ಊಟಕ್ಕೆ ಒಟ್ಟಿಗೆ ಕೂರಬೇಕೆನ್ನುವ ಹಠವಾದಿಗಳಿಗೆ ಉದ್ಯೋಗ, ಶಿಕ್ಷಣದಲ್ಲೂ ಇರುವ ಪಂಕ್ತಿ ಭೇದ ಕಾಣದೇ?
ದೇವಸ್ಥಾನದ ನೈವೇದ್ಯ, ಅನ್ನವನ್ನು ಪ್ರಸಾದ ಎಂದು ಸ್ವೀಕರಿಸುವ ಬದಲು ಊಟ ಎಂದು ಭಾವಿಸಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
ಈಗ ಯಾರಿಗೂ ಹಸಿವಿನ ಅನುಭವವಿಲ್ಲ, ದುಡ್ಡು ಕೊಟ್ಟರೆ ದೇವಸ್ಥಾನದ ಹತ್ತಿರವೇ ಎಲ್ಲವೂ ಸಿಗುತ್ತದೆ. ಆದರೂ ಪ್ರಸಾದದ ಭಾವನೆಯಿಲ್ಲದೆ ಬಂದು ಗಲಾಟೆ ಮಾಡುತ್ತಾರೆಂದರೆ ಅವರ ದುರುದ್ದೇಶ ಪೂರಿತವಾದ ಕೊಳಕು ಮನಸ್ಸಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಪಾಪ ಅದೆಷ್ಟೋ ಮಂದಿ ಕೇವಲ ಪ್ರಸಾದ ಎನ್ನುವ ಪೂಜ್ಯ ಭಾವನೆಯಿಂದ ಗಂಟೆಗಟ್ಟಲೆ ಕಾದು ಸ್ವೀಕರಿಸುವವರಿದ್ದಾರೆ.ಇಂತಹ ಕೆಲವು ತಿರುಬೋಕಿ ತಿಮ್ಮಂಡಿಗಳು ಮಾಡಿದ ಅನಾಚಾರಕ್ಕಾಗಿ ಅಂತಹ ಸಾತ್ವಿಕ ಸಮಾಜ ಕೂಡ ನಾಚಿಕೆ ಪಡುವಂತಾಗಿದೆ.
ಪಂಕ್ತಿ ಎಂದರೆ ಕೇವಲ ಊಟದ ವ್ಯವಸ್ಥೆಗೆ ಮಾತ್ರ ಅಲ್ಲ. ಪಂಕ್ತಿ ಎಂದರೆ ಸಾಲು. ಸಾಲಿನಲ್ಲಿ ಒಬ್ಬನಿಗೆ ಒಂದು ರೀತಿ ಮತ್ತೊಬ್ಬನಿಗೆ ಮತ್ತೊಂದು ರೀತಿಯಲ್ಲಿ ವ್ಯತ್ಯಾಸ ಮಾಡಿದರೆ ಅದು ಪಂಕ್ತಿ ಭೇದವಾಗುತ್ತದೆ. ಉದಾಹರಣೆಗೆ ಕೆಲವು ಸಂಗತಿಗಳನ್ನು ಕಾಣೋಣ..
ತರಗತಿಯ ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಕಾಣಬೇಕು. ಅದಿಲ್ಲದೆ ಕೆಲವು ಮಕ್ಕಳಿಗೆ ವಿಶೇಷವಾಗಿ ಶಾಲೆಯಿಂದ ಬಟ್ಟೆ -ಬರೆ ಬ್ಯಾಗುಗಳನ್ನು ಕೊಡಲಾಗುತ್ತದೆ. ಇದು ಪಂಕ್ತಿ ಭೇದವಲ್ಲದೆ ಮತ್ತೇನು.
ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ತೆಗೆದ ವಿದ್ಯಾರ್ಥಿಗಿಂತಲೂ ಓದದೆ ಕಡಿಮೆ ಅಂಕಗಳನ್ನು ತೆಗೆದ ವಿದ್ಯಾರ್ಥಿಗೆ ಜಾತಿಯ ಆಧಾರದಲ್ಲಿ ಕೂಡಲೇ ಕೆಲಸ ಸಿಗುತ್ತದೆ.ಇದು ಪಂಕ್ತಿ ಭೇದವಲ್ಲದೆ ಮತ್ತೇನು.
ಸರ್ಕಾರಕ್ಕೆ ಎಲ್ಲಾ ಪ್ರಜೆಗಳನ್ನು ಒಂದೇ ರೀತಿಯಾಗಿ ಕಾಣುವುದು ಕರ್ತವ್ಯ. ಆದರೆ ಜಾತಿಯ ಆಧಾರದಲ್ಲಿ ಕೆಲವರಿಗೆ ಮಾತ್ರ ಸರ್ಕಾರದ ಕೆಲವು ಕೆಲಸಗಳು ಸೀಮಿತವಾಗುತ್ತದೆ.ಇದು ಪಂಕ್ತಿ ಭೇದವಲ್ಲದೆ ಮತ್ತೇನು.
ಒಬ್ಬ ವ್ಯಕ್ತಿತ್ವದಿಂದ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಆದರೆ ಜಾತಿಯ ಆಧಾರದಲ್ಲಿ ಆತನಿಗೆ ಚುನಾವಣೆಗೆ ನಿಲ್ಲಲು ಕ್ಷೇತ್ರವೆ ಸಿಗುವುದಿಲ್ಲ.ಇದು ಪಂಕ್ತಿ ಭೇದವಲ್ಲದೆ ಮತ್ತೇನು.
ಈಗಿನ ವಾತಾವರಣವನ್ನು ಒಮ್ಮೆ ಗಮನಿಸಿ.ಶಾಲೆಯಿಂದ ಹಿಡಿದು ವಿಧಾನಸೌಧದ ತನಕ ಎಲ್ಲಾ ಕಡೆಯಲ್ಲೂ ಜಾತಿಯ ಆಧಾರದಲ್ಲಿಯೇ ಮಣೆ ಹಾಕುತ್ತಿರುವುದಲ್ಲವೆ.ಇದೆಲ್ಲವೂ ಕೂಡ ಪಂಕ್ತಿ ಭೇದವೆ ಆಗುತ್ತದೆ.ಮೀಸಲಾತಿಯ ಆಧಾರದಲ್ಲಿ ಇದು ಪಂಕ್ತಿ ಭೇದವಲ್ಲವೆಂದರೆ ಯಾವ ನ್ಯಾಯವಾಗುತ್ತದೆ.
ಇವತ್ತು ಜಾತಿಯ ಆಧಾರದಲ್ಲಿ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದೆ. ಜಾತಿಯ ಆಧಾರದಲ್ಲಿ ದೇವಸ್ಥಾನಗಳು ಕೂಡ ನಿರ್ಮಾಣವಾಗುತ್ತಿದೆ. ಒಂದು ವೇಳೆ ಇಂತಹಾ ಮನಸ್ಥಿತಿ ಬ್ರಾಹ್ಮಣರಿಗೆ ಇದ್ದಿದ್ದರೆ ಎಲ್ಲದರಲ್ಲಿಯೂ ಬ್ರಾಹ್ಮಣರ ಅಧಿಕಾರವೇ ಇರುತ್ತಿತ್ತು. ಇವತ್ತಿನ ತನಕ ಯಾವ ಜಮೀನು ಕೂಡ ಹೋಗುತ್ತಿರಲಿಲ್ಲ.
