ಕಾಂತಾರಾ, ಕೆಜಿಎಫ್ ಜೊತೆ ಕನ್ನಡಕ್ಕೆ ಸಿಕ್ಕಿವೆ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿಗಳು!
ಕನ್ನಡದ ಮಟ್ಟಿಗೆ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳ ಬಂಪರ್ ಎಂದೇ ಹೇಳಬಹುದು. ಕಾಂತಾರಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿದ್ದು, ಅದ್ಭುತ ನಟನೆಗಾಗಿ ರಿಷಬ್ ಶೆಟ್ಟಿಯವರಿಗೆ ಮತ್ತು ಅತ್ಯುತ್ತಮ ಮನೋರಂಜನಾ ಚಿತ್ರವಾಗಿ ಕಾಂತಾರ ಪ್ರಶಸ್ತಿ ಗೆದ್ದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಕೆಜಿಎಫ್ -2 ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ನಮ್ಮ ಕನ್ನಡ ಭಾಷೆಯ ಸಿನೆಮಾಗಳಿಗೆ ಸಿಕ್ಕಿರುವ ಪ್ರಶಸ್ತಿಗಳು ಇಷ್ಟೇ ಎನ್ನುವ ಭಾವನೆ ಬೇಡಾ. ಇದನ್ನು ಹೊರತುಪಡಿಸಿ ಕನ್ನಡದ ಮೂರು ಸಿನೆಮಾಗಳಿಗೆ ರಾಷ್ಟ್ರಪ್ರಶಸ್ತಿ ಲಭಿಸಿವೆ.
ಅತ್ಯುತ್ತಮ ಸಂಕಲನಕ್ಕಾಗಿ ನಾನ್ ಫಿಚರ್ ವಿಭಾಗದಲ್ಲಿ ಮಧ್ಯಂತರ ಚಿತ್ರದ ಸಂಕಲನಕಾರ ಸುರೇಶ್ ಅರಸ್ ಅವರಿಗೆ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಚೊಚ್ಚಲ ಸಿನೆಮಾ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಮಧ್ಯಂತರ ಸಿನೆಮಾ ನಿರ್ದೇಶನಕ್ಕಾಗಿ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ರಂಗ ವೈಭೋಗ ಇದಕ್ಕೆ ಸಿಕ್ಕಿದ್ದು, ಸುನೀಲ್ ಪುರಾಣಿಕ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ 7 ರಾಷ್ಟ್ರೀಯ ಪ್ರಶಸ್ತಿಗಳು ದೊರಕಿದ್ದು, ತುಂಬಾ ವಿಶೇಷ ಎನ್ನಬಹುದು. ಪ್ರಶಸ್ತಿ ವಿಜೇತರೆಲ್ಲರಿಗೂ ತುಳುನಾಡು ನ್ಯೂಸ್ ಪರವಾಗಿ ಅಭಿನಂದನೆಗಳು..
Leave A Reply