• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಿಂಗ್ ಸ್ಮಾರಕಕ್ಕೆ ಜಾಗ ಕೇಳಿದವರು ನರಸಿಂಹ ರಾವ್ ಬಗ್ಗೆ ಹೇಗೆ ನಡೆದುಕೊಂಡಿದ್ರು!

Tulunadu News Posted On December 28, 2024
0


0
Shares
  • Share On Facebook
  • Tweet It

ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಟ ಮುಖರ್ಜಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೆಂಡಮಂಡಲವಾಗಿದ್ದಾರೆ. ತಮ್ಮ ತಂದೆ 2020 ರಲ್ಲಿ ನಿಧನರಾದಾಗ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಒಂದು ಸಂತಾಪ ಸಭೆಯನ್ನು ಕೂಡ ಕರೆಯುವ ಗೋಜಿಗೆ ಹೋಗಿರಲಿಲ್ಲ. ಅದೇ ಮನಮೋಹನ್ ಸಿಂಗ್ ಅವರು ನಿಧನರಾದಾಗ ಎಐಸಿಸಿ ಸಂತಾಪ ಸಭೆ ಮಾತ್ರವಲ್ಲದೇ, ಅವರ ಸ್ಮಾರಕಕ್ಕೆ ನವದೆಹಲಿಯಲ್ಲಿ ಪ್ರಶಸ್ತವಾದ ಜಾಗವನ್ನು ಒದಗಿಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದೆಂತಹಾ ದ್ವಂದ್ವ ನಿಲುವು ಎಂದು ಪ್ರಶ್ನಿಸಿದ್ದಾರೆ.

ತಮ್ಮ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿದವರು. ಪಕ್ಷ ಬಲಿಷ್ಟವಾಗಲು ಏನೆಲ್ಲಾ ಕೆಲಸ ಮಾಡಬಹುದೋ ಅದನ್ನು ಮಾಡಿದ್ದಾರೆ. ಆದರೆ ಅವರು ನಿಧನರಾದಾಗ ಸಂತಾಪ ಸೂಚಕ ಸಭೆ ನಡೆಸಲು ಕೂಡ ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಮನಸ್ಸಿರಲಿಲ್ಲ ಎನ್ನುವ ಅರ್ಥದಲ್ಲಿ ಶರ್ಮಿಷ್ಟಾ ಏಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ತಾನು ಈ ವಿಷಯವನ್ನು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರಲ್ಲಿ ವಿಚಾರಿಸಿದಾಗ ನಾವು ಕಾಂಗ್ರೆಸ್ಸಿನಿಂದ ಪ್ರಧಾನಿಯಾದವರಿಗೆ ಮಾತ್ರ ಸಂತಾಪ ಸೂಚಕ ಸಭೆ ನಡೆಸುತ್ತೇವೆ ವಿನ