• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪೊಲೀಸರು ಸುದ್ದಿಗೋಷ್ಟಿ ಮಾಡಿ ವಿಷಯ ತಿಳಿಸಲಿ!

TNN Correspondent Posted On August 28, 2017


  • Share On Facebook
  • Tweet It

ಕಾವ್ಯಾ ಸಾವಿನ ನಿಗೂಢತೆಯನ್ನು ಬಹಿರಂಗ ಪಡಿಸಿ ಎನ್ನುವ ಬೇಡಿಕೆಯನ್ನು ಇಟ್ಟುಕೊಂಡೇ ಇಷ್ಟು ದಿನ ಪ್ರತಿಭಟನೆಗಳು ಆಗಿವೆ. ಇಲ್ಲಿ ಈ ಪ್ರಶ್ನೆಯನ್ನು ಎತ್ತಿರುವವರು ವಿದ್ಯಾರ್ಥಿಗಳು. ಈ ಬೇಡಿಕೆಯಲ್ಲಿ ನ್ಯಾಯ ಇದೆ ಎಂದು ಯಾರಿಗಾದರೂ ಅನಿಸದೇ ಇರುವುದಿಲ್ಲ. ಆದರೆ ಪೊಲೀಸ್ ಅಧಿಕಾರಿಗಳು ಯಾವುದೇ ಒಂದು ಅನುಮಾನಾಸ್ಪದ ಸಾವಿನ ಪ್ರಕರಣವಾದಾಗ ಅದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿಯನ್ನು ನಡೆಸುತ್ತಾರೆ. ಆ ಸುದ್ದಿಗೋಷ್ಟಿಯಲ್ಲಿ ಪ್ರಕರಣದಲ್ಲಿ ತಮ್ಮ ತನಿಖೆ ಎಲ್ಲಿಯ ತನಕ ಮುಂದುವರೆದಿದೆ ಎಂದು ತಿಳಿಸುತ್ತಾರೆ. ಅದರ ನಂತರ ಯಾರ್ಯಾರನ್ನು ವಿಚಾರಣೆ ನಡೆಸಿದ್ದೇವೆ ಎನ್ನುತ್ತಾರೆ. ಅದರ ಬಳಿಕ ಸುದ್ದಿಗಾರರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಡುತ್ತಾರೆ. ವರದಿಗಾರರು ತುಂಬಾ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ತನಿಖೆಯ ದೃಷ್ಟಿಯಿಂದ ಅವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದಷ್ಟೇ ಹೇಳುತ್ತಾರೆ.

ಈ ಪ್ರಕರಣದಲ್ಲಿ ಪೊಲೀಸರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಇಲ್ಲಿಯ ತನಕ ಯಾವುದೇ ಸುದ್ದಿಗೋಷ್ಟಿ ಮಾಡಿಲ್ಲ. ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಅದಕ್ಕಾಗಿಯೇ ಇಷ್ಟೆಲ್ಲ ಗೊಂದಲಗಳು ಹರಡುತ್ತಿರುವುದು. ಸಾಮಾಜಿಕ ತಾಣಗಳಲ್ಲಿ ಈ ವಿಷಯದ ಕುರಿತು ಜನ ತಮ್ಮ ಅಭಿಪ್ರಾಯಗಳನ್ನು ಮೂಗಿನ ನೇರಕ್ಕೆ ಹೇಳುತ್ತಾ ಇರುವುದು. ಕಮ್ಯೂನಿಷ್ಟರು ತಮ್ಮ ಟೀಕೆಗಳನ್ನು ಹೇಳಲು ಇದೇ ಸೂಕ್ತ ಸಮಯ ಎಂದು ಅಂದುಕೊಂಡಿರುವುದು. ಸರ್ವ ಕಾಲೇಜು ವಿದ್ಯಾರ್ಥಿಗಳ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸುತ್ತಿರುವುದು ಮತ್ತು ಬಹಳ ಮುಖ್ಯವಾಗಿ ಎಲ್ಲ ಪರೋಕ್ಷ ಟೀಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಮೋಹನ್ ಆಳ್ವರಿಗೆನೆ ಮಾಡುತ್ತಿರುವುದು ಎಂದು ಆಳ್ವ ಬೆಂಬಲಿಗರು ಅಂದುಕೊಂಡು ಅದಕ್ಕೆ ಪ್ರತಿಯಾಗಿ ತಮ್ಮ ಕಡೆಯಿಂದ ಸಭೆಗಳನ್ನು ಮಾಡಿ ಸಣ್ಣದಿರುವ ಜ್ವಾಲೆಯನ್ನು ದೊಡ್ಡದು ಮಾಡಲು ತಮ್ಮ ಕೊಡುಗೆಯನ್ನು ಕೊಡುತ್ತಿರುವುದು.

