ಮಿಸ್ ಪಾಂಡಿಚೇರಿ ಈಗ ಮಿಸ್ ಆಫ್ರಿಕಾ ಗೋಲ್ಡನ್ ಸ್ಪರ್ಧೆಗೆ ರೆಡಿ!
ಚರ್ಮದ ಬಣ್ಣ ಸೌಂದರ್ಯ ಸ್ಪರ್ಧೇಯಲ್ಲಿ ಭಾಗವಹಿಸಲು ಅಡ್ಡಿ ಆಗಲಿಲ್ಲ, ಯಾಕೆ?
ಸಾನ್ ರಿಚೆಲ್ ಗಾಂಧಿ ಎಂಬ ಯುವತಿಯನ್ನು ನೋಡಿದರೆ ಯಾರೂ ಕೂಡ ಆಕೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಅಂದುಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಆದರೆ ಆಕೆ ಎದೆಗುಂದಲಿಲ್ಲ. ಅವಳಿಗೆ ತಾನು ಕೂಡ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲ, ಅದರಲ್ಲಿ ಗೆಲ್ಲಬೇಕೆಂಬ ಗುರಿಯೂ ಇತ್ತು. ಹಾಗೆ ಮಿಸ್ ಪಾಂಡಿಚೇರಿ ಸ್ಪರ್ಧೆಯಲ್ಲಿ ಭಾಗವಹಿಸಿದಳು, ಅವಳಂತಹ ಕಪ್ಪು ಬಣ್ಣದ ಯುವತಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಎಂದು ಕೆಲವರು ಮೂದಲಿಸಿದರು. ಅಂತವರಿಗೆ ಈ ವೇದಿಕೆ ಅಲ್ಲ ಎನ್ನುವ ವಿರೋಧ ವ್ಯಕ್ತವಾಯಿತು. ಆದರೆ ಸಾನ್ ರಿಚೆಲ್ ಎಷ್ಟೇ ಟೀಕೆ ಬಂದರೂ ಅಂಜಲಿಲ್ಲ, ಹಿಂದೆ ಸರಿಯಲಿಲ್ಲ. ಅಂತಿಮವಾಗಿ ಆಕೆ ಮಿಸ್ ಪಾಂಡಿಚೇರಿಯಾಗಿ ಗೆದ್ದು ಬಂದಳು. ಈಗ ಆಕೆ ಮಿಸ್ ಆಫ್ರಿಕಾ ಗೋಲ್ಡನ್ 2023 ಇದಕ್ಕೆ ಸ್ಪರ್ಧಿಸಲು ತಯಾರಾಗಿದ್ದಾಳೆ.
ಅವಳ ಸಾಧನೆಯನ್ನು ನೋಡಿದರೆ ಈಗ ಯಾರು ಬೇಕಾದರೂ ಮೂಗಿನ ಮೇಲೆ ಬೆರಳಿಡುವಂತೆ ಆಗಿದೆ. ಸೌಂದರ್ಯ ಎಂದರೆ ಯಾವ ಮಾನದಂಡ ಇತ್ತೋ, ಯಾವ ವರ್ಣದವರು ಮಾತ್ರ ಭಾರತದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು ಎಂಬ ವಾತಾವರಣ ಇತ್ತೋ ಅದನ್ನು ತುಂಡರಿಸಿ ಯಾವ ವರ್ಣದವರು ಬೇಕಾದರೂ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ತೋರಿಸುವುದೇ ತನ್ನ ಗುರಿ ಎಂದು ಆಕೆ ಸಾಬೀತುಪಡಿಸಿದ್ದಾಳೆ. ಐಶ್ವರ್ಯ ರೈ ತನ್ನ ರೋಲ್ ಮಾಡೆಲ್ ಎಂದು ಹೇಳಿಕೊಳ್ಳುವ ಸಾನ್ ರಿಚೆಲ್ ಆರಂಭದಲ್ಲಿ ತನ್ನ ಕುಟುಂಬದ ವಿರೋಧ ಇದ್ದಾಗಲೂ ಅದನ್ನೆಲ್ಲಾ ವಿರೋಧಿಸಿ ಓರ್ವ ಯಶಸ್ವಿ ಮಾಡಲ್ ಆಗಿ ಮಿಂಚುತ್ತಿದ್ದಾಳೆ. ಅದರೊಂದಿಗೆ ಅನೇಕ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾಳೆ.
Leave A Reply