ಕ್ರೈಸ್ತರಷ್ಟು ಮುಸಲ್ಮಾನರಷ್ಟು ಹಿಂದುಗಳು ಸಂಘಟಿತರಾಗುವುದಿಲ್ಲ. ಒಂದು ವೇಳೆ ಹಾಗೆ ಸಂಘಟಿತರಾಗುತ್ತಿದ್ದರೆ ಹಿಂದೂಗಳಿಗೆ ಎದುರಾಗಿ ನಿಲ್ಲುವ ಸಾಮರ್ಥ್ಯ ಪ್ರಪಂಚದ ಯಾವುದೇ ಮತಕ್ಕೂ ಇಲ್ಲ. ಅದೇ ರೀತಿಯಾಗಿ ಉಳಿದ ಜಾತಿಗಳ ಹಾಗೆ ಬ್ರಾಹ್ಮಣರು ಸಂಘಟಿತರಾಗುತ್ತಿದ್ದರೆ, ಇಷ್ಟೊತ್ತಿಗೆ ಬ್ರಾಹ್ಮಣರಿಗೆ ಎದುರಾಗಿ ನಿಲ್ಲುವ ತಾಕತ್ತು ಯಾವ ಸಂಘಟನೆಗೂ ಇಲ್ಲ. ಆದರೆ ಇದು ಬ್ರಾಹ್ಮಣರಿಗೆ ಸಾಧ್ಯವಿಲ್ಲ. ಮತಗಳ ನಡುವೆ ಇರುವ ಹಿಂದುಗಳಿಗೂ, ಹಿಂದುಗಳ ನಡುವೆ ಇರುವ ಬ್ರಾಹ್ಮಣರಿಗೂ ಯಾವುದೇ ವ್ಯತ್ಯಾಸವಿಲ್ಲ.
ಜಾತಿಯ ಆಧಾರದಲ್ಲಿ ಬ್ರಾಹ್ಮಣರು ಭೇದ ಮಾಡುತ್ತಾರೆ ಎಂದಾಗಿದ್ದರೆ, ದೇವಸ್ಥಾನದಲ್ಲಿ ಹಾಗು ಪೂಜೆ ಮಾಡಿಸುವ ಬ್ರಾಹ್ಮಣ ಇವತ್ತಿನ ತನಕ ಎಲ್ಲಿಯಾದರೂ ಜಾತಿಯನ್ನು ಕೇಳಿದ್ದು ಇದ್ದರೆ ತೋರಿಸಲಿ. ಹೆಸರು ಹಾಗೂ ಗೊತ್ತಿದ್ದರೆ ನಕ್ಷತ್ರವನ್ನು ಕೇಳಿ ಆತ ಪೂಜೆಯನ್ನು ಸಮರ್ಪಿಸುತ್ತಾನೆ. ಜಾತಿಯನ್ನು ಮನೆತನವನ್ನು ಕೇಳುವ ಕ್ರಮವೇ ಇಲ್ಲ. ಅಷ್ಟು ಮಾತ್ರವಲ್ಲದೆ ರಥೋತ್ಸವದ ಮೂಲಕ ಎಲ್ಲರಿಗೂ ದೇವರನ್ನು ಕಾಣುವ ಹಾಗೂ ದೇವರನ್ನು ಮುಟ್ಟುವ ನೋಡುವ ಪ್ರಮೇಯವೇ ಬರುತ್ತಿರಲಿಲ್ಲ.
ಒಂದು ಕಾಲದಲ್ಲಿ ಊಟಕ್ಕೆ ಪರದಾಡುತ್ತಿದ್ದ ಬವಣೆಯನ್ನು ಕಂಡು ಏನು ಕೂಡ ಲಾಭವಿಲ್ಲದಿದ್ದರೂ ಕೂಡ ತಾವೇ ಅಡುಗೆ ಮಾಡಿ, ತಾವೇ ಬಡಿಸಿ, ಬಂದ ಭಕ್ತರನ್ನು ತಣಿಸಿದ ಒದ್ದಾಟತನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಈಗ ಸಮಾಜ ಇಂಥವರಿಗೆ ಕೊಡುವ ಗೌರವವನ್ನು ಕಂಡಾಗ ಹೇಸಿಗೆಯಾಗುತ್ತದೆ. ಬೇರೆ ಯಾವ ಸಮಾಜವಾದರೂ ಇಷ್ಟೊತ್ತಿಗೆ ಬದಲಾಗುತ್ತಿತ್ತು.ಆದರೆ ಗುಂಪುಗಾರಿಕೆಯಿಂದ ಘರ್ಷಣೆಗೆಳಿಯುವುದು ಬ್ರಾಹ್ಮಣರ ಜಾಯಮಾನದಲ್ಲಿಯೇ ಇಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡು ಬ್ರಾಹ್ಮಣರನ್ನು ಮತ್ತೆ ಮತ್ತೆ ತುಳಿಯುವ ಪ್ರಯತ್ನ ಸಾಗುತ್ತಲೇ ಇದೆ. ಇದು ನ್ಯಾಯವೇ.
