ಲುಫ್ತಾನಾ ವಿಮಾನದಲ್ಲಿ ಪ್ರಯಾಣಿಕ ಸಾವು
Posted On September 1, 2017
0

ಮುಂಬೈ: ಪ್ರ್ಯಾOಕ್‌ಫರ್ಟ್‌ನಿಂದ ಮುಂಬೈಗೆ ಬರುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಚರಣ್‌ಜೀತ್‌ಸಿಂಗ್ ಆನಂದ್ ಮೃತರು. ಎಲ್‌ಎಚ್-756 ವಿಮಾನದಲ್ಲಿ ಶುಕ್ರವಾರ ರಾತ್ರಿ 1.20 ಗಂಟೆಗೆ ಕಾರ್ಡಿಯಾ ಅಟ್ಯಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ವಿಮಾನ ಕಂಪೆನಿ ಮೂಲಗಳು ತಿಳಿಸಿವೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿಮಾನಯಾನ ಸಂಸ್ಥೆೆ ‘ಲುಫ್ತಾನ್ಸಾ ಫ್ಲೈಟ್ ಎಲ್‌ಎಚ್756 ವಿಮಾನ ಫ್ರ್ಯಾOಕ್‌ಫರ್ಟ್‌ನಿಂದ ಮುಂಬೈಗೆ ಪ್ರಯಾಣಿಸುವಾಗ, ಪ್ರಯಾಣಿಕ ಚರಣ್‌ಜೀತ್‌ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾಾರೆ ಎಂದು ತಿಳಿಸಿದೆ.
ಮೃತರ ದೇಹವನ್ನು ಪರೀಕ್ಷೆೆ ಮಾಡಿ, ಕುಟುಂಬಕ್ಕೆೆ ಒಪ್ಪಿಸಲಾಗಿದೆ. ಆದರೆ ವಿಮಾನಯಾನ ಸಂಸ್ಥೆೆ ಪ್ರಯಾಣಿಕನ ಜತೆ ಯಾರಾದ್ದರೂ ಇದ್ದರಾ ಅಥವಾ ಅವರ ಆರೋಗ್ಯದ ಬಗ್ಗೆೆ ಪ್ರಯಾಣಕ್ಕೂ ಮುಂಚೆ ತಿಳಿದುಕೊಳ್ಳಲಾಗಿತ್ತಾ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿತ್ತಾ ಎಂಬುದರ ಕುರಿತು ಬಹಿರಂಗ ಪಡಿಸಿಲ್ಲ.
- Advertisement -