• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪುತ್ತೂರಿನ ಹತ್ತನೆ ತರಗತಿಯ ಹುಡುಗಿಯ ಹಿಂದೆ ಬಿದ್ದಿದ್ದ ಮುಸ್ಲಿಂ ಹುಡುಗ!

TNN Correspondent Posted On August 28, 2017
0


0
Shares
  • Share On Facebook
  • Tweet It

ಪ್ರೀತಿಸದಿದ್ದರೆ ಆಸಿಡ್ ಹಾಕಿ ಸುಡುವ ಬೆದರಿಕೆ!

ವರ್ಷಕ್ಕೆ ಒಂದು ಸಾವಿರ ಹಿಂದೂ ಹುಡುಗಿಯರನ್ನು ಮತಾಂತರ ಮಾಡಲೇಬೇಕು ಎನ್ನುವ ಫಮರ್ಾನು ಕೆಲವು ಸಂಘಟನೆಗಳಿಗೆ ಹೋಗಿದೆ ಎನ್ನುವ ವಿಚಾರವನ್ನು ಕೇಂದ್ರಿಯ ಗುಪ್ತಚರ ಇಲಾಖೆ ಹೊರಡಿಸಿದೆ. ಮತಾಂತರದ ಉದ್ದೇಶ ಮೊದಲಾದರೆ ನಂತರ ಆ ಹೆಣ್ಣುಮಕ್ಕಳನ್ನು ಭಯೋತ್ಪಾದಕ ಸಂಘಟನೆಗಳ ಸದಸ್ಯರ ಕಾಮತೃಷೆ ಪೂರೈಸಲು ಎನ್ನುವ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಹಿಂದೂ ಹೆಣ್ಣು ಮಕ್ಕಳ ಭವಿಷ್ಯವನ್ನು ಮುಗಿಸಲು ಎಷ್ಟು ಫಂಡ್ ಬೇಕೊ ಅಷ್ಟು ಕೊಡಲು ಮತಾಂಧ ವಿದೇಶಿ ಸಂಘಟನೆಗಳು ಕನರ್ಾಟಕ, ಕೇರಳದ ಮುಸ್ಲಿಂ ಯುವಕರಿಗೆ ಆಮಿಷ ಒಡ್ಡಿವೆ ಎನ್ನುವ ಗುಪ್ತ ವರದಿಯನ್ನು ರಾಷ್ಟ್ರೀಯ ತನಿಖಾ ದಳ ಕಂಡುಕೊಂಡಿದೆ. ಅದಕ್ಕೆ ಸರಿಯಾಗಿ ಪುತ್ತೂರಿನ ಹೆಣ್ಣುಮಗಳೊಬ್ಬಳ ಕಥೆ ಸಾಕ್ಷ್ಯ ಒದಗಿಸುತ್ತಿದೆ.

ಆಕೆ ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿ. ಮನೆಯಿಂದ ಶಾಲೆಗೆ ಎರಡು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗಿರುವ ಅನಿವಾರ್ಯತೆ. ಅದು ಹಳ್ಳಿಗಳಲ್ಲಿ ಸಹಜ ಮತ್ತು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಒಂದು ದಿನ ಅವಳ ಮೊಬೈಲಿಗೆ ಹಾಯ್ ಎನ್ನುವಂತಹ ಮೇಸೆಜ್ ಬರುತ್ತದೆ.

