ನಾವಿಬ್ಬರು, ನಮಗಿಬ್ಬರು ಘೋಷವಾಕ್ಯ ನೀಡಿದ್ದು ಇಂದಿರಾ – ಜೈನ ಮುನಿ ವಿನಮ್ರ ಸಾಗರ್
ಹಿಂದೂಗಳ ಜನಸಂಖ್ಯೆಯ ವಿಷಯದಲ್ಲಿ ಜೈನ ಸಂತ ವಿನಮ್ರ ಸಾಗರ ಮಹಾರಾಜರು ನೀಡಿರುವ ಹೇಳಿಕೆ ಹಿಂದೂಗಳ ಕುಸಿಯುತ್ತಿರುವ ಜನಸಂಖ್ಯೆಯ ವಿಷಯದಲ್ಲಿ ಮತ್ತೆ ಕಳವಳಕ್ಕೆ ಕಾರಣವಾಗಿದೆ. ಅವರು ಮಧ್ಯಪ್ರದೇಶದ ಇಂದೋರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡುತ್ತಾ, ನಾವಿಬ್ಬರು ನಮಗಿಬ್ಬರು ಎನ್ನುವ ಘೋಷವಾಕ್ಯವನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಪ್ರಚಾರ ಮಾಡಿದ್ದರು. ಆ ಶಬ್ದಗಳನ್ನು ಹಿಂದೂಗಳು ಚಾಚೂ ತಪ್ಪದೆ ಪಾಲಿಸಲು ಮುಂದಾದರು. ಆದರೆ ಅದರಿಂದ ಹಿಂದೂಗಳ ಜನಸಂಖ್ಯೆ ಮಾತ್ರ ಕಡಿಮೆ ಆಗುತ್ತಾ ಬಂದಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಜನಸಂಖ್ಯೆ ಇಳಿಮುಖವಾಗಲು ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ದೊಡ್ಡ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದ ಶ್ರೀಗಳು, ಇನ್ನೊಂದು ಕಡೆ ದೇಶದಲ್ಲಿರುವ ಆದಿವಾಸಿಗಳನ್ನು ಮತಾಂತರ ಮಾಡುವ ಪ್ರಕ್ರಿಯೆಯೂ ಜಾರಿಯಲ್ಲಿರುವುದು ಕೂಡ ಎಚ್ಚರಿಕೆಯ ಗಂಟೆ ಎಂದು ಹೇಳಿದ್ದಾರೆ.
ಮುಸಲೀಯರಿಗೆ 50 ದೇಶಗಳು, ಕ್ರೈಸ್ತರಿಗೆ 100 ಹಾಗೂ ಹಿಂದೂಗಳಿಗೆ ಇರುವುದು ಭಾರತ ಮಾತ್ರ. ಡಿಸೆಂಬರ್ 25 ರಂದು ಈ ದೇಶದಲ್ಲಿಯೂ ಕ್ರಿಸ್ ಮಸ್ ಬಹಳ ದೊಡ್ಡ ರೀತಿಯಲ್ಲಿ ಆಚರಿಸಲಾಗುವುದರ ಔತಿಥ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ. ಕ್ರಿಸ್ಮಸ್ ಅನ್ನು ಹಿಂದೂಗಳಲ್ಲಿ ಹಲವರು ಆಚರಿಸುವ ಮೂಲಕ ಸೌಹಾರ್ದತೆಯನ್ನು ಸಾರುವ ಯತ್ನ ಮಾಡುತ್ತಿದ್ದಾರೆ. ಆದರೆ ಇಂತವರು ಹಿಂದೂ ಸಂಸ್ಕೃತಿಯನ್ನು ಪ್ರಚಾರ ಪಡಿಸಲು ಏನು ಮಾಡುತ್ತಾರೆ. ಬೇರೆ ಮತಗಳ ಹಬ್ಬಗಳನ್ನು ಸಂಭ್ರಮಿಸುವುದರ ಹಿಂದೆ ಹಿಂದೂ ಸಂಸ್ಕೃತಿಯನ್ನು ಅಳಿಸುವ ಷಡ್ಯಂತ್ರ ಇದೆ ಎಂದು ಅವರು ನುಡಿದರು. ಸಂತರು, ಮುನಿಗಳು ಹಿಂದೂ ಸಮಾಜವನ್ನು ಒಟ್ಟುಗೂಡಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ವಿಷಯವನ್ನು ಹಲವು ಸ್ವಾಮೀಜಿಯವರು ಹೇಳುತ್ತಾ ಬಂದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಕೂಡ ಹೆಚ್ಚು ಮಕ್ಕಳನ್ನು ಹೇರುವಂತೆ ಹಿಂದೂಗಳಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Leave A Reply