ಚೆನ್ನಾಗಿರುವ ರಸ್ತೆೆ ದುರಸ್ತಿಗೆ ಕೋಟ್ಯಂತರ ಅನುದಾನ!
ಹನುಮಂತ ಕಾಮತ್ ಮಂಗಳೂರು
ಮಂಗಳೂರಿನ ಎಬಿ ಶೆಟ್ಟಿ ವೃತ್ತದಿಂದ ಮಿನಿ ವಿಧಾನ ಸೌಧದವರೆಗಿನ ರಸ್ತೆೆ ಹೇಗಿದೆ? ಎಂದು ಯಾರಿಗೇ ಕೇಳಿದರೂ ಬರುವ ಉತ್ತರ ಚೆನ್ನಾಗಿದೆ, ಸ್ಮಾರ್ಟ್ ಆಗಿದೆ ಎಂದು ಹೇಳುತ್ತಾರೆ. ಆ ರಸ್ತೆೆಯಲ್ಲಿ ಏನು ತೊಂದರೆ ಇದೆ ಎಂದು ಮತ್ತೊ0ದು ಪ್ರಶ್ನೆೆ ಕೇಳಿದರೆ ‘ಕುರುಡ ಕೂಡ ಚೆನ್ನಾಗಿ ಗಾಡಿ ಬಿಟ್ಟು ಹೋಗಬಹುದು ಆ ರಸ್ತೆೆಯಲ್ಲಿ, ಹಾಗಿರುವಾಗ ಏನು ತೊಂದರೆ ಎಂದು ಕೇಳುತ್ತಿರಲ್ಲ ಎಂದು ಮರು ಪ್ರಶ್ನೆೆ ಮಾಡಬಹುದು.
ಹೊಂಡ, ಗುಂಡಿ ಎಷ್ಟಿವೆ ಆ ರಸ್ತೆೆಯಲ್ಲಿ ಎಂದು ಮೂರನೇ ಪ್ರಶ್ನೆೆ ಕೇಳಿದರೆ ‘ನಿಮಗೆ ತಲೆಕೆಟ್ಟಿದೆಯಾ, ಆ ರಸ್ತೆೆಯಲ್ಲಿ ಹೊಂಡ ಅಥವಾ ಗುಂಡಿ ಒಂದೇ ಒಂದು ಇಲ್ಲ ಎಂದು ತಟ್ಟನೆ ಪ್ರತಿಕ್ರಿಯೆ ನೀಡಬಹುದು. ಆ ರಸ್ತೆೆಯನ್ನು ದುರಸ್ತಿ ಮಾಡಬೇಕಾ ಎಂದು ನಾಲ್ಕನೇ ಪ್ರಶ್ನೆೆ ಕೇಳಿದರೆ ‘ಹೋಗಿ ಸ್ವಾಮಿ, ಮೊದಲಿಗೆ ಆ ಜೋಕಟ್ಟೆೆ, ಕುಳಾಯಿ ಸೇರಿ ನಾನಾ ಹದಗೆಟ್ಟಿರುವ ರಸ್ತೆೆಗಳನ್ನು ಮೊದಲು ಸರಿ ಮಾಡಿ, ನಂತರ ಚೆನ್ನಾಗಿರುವ ರಸ್ತೆೆ ದುರಸ್ತಿ ಬಗ್ಗೆೆ ಯೋಚಿಸಿ ಎಂದು ಸಲಹೆ ನೀಡುತ್ತಾರೆ.
ಹೋಗಲಿ, ಆ ರಸ್ತೆೆಯಲ್ಲಿ ಬೀದಿ ದೀಪ ಚೆನ್ನಾಗಿ ಉರಿಯುತ್ತಾ? ಎಂದು ಕೆದಕಿದರೇ ‘ನಿಮಗೆ ಮೊದಲು ಏನು ಆಗ್ಬೇಕು, ಅದು ಹೇಳಿ?’ ಎಂದು ಮರು ಜನ ಪ್ರಶ್ನೆೆ ಮಾಡಬಹುದು.
ಮಂಗಳೂರಿಗೆ ಸ್ವಾರ್ಟ್ ಸಿಟಿ ಯೋಜನೆಯಲ್ಲಿ ಮುನ್ನೂರು ಕೋಟಿ ಬಂದಿದೆ, ಅದನ್ನು ಬಳಸಿ ಮಂಗಳೂರಿನ ಎಬಿ ಶೆಟ್ಟಿ ವೃತ್ತದಿಂದ ಮಿನಿ ವಿಧಾನ ಸೌಧದವರೆಗಿನ ರಸ್ತೆೆಯನ್ನು ಸ್ಮಾರ್ಟ್ ಮಾಡಬೇಕಿದೆ ಎಂದು ಕೇಳಿದರೆ, ಅದಕ್ಕೆೆ ಆ ವ್ಯಕ್ತಿ ಒಂದೋ ನಿಮಗೆ ಯಾವ ರಸ್ತೆೆಯನ್ನು ಸ್ಮಾರ್ಟ್ ಮಾಡಬೇಕು ಮತ್ತು ಯಾವುದನ್ನು ಸಂಚರಿಸಲು ಯೋಗ್ಯವಾಗಿಸಬೇಕು ಎಂದು ಗೊತ್ತಿಲ್ಲದಷ್ಟು ಮೂರ್ಖರು ಅಥವಾ ನಿಮಗೆ ಬಂದಿರುವ ಅಷ್ಟು ಕೋಟಿ ಹಣದಲ್ಲಿ ಎಷ್ಟು ನುಂಗಿ ನೀರು ಕುಡಿಯಲು ಆಗುತ್ತದೆ ಎನ್ನುವ ಧಾವಂತ ಇದೆ ಎಂಬುದನ್ನು ಸಾಬೀತು ಮಾಡಿದಂತಾಗಬಹುದು.