ನಿಮಗೆ ಗೊತ್ತಿರಲಿ, ಈ ಹತ್ತನೇ ಮತ್ತು ಪಿಯುಸಿ ಪ್ರಥಮ ವರ್ಷದಲ್ಲಿ ಇರುವ ಹೆಣ್ಣುಮಕ್ಕಳಿಗೆ ಕೈಯಲ್ಲಿ ಮೊಬೈಲ್ ಕೊಡುವುದೆಂದರೆ ಅದೊಂದು ತರಹದ ರಿಸ್ಕ್. ಆದರೆ ಒಬ್ಬಳೇ ಶಾಲೆಗೆ ಹೋಗಿ ಬರುವಾಗ ಅಕಸ್ಮಾತ್ ಆಗಿ ಯಾವುದಾದರೂ ತೊಂದರೆಯಾದರೆ ಅಥವಾ ಹೆಚ್ಚು ಕಡಿಮೆಯಾದರೆ ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ಪೋಷಕರು ಕೊಟ್ಟಿರುತ್ತಾರೆ. ಹಾಗೆ ಈ ಯುವತಿಯ ಕೈಯಲ್ಲೂ ಒಂದು ಮೊಬೈಲ್ ಇತ್ತು.
ಹುಡುಗಿ ನೋಡಲು ಆಕರ್ಷಕವಾಗಿದ್ದಳು. ಹದವಾದ ಎತ್ತರ, ಯಾವುದೇ ವಿಕಾರಗಳಿಲ್ಲದೆ ಫೀಟ್ ಆಗಿರುವ ದೇಹ, ಹಾಲಿನಂತಹ ಬಿಳುಪು, ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡುವ ನಿಲುವು. ಅದು ಯಾವ ರೀತಿಯಲ್ಲಿ ಒಬ್ಬ ಹುಡುಗನಿಗೆ ಇಷ್ಟವಾಯಿತು ಎಂದರೆ ಅವಳನ್ನು ಹುರಿದು ಮುಕ್ಕಿ ತಿನ್ನಬೇಕೆನ್ನಿಸುವಷ್ಟು ಕಾತರ. ಅವನ ಹೆಸರು ಹಕೀಮ್ ಮುಕರ್ೆತ್ತಿ.

ಅವಳ ಫೋನ್ ನಂಬರನ್ನು ಯಾರಿಂದಲೋ ಕಾಡಿಬೇಡಿ ಪಡೆದುಕೊಂಡ ಹಕೀಮ್ ಅವಳಿಗೆ ಮೇಸೆಜ್ ಗಳನ್ನು ರವಾನಿಸಲು ತೊಡಗುತ್ತಾನೆ. ಆದರೆ ಈ ಬಾರಿ ಅವನ ಭಂಡ ಧೈರ್ಯವೊ ಅಥವಾ ಏನೂ ಆಗುವುದಿಲ್ಲ ಎನ್ನುವ ನಿರ್ಲಕ್ಷ್ಯವೋ ನೇರವಾಗಿ ತನ್ನ ನಿಜನಾಮಧೇಯವನ್ನೇ ಹೇಳುತ್ತಾನೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಈ ಲವ್ ಜಿಹಾದಿಗಳು ತಮ್ಮ ನಿಜ ಹೆಸರನ್ನು ಹೇಳದೆ ಯಾವುದಾದರೂ ಹಿಂದೂ ಹೆಸರನ್ನೇ ಹೇಳುತ್ತಾರೆ. ಆದರೆ ಹಕೀಂ ಮುಕರ್ೆತ್ತಿ ಹಾಗೆ ಮಾಡಲು ಹೋಗುವುದಿಲ್ಲ. ಆದರೂ ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ತಾನು ಮುಸ್ಲಿಂ ಎಂದು ಯಾರಿಗೂ ಹೇಳಬೇಡಾ, ನನ್ನದು ನಿಜವಾದ ಪ್ರೀತಿ. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ನನ್ನೊಡನೆ ಬಾ. ಒಂದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಅದರೊಂದಿಗೆ ತಾನು ಮುಸ್ಲಿಂ ಎಂದು ಗೊತ್ತಾದರೆ ಈ ಹಿಂದೂ ಸಂಘಟನೆಯವರು ಗುಂಪಾಗಿ ಬಂದು ಹೊಡೆಯುತ್ತಾರೆ, ಪ್ರೀತಿಯ ಆಳ ಗೊತ್ತಿಲ್ಲದವರು ಎಂದು ಹಿಂದೂ ಸಂಘಟನೆಗಳ ಬಗ್ಗೆ ಅವಳಿಗೆ ಮೈಂಡ್ ವಾಶ್ ಮಾಡುತ್ತಾನೆ.
ಅವಳ ಬಳಿ ಎಷ್ಟು ಬಾರಿ ಕರೆದರೂ ಆಕೆ ಬರಲು ಒಪ್ಪಿಕೊಳ್ಳದೆ ಇದ್ದಾಗ ತನ್ನ ಇಬ್ಬರು ಗೆಳೆಯರನ್ನು ಕರೆದುಕೊಂಡು ಅವಳನ್ನು ಹಿಂಬಾಲಿಸುತ್ತಾನೆ. ಹಕೀಂ ಏನೂ ಪ್ರಯತ್ನ ಮಾಡಿದರೂ ಅವಳು ಒಪ್ಪುವುದಿಲ್ಲ ಎನಿಸಿದಾಗ ಅವಳನ್ನು ಹೆದರಿಸಿ ಏನಾದರೂ ಮಾಡುವ ಬಗ್ಗೆ ಯೋಚಿಸುತ್ತಾನೆ. ನಿನ್ನ ತಂದೆಯ ಅಂಗಡಿಗೆ ರಾತ್ರಿ ಬಂದು ಬೆಂಕಿ ಕೊಟ್ಟು ಹೋಗುತ್ತೇನೆ, ನಂತರ ನಿಮಗೆ ಊಟಕ್ಕೂ ಗತಿಯಿಲ್ಲದ ಹಾಗೆ ಮಾಡುತ್ತೇನೆ ಎನ್ನುತ್ತಾನೆ. ಏನೂ ಆಗಲಿಕ್ಕಿಲ್ಲ ಎಂದು ಅವಳು ಧೈರ್ಯ ತೆಗೆದುಕೊಂಡಳು ಎಂದು ಇವನಿಗೆ ಅನಿಸಿದಾಗ ಒಂದು ದಿನ ನೀರಿನ ತರಹ ಒಂದು ಬಾಟಲಿಯಲ್ಲಿ ತಂದು ಇದು ಆಸಿಡ್, ಮುಖಕ್ಕೆ ಹಾಕಿದರೆ ಸುಟ್ಟು ಹೋಗುತ್ತದೆ ಎನ್ನುತ್ತಾನೆ. ಅವಳ ಫೋಟೋ ಮೊಬೈಲಿನಲ್ಲಿ ತೆಗೆದು ಇದನ್ನು ಎಡಿಟ್ ಮಾಡಿ ನಿನ್ನ ಮಾನ ಹರಾಜಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ. ಇಷ್ಟೆಲ್ಲ ಆಗುವಾಗ ಹುಡುಗಿಗೆ ಸಣ್ಣ ಮಟ್ಟಿಗಿನ ಹೆದರಿಕೆ ಶುರುವಾಗುತ್ತದೆ.