ಈ ಪ್ರಕರಣದಲ್ಲಿ ಕಾವ್ಯಾಳ ದೈಹಿಕ ಶಿಕ್ಷಕರನ್ನು ಎಳೆದು ತರಬೇಡಿ ಎಂದು ಮೊದಲು ಹೇಳಿದ್ದೇ ಆಳ್ವರ ಬೆಂಬಲಿಗರು. ಆ ವ್ಯಕ್ತಿ ಅಮಾಯಕ ಎಂದು ಬೇರೆಯವರು ಸಂಶಯ ಪಡುವ ಮೊದಲೇ ಇವರು ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು. ಇರಬಹುದು, ಆ ದೈಹಿಕ ಶಿಕ್ಷಕರು ತಪ್ಪಿತಸ್ಥರಲ್ಲದೇ ಇರಬಹುದು. ಆದರೆ ಅವರ ಪಾತ್ರ ಈ ಒಟ್ಟು ಪ್ರಕರಣದಲ್ಲಿ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಂತ ಅವರು ಕೊಲೆ ಮಾಡಿದ್ದಾರೆ ಎಂದು ಕೂಡ ಹೇಳಲು ಸಾಧ್ಯವಿಲ್ಲ. ಅವರನ್ನು ಸರಿಯಾಗಿ ತನಿಖೆ ನಡೆಸುವ ಹೊಣೆ ಪೊಲೀಸರ ಮೇಲಿದೆ. ಒಂದು ವೇಳೆ ಮಾಡಿದ್ದಾರೆಂದರೆ ಪೊಲೀಸರು ಅದನ್ನು ಹೇಳಲಿ.

ಇನ್ನು ಕಾವ್ಯಾ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿ ಒಂದು ತಿಂಗಳಾಗುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ಅದಕ್ಕೆ ಅವಳ ಹಿಂದೆ ಅಂದರೆ ಒಂಭತ್ತನೆ ತರಗತಿಯ ಹಿನ್ನಲೆ ಕೂಡ ಮುಖ್ಯವಾಗುತ್ತದೆ. ಅಲ್ಲಿನ ದೈಹಿಕ ಶಿಕ್ಷಕರ ವಿಚಾರಣೆ ಕೂಡ ಮುಖ್ಯ. ಅದನ್ನು ಪೊಲೀಸರು ತನಿಖೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರು ಕೆಲವು ಬಹುಮುಖ್ಯ ವಿಷಯಗಳನ್ನು ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪೊಲೀಸರು ಅದನ್ನು ಕೂಡ ಹೇಳುತ್ತಿಲ್ಲ. ಹುಡುಗಿ ಕಾವ್ಯಾಳದ್ದು ಆತ್ಮಹತ್ಯೆ ಎಂದು ಪೊಲೀಸರು ತಮ್ಮ ಮಧ್ಯಂತರ ತನಿಖೆಯಲ್ಲಿ ಕಂಡುಕೊಂಡಿರುವ ಸತ್ಯ ಎಂದು ಅವರ ಪ್ರಕಟನೆಯಿಂದ ಗೊತ್ತಾಗಿದೆ. ಆದರೆ ತಿಂಗಳಾದರೂ ಅವರು ಅದಕ್ಕೆ ಅಂತಿಮ ರೂಪ ನೀಡುತ್ತಿಲ್ಲ. ಇಲ್ಲಿ ಎರಡು ವಿಷಯಗಳು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅವು ಹೌದಾದರೆ ಪೊಲೀಸರು ಹೇಳಲು ಹಿಂಜರಿಯುತ್ತಿದ್ದಾರೆ ಎಂದೆ ಅರ್ಥ. ಮೊದಲನೆಯದಾಗಿ ಹುಡುಗಿ ಕಟೀಲು ಶಾಲೆಯಲ್ಲಿ ಕಲಿಯುವಾಗ ಯಾವುದಾದರೂ ಪ್ರೇಮಪಾಶದಲ್ಲಿ ಸಿಲುಕಿದ್ದಳಾ? ಅಲ್ಲಿಂದ ಇಲ್ಲಿ ಬಂದ ನಂತರ ಆ ಪ್ರೇಮ ಮುಂದುವರೆಸಿಕೊಂಡು ಹೋಗಲಾರದೆ ದು:ಖಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡಳಾ ಎನ್ನುವುದು. ಎರಡನೇಯದಾಗಿ ಡಿಪ್ರೆಶನ್ ಗೆ ಒಳಗಾಗಿಯೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಹೌದಾದರೆ ಅವಳು ಸಾಯುವ ಹಿಂದಿನ ಯಾವುದಾದರೂ ಪಂದ್ಯದಲ್ಲಿ ಸರಿಯಾಗಿ ಆಡದೇ ಇದ್ದ ಕಾರಣ ಅವಳ ಹಿನ್ನಲೆ ಗೊತ್ತಿದ್ದ ಯಾರಾದರೂ ಅವಳನ್ನು ಹಂಗಿಸಿದ್ದಕ್ಕೆ ಅವಮಾನಗೊಂಡು ಕಾವ್ಯಾ ಆತ್ಮಹತ್ಯೆಗೆ ನಿರ್ಧಾರಾ ಮಾಡಿದಳಾ? ಮೂಡಬಿದ್ರೆ, ಕಟೀಲು ಸೇರಿ ಎಲ್ಲಾ ಕಡೆ ಸದ್ಯದ ಚರ್ಚೆಯಲ್ಲಿರುವ ವಿಷಯಗಳು ಇವೇ. ಪೊಲೀಸರು ಇದಕ್ಕೆ ಉತ್ತರ ಕೊಡಬೇಕು.
ಹಾಗಂತ ಹೀಗೆ ಆಗಿರಬಹುದು ಎನ್ನುವ ಯಾರೋ ಕೆಲವರದ್ದು ಊಹೆ ಕೂಡ ಆಗಿರಬಹುದು. ಅವಳು ರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸಲೇಬೇಕೆಂಬ ಶಾಲೆಯ, ದೈಹಿಕ ಶಿಕ್ಷಕರ ಒತ್ತಡ ಕೂಡ ಇರುವ ಸಾಧ್ಯತೆಗಳಿವೆ ಎನ್ನುವುದು ಕೂಡ ಇದೆ. ಹಿಂದೆ ಕಟೀಲು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅವಳಿಗೆ ಸಾಧನೆ ಎನ್ನುವುದು ಐಚ್ಛಿಕವಾಗಿತ್ತು. ಆದರೆ ಆಳ್ವಾಸ್ ನಲ್ಲಿ ಅದು ಕಡ್ಡಾಯವಾಗಿರುತ್ತದೆ. ಅವಳ ಕ್ರೀಡಾಸಾಧನೆ ನೋಡಿಯೇ ಅಲ್ಲಿ ಫ್ರೀ ಶಿಕ್ಷಣ ಸಹಿತ ಎಲ್ಲಾ ಸೌಲಭ್ಯ ಕೊಡುವ ಮಾನದಂಡ ಅನುಸರಿಸಲಾಗುತ್ತದೆ. ಬಹುಶ: ಹುಡುಗಿ ಒಂದೆರಡು ಪಂದ್ಯಗಳಲ್ಲಿ ಕಳಪೆ ಆಡಿದ್ದನ್ನೇ ಗಂಭೀರವಾಗಿ ತೆಗೆದುಕೊಂಡು ತನ್ನ ಜೀವನವೇ ವೇಸ್ಟ್ ಎಂದು ಅಂದುಕೊಂಡಳಾ?