ಇಲ್ಲಪ್ಪಾ, ನಾವು ಹಣ ಹೊಡೆಯಬೇಕು ಎಂದು ನಿರ್ಧರಿಸಿಲ್ಲ, ನಮ್ಮದೇನಿದ್ದರೂ ಅಭಿವೃದ್ಧಿ ರಾಜಕೀಯ ಎಂದು ನೀವು ಹೇಳಿದರೆ ಅವನು ನಕ್ಕು ‘ನೀವು ಪಾಲಿಕೆ ಸದಸ್ಯರೊ, ಅಧಿಕಾರಿಯೋ ಆಗಿರಬಹುದು. ನಾನು ನೀವು ಹೇಳಿದ್ದನ್ನು ಹಾಗೆ ಕಣ್ಣುಮುಚ್ಚಿ ನಂಬಲು ಮಂಗಳೂರಿನ ನಾಗರಿಕನಲ್ಲ’ ಎಂದು ಹೇಳಿ ಕಾಸರಗೋಡು ಕಡೆ ಹೋಗುವ ಬಸ್ಸು ಹತ್ತಬಹುದು. ಒಟ್ಟಿನಲ್ಲಿ ನೀವು ಈ ಊರಿನ ಅಥವಾ ಬೇರೆ ಊರಿನ ಯಾರನ್ನೇ ಕೇಳಿದರೂ ಆ ರಸ್ತೆೆಯ ಬಗ್ಗೆೆ ಚಕಾರವೆತ್ತುವುದಿಲ್ಲ.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಎರಡನೇ ಸಭೆಯಲ್ಲಿ ಎಬಿ ಶೆಟ್ಟಿ ಸರ್ಕಲ್ ನಿಂದ ಮಿನಿ ವಿಧಾನಸೌಧದವರೆಗಿನ ರಸ್ತೆೆಯನ್ನು ಸ್ಮಾರ್ಟ್ ಮಾಡಲು ಯೋಜನೆ ರೂಪಿಸಲಾಗಿದೆ. ಅದು ಮುಗಿದ ನಂತರ ಸ್ಟೇಟ್ ಬ್ಯಾಕ್ ಸುತ್ತಲಿನ ಪ್ರದೇಶಗಳು ಅಭಿವೃದ್ಧಿ ಆಗಲಿವೆ ಎಂದು ಹೇಳಲಾಗುತ್ತದೆ. ಈ ಮೂಲಕ ಮಂಗಳೂರಿನಲ್ಲಿ ಅಭಿವೃದ್ಧಿಯ ಶಬ್ದ ಮತ್ತೆೆ ರಿಂಗಣಿಸುತ್ತಿದೆ.
ಆದರೆ ಅಭಿವೃದ್ಧಿ ಆಗಬೇಕು ನಿಜ, ನಮ್ಮ ಮಂಗಳೂರು ಸ್ಮಾರ್ಟ್ ಸಿಟಿ ಆಗಬೇಕು ಎನ್ನುವುದರಲ್ಲಿ ಯಾವ ಆಕ್ಷೇಪವೂ ಇಲ್ಲ. ಅದರ ಅವಶ್ಯಕತೆ ಮಂಗಳೂರಿಗೆ ಖಂಡಿತ ಇದೆ. ಆದರೆ ಒಂಬತ್ತು ವರ್ಷಗಳ ಹಿಂದೆ ಆದ ಕಾಂಕ್ರೀಟ್ ರಸ್ತೆೆಗಳಿಗೆ ಇವತ್ತಿಗೂ ಫುಟ್ ಪಾತ್ ನಿರ್ಮಾಣವಾಗಿಲ್ಲ. ಭಾರತೀಯ ಜನತಾ ಪಾರ್ಟಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿ ಇದ್ದಾಗ ಕೇವಲ ಕಾಂಕ್ರೀಟ್ ರಸ್ತೆೆ ಮಾಡಿತ್ತು. ಆದರೆ ಫುಟ್ ಪಾತ್, ಚರಂಡಿ ಮಾಡಿಲ್ಲ ಎಂದು ವಿಪಕ್ಷದಲ್ಲಿದ್ದ ಕಾಂಗ್ರೆೆಸ್ ಬೊಬ್ಬೆೆ ಹೊಡೆದು ಅಧಿಕಾರಕ್ಕೆೆ ಬಂತು. ಅಭಿವೃದ್ಧಿ ಅಂದರೆ ಕೇವಲ ಕಾಂಕ್ರೀಟ್ ರಸ್ತೆೆ ಅಲ್ಲ ಎಂದಿದ್ದ ಕಾಂಗ್ರೆೆಸ್ ಗೆದ್ದು ಬಂದ ನಂತರ ಏನಾಯಿತು? ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಕಾಂಕ್ರೀಟ್ ರಸ್ತೆೆಗಳ ಫುಟ್ ಪಾತ್, ಒಳಚರಂಡಿ ಬಿಡಿ, ಇವರೇ ಮಾಡಿಸಿರುವ ಕಾಂಕ್ರೀಟ್ ರಸ್ತೆೆಗಳಲ್ಲಿ ಕೆಲವಕ್ಕೆೆ ಫುಟ್ ಪಾತ್, ಚರಂಡಿಯೇ ನಿರ್ಮಿಸಿಲ್ಲ ಏಕೆ.
Leave A Reply