ಇವನನ್ನು ಸಾಗ ಹಾಕಬೇಕಾದರೆ ಪ್ರೀತಿಸುತ್ತೇನೆ ಎಂದು ಸುಳ್ಳು ಹೇಳೋಣ ಎಂದು ಅಂದುಕೊಳ್ಳುವ ಹುಡುಗಿಗೆ ಇವನು ಹೊಸ ಬೇಡಿಕೆ ಇಡುತ್ತಾನೆ. ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಗ್ಯಾರಂಟಿಯಾಗಬೇಕಾದರೆ ಹಣೆಗೆ ಕುಂಕುಮ ಇಡಬಾರದು ಎನ್ನುತ್ತಾನೆ, ಬಳೆ ತೊಡಬಾರದು ಎನ್ನುತ್ತಾನೆ, ರಂಜಾನ್ ಹಬ್ಬದಲ್ಲಿ ಉಪವಾಸ ಮಾಡುವಂತೆ ಒತ್ತಾಯ ಮಾಡುತ್ತಾನೆ. ಕೊನೆ ಕೊನೆಗೆ ಇವನ ಕೆಟ್ಟ ಚಾಳಿ ಎಲ್ಲಿಗೆ ತನಕ ಹೋಗುತ್ತೇ ಎಂದರೆ ” ನನ್ನ ಅಮ್ಮನಿಗೆ ಹುಶಾರಿಲ್ಲ, ಖಚರ್ಿಗೆ ನಿನ್ನ ಬಂಗಾರದ ಕಿವಿಯ ಬೆಂಡೋಲೆ ನೀಡು” ಎಂದು ಪೀಡಿಸುತ್ತಾನೆ. ಅದರ ನಂತರ ನನ್ನ ಗೆಳೆಯರಿಗೆ ನಿನ್ನ ಕ್ಲಾಸಿನಲ್ಲಿರುವ ಬೇರೆ ಹಿಂದೂ ಹೆಣ್ಣುಮಕ್ಕಳ ಮೇಲೆ ಲವ್ ಆಗಿದೆ, ಅವರ ಫೋನ್ ನಂಬರ್ ಕೊಡಿಸು ಎಂದು ಹೇಳಿ ಪೀಡಿಸಲು ಶುರು ಮಾಡುತ್ತಾನೆ.