ಕೊನೆಯದಾಗಿ ಒಂದಿಷ್ಟು ಜನ ಹೇಳುವುದೆನೆಂದರೆ ಈ ಪ್ರಾಯದಲ್ಲಿ ಡಿಪ್ರೆಶನ್ ಬರುವುದಿಲ್ಲ. ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಹುಟ್ಟಲ್ಲ. ಈ ವಯಸ್ಸಿನಲ್ಲಿ ಆತ್ಮಹತ್ಯೆ ನಿರ್ಧಾರಕ್ಕೆ ಮಕ್ಕಳು ಬರುವುದಿಲ್ಲ. ಹಾಗಾದರೆ ಏನು? ಕೊಲೆನಾ? ಚಕ್ರ ಮತ್ತೆ ಅಲ್ಲಿಯೇ ಬಂದು ನಿಲ್ಲುತ್ತದೆ. ವಿದ್ಯಾರ್ಥಿ ಸಂಘಟನೆಗಳು ಉಪವಾಸ ಪ್ರತಿಭಟನೆ ಮಾಡಿವೆ. ಉತ್ತರ ಕೊಡಬೇಕಾದವರು ಮೌನವಾಗಿದ್ದಾರೆ. ಕಾವ್ಯಾ ಉತ್ತರ ಸಿಗದ ಪ್ರಶ್ನೆಗಳಿಗೆ ಸಾಹಿತ್ಯವಾಗಿದ್ದಾಳೆ.

  • Share On Facebook
  • Tweet It


- Advertisement -
kavya alvas suicide


Trending Now
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Tulunadu News June 30, 2022
Leave A Reply

  • Recent Posts

    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
  • Popular Posts

    • 1
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 2
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 3
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 4
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 5
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search