣ ಗಾಜಾದಲ್ಲಿರುವ ಹೋರಾಟಗಾರರಿಗೆ ನೀಡಿ ಇನ್ನಷ್ಟು ವಿಧ್ವಂಸಕ ಕೃತ್ಯ ಮಾಡಲು ಅವರಿಗೆ ಹಣದ ನೆರವನ್ನು ನೀಡೋಣ ಎಂದು ಹೇಳಿದ್ದಾನೆ.
ಅವನು ಇನ್ನಷ್ಟು ಮುಂದುವರೆದು ಮುಸ್ಲಿಂ ರಾಷ್ಟ್ರಗಳು ಮತ್ತು ಮುಸ್ಲಿಂ ನಾಯಕರು ತಮ್ಮ ರಾಜಕೀಯ ಶಕ್ತಿಗಳನ್ನು ಬಳಸಿ ಇಸ್ರೇಲ್ ಯೋಧರು ಗಾಜಾ ಮೇಲೆ ದಾಳಿ ಮಾಡುವುದನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾನೆ.
ಜಿಹಾದಿನಲ್ಲಿ ಭಾಗವಹಿಸಿ!
ಅವನ ನಾಲ್ಕನೇ ಸಂದೇಶ ಬಹಳ ಪ್ರಮುಖವಾಗಿದ್ದು, ಎಲ್ಲಾ ಮುಸ್ಲಿಮರು ತಮ್ಮ ಹೃದಯದಿಂದ ಧರ್ಮಯುದ್ಧ ಅಂದರೆ ಜಿಹಾದಿನಲ್ಲಿ ಭಾಗವಹಿಸಬೇಕು. ಆಲ್ ಅಕ್ಸಾ ( ಇಸ್ರೇಲಿನ ಜೆರುಸಲೇಮ್ ನಲ್ಲಿ ಮುಸ್ಲಿಮರ ನಂಬಿಕೆಯ ಶ್ರದ್ಧಾಕೇಂದ್ರ) ಇದಕ್ಕಾಗಿ ಪ್ರಾಣ ಅರ್ಪಿಸಲು ತಯಾರಿರಬೇಕು. ಮುಸ್ಲಿಮರು ಯಹೂದಿಗಳ ವಿರುದ್ಧ ಹೋರಾಡಲು ಎಲ್ಲವನ್ನು ತ್ಯಾಗ ಮಾಡಲು ಕೂಡ ಸಿದ್ಧರಿರಬೇಕು. ಅದರೊಂದಿಗೆ ಇಸ್ರೇಲಿನ ನೆರೆಹೊರೆಯ ದೇಶಗಳಾದ ಜೋರ್ಡಾನ್, ಸಿರಿಯಾ, ಲೆಬನಾನ್, ಈಜಿಪ್ಟ್ ಹಾಗೂ ಇನ್ನಿತರ ದೇಶಗಳಲ್ಲಿರುವ ಮುಸ್ಲಿಮರು ತಮ್ಮದೇ ಶಕ್ತಿ, ಸಾಮರ್ತ್ಯ ಬಳಸಿ ಇಸ್ರೇಲಿನ ಗಡಿಯೊಳಗೆ ನುಗ್ಗಬೇಕು. ಜಿಹಾದ್ ಕೇವಲ ಪುಸ್ತಕಗಳಲ್ಲಿ ಮಾತ್ರವಲ್ಲ ಯುದ್ಧಭೂಮಿಯಲ್ಲಿ ತೋರಿಸಬೇಕು. ಮುಜಾಯುದ್ದೀನ್ ದಾಳಿಗಳು ನಡೆದು ಪ್ಯಾಲೇಸ್ತಿನ್ ನಲ್ಲಿ ರಕ್ತ ಬಸಿದಾದರೂ ಗೆಲ್ಲಬೇಕು ಎಂದು ಹೇಳಿದ್ದಾನೆ.
ಕೊನೆಯದಾಗಿ ಇಷ್ಟೆಲ್ಲ ಮಾಡುವಾಗ ಹಣ ಅಗತ್ಯವಾಗಿದ್ದರೂ ನಮಗೆ ಈಗ ನಿಮ್ಮ ಹೃದಯ ಮತ್ತು ರಕ್ತ ಬೇಕಾಗಿದೆ. ಪ್ಯಾಲೇಸ್ತಿನ್ ಗಾಗಿ ಯಾವ ತ್ಯಾಗಕ್ಕೂ ನೀವು ಸಿದ್ಧರಾಗಿ ಎಂದು ಮುಸ್ಲಿಮರಿಗೆ ಕರೆ ಕೊಟ್ಟಿದ್ದಾನೆ.
Leave A Reply