ಹುಡುಗಿ ಅವಳ ಕಿವಿಯ ಬೆಂಡೋಲೆಯನ್ನು ಕೊಟ್ಟು ಮನೆಗೆ ಬಂದ ಬಳಿಕ ಕಿವಿಯಲ್ಲಿ ಬೆಂಡೋಲೆ ಇಲ್ಲದ್ದು ನೋಡಿ ಮನೆಯವರಿಗೆ ಈ ಲವ್ ಜಿಹಾದ್ ಕಥೆ ಗೊತ್ತಾಗಿದೆ. ಪ್ರಕರಣವನ್ನು ಅವರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಗಮನಕ್ಕೆ ತಂದಿದ್ದಾರೆ. ಅವರ ಸಲಹೆಯಂತೆ ಬೆಳ್ಳಾರೆ ಪೊಲೀಸ್ ಸ್ಟೇಶನ್ ನಲ್ಲಿ ಫೋಕ್ಸೋ ಕಾಯ್ದೆ ಅಡಿಯಲ್ಲಿ ಹಕೀಂ ಮುಕರ್ೆತ್ತಿ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿಗೆ ಸಹಕರಿಸಿದ ಸಫ್ವಾನ್ ಪಾಲ್ತಾಡಿ ಹಾಗೂ ಬದ್ದುರುದ್ದೀನ್ ಮುಕರ್ೆತ್ತಿ ಮೇಲೆಯೂ ವಿಚಾರಣೆಯ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತಾಂತರ, ಲವ್ ಜಿಹಾದ್ ಇಲ್ಲ ಎಂದು ಎಷ್ಟೇ ಮುಸ್ಲಿಂ ಮುಖಂಡರು ಹೇಳುತ್ತಾ ಬರುತ್ತಿದ್ದರೂ ಹಳ್ಳಿಗಳಲ್ಲಿ ಇದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಅನೇಕ ಬಾರಿ ಬಡತನ ಇದಕ್ಕೆ ಕಾರಣವಾಗಿ ಹಿಂದೂ ಹೆಣ್ಣುಗಳು ಎಲ್ಲಿಯಾದರೂ ಒಳ್ಳೆಯ ಜೀವನ ನೋಡೋಣ ಎಂದು ಮನಸ್ಸು ಮಾಡಿದರೆ ನಂತರ ಅವರು ಸಿಗುವುದು ಹೆಣವಾಗಿ. ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಹಿಂದೂ ಹೆಣ್ಣುಮಗಳೊಬ್ಬಳು ಇಸ್ಲಾಂ ಧರ್ಮ ಅಧ್ಯಯನ ಮಾಡುತ್ತೇನೆ ಎಂದು ಹೊರಟು ನಂತರ ಕಾಣೆಯಾಗಿದ್ದಳು. ಅವಳನ್ನು ನಿರಂತರವಾಗಿ ಹುಡುಕಿದ ನಂತರ ಸಿಕ್ಕಿದ್ದು ಮುಸ್ಲಿಂ ಆಗಿ!!!

0
Shares
  • Share On Facebook
  • Tweet It


love jihad


Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
You may also like
ಓಡಿ ಹೋಗುವ ಮೊದಲು ಒಮ್ಮೆ ತಂದೆಯ ಪ್ರೀತಿಯನ್ನು ನೆನಪಿಸಿಕೊಳ್ಳಿ!
December 22, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search