ದೇವಳದೊಳಗೆ ಕೆರಳಿದ ಆನೆ; ಮಾವುತ ಸಾವು!
ಆನೆಗಳನ್ನು ಪಳಗಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈ ದೇವಸ್ಥಾನಗಳಲ್ಲಿ ಐರಾವತಗಳನ್ನು ದೇವಳದ ಧಾರ್ಮಿಕ ಕಾರ್ಯಗಳಿಗೆ ಬಳಸುವಾಗ ಇನ್ನೊಂದಿಷ್ಟು ಮುಂಜಾಗ್ರತೆಯನ್ನು ಮಾವುತರು ವಹಿಸಬೇಕಾಗುತ್ತದೆ. ಯಾಕೆಂದರೆ ಕೇರಳದ ದೇವಸ್ಥಾನಗಳಲ್ಲಿ ಅನೆಗಳ ಸಿಂಗಾರ ವಿಶೇಷವಾಗಿರುತ್ತದೆ. ಅದು ಕೆಲವೊಮ್ಮೆ ಆನೆಗಳಿಗೆ ಕಿರಿಕಿರಿಯನ್ನು ಕೂಡ ಉಂಟುಮಾಡಬಹುದು. ಆದ್ದರಿಂದ ಆನೆಗಳು ರೋಷಗೊಳ್ಳುವ ಸಾಧ್ಯತೆ ಇರುತ್ತೆ. ಅಂತಹ ಒಂದು ಘಟನೆ ಕೇರಳದ ವೈಕೋಮ್ ನಲ್ಲಿರುವ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಾಗ ಮೈಜುಂ ಎನ್ನುತ್ತದೆ.
ಆನೆಗಳಿಗೆ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಬಲವಂತವಾಗಿ ವಿಧಿವಿಧಾನಗಳನ್ನು ಅನುಸರಿಸುವಂತೆ ಒತ್ತಾಯಿಸಬಾರದು. ದೇವರನ್ನು ಸಂತೋಷಪಡಿಸಲು ಆನೆಗಳಿಗೆ ಹಿಂಸೆ ನೀಡಿದರೆ ಸಹಿಸುವಷ್ಟು ಸಮಯ ಸಹಿಸಿ ಕೊನೆಗೆ ಅವು ಪ್ರತೀಕಾರ ತೆಗೆದುಕೊಳ್ಳುತ್ತವೆ ಎನ್ನುವುದಕ್ಕೆ ಇದೇ ಸಾಕ್ಷಿ.
ಸದ್ಯ ಮೃತಪಟ್ಟಿರುವ ಮಾವುತನನ್ನು ಅರವಿಂದ್ ಎಂದು ಗುರುತಿಸಲಾಗಿದ್ದು, ವಯಸ್ಸು 26 ಎಂದು ಹೇಳಲಾಗುತ್ತಿದೆ. ಈತ ಪುತ್ತುಪ್ಪಲ್ಲಿ ಮೂಲದ ನಿವಾಸಿ. ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.
Leave A Reply