ಸರ್ಕಾರಕ್ಕೆ ಇವತ್ತು ಅಬಕಾರಿ ಇಲಾಖೆಯ ಹಾಗೆ ಈ ಮುಜರಾಯಿ ಇಲಾಖೆ ಅಥವಾ ದೇವಸ್ಥಾನಗಳು, ಹಣ ಮಾಡಿಕೊಡುವ ಕೇಂದ್ರಗಳು.ಇಲ್ಲಿಯ ಯಾವುದೇ ಸಂಸ್ಕೃತಿ, ಅಥವಾ ಇಲ್ಲಿಯ ಯಾವುದೇ ಆಚಾರ ವಿಚಾರಗಳು ಸರ್ಕಾರಕ್ಕೆ ಅಗತ್ಯವೇ ಇಲ್ಲ. ಹೇಗಿದ್ದರೂ ಜನರು ಬಂದು ಹಣ ಸುರಿಯುತ್ತಾರೆ ಅವರಿಗೆ ಅಷ್ಟೇ ಸಾಕು. ಅದರಲ್ಲೂ ಹುಂಡಿಗೆ ಹಾಕಿದ ಹಣ ದೇವರಿಗೆ ಸೇರುತ್ತದೆ ಎನ್ನುವ ದರಿದ್ರ ಬೋರ್ಡ ಬೇರೆ. ಆದ್ದರಿಂದ ತಂದ ಸಂಪತ್ತನ್ನೆಲ್ಲ ಹುಂಡಿಗೆ ಹಾಕಿ ಸರ್ಕಾರವನ್ನು ಸಾಕುವ ಸಮಾಜ ಇರುವ ತನಕ ಇಂತಹ ಅವಸ್ಥೆಗಳು ನಡೆಯುತ್ತಲೇ ಇರುತ್ತದೆ.
ಒಟ್ಟಾರೆ ಹಿಂದುಗಳು ತಮ್ಮ ತಮ್ಮಲ್ಲಿ ನಂಜಿ ಹೊಟ್ಟೆಕಿಚ್ಚಿನಿಂದ ಬಡಿದಾಡಿಕೊಂಡು ಸಾಯಬೇಕು.ಎಲ್ಲರಿಗೂ ಇದೇ ಬೇಕಾಗಿರುವುದು. ಅದಕ್ಕಾಗಿಯೆ ನಡೆಯದ ಘಟನೆಯನ್ನು ನಡೆದಂತೆ ಮಾಡಿ ಗಲಾಟೆ ಎಬ್ಬಿಸುವುದು. ಬ್ರಾಹ್ಮಣರ ಮೇಲೆ, ಏರಿ ಹೋದರೆ ತಿರುಗಿ ಬೀಳುವ ಸಾಧ್ಯತೆ ಕಡಿಮೆ. ಸುಲಭದಲ್ಲಿ ತಮ್ಮ ಕಾರ್ಯ ಸಾಧಿಸಿ ಕೊಳ್ಳಬಹುದು. ಅದಕ್ಕೆಲ್ಲ ಇಂಥಹಾ ನಾಟಕಗಳು ಅಗತ್ಯ.
Leave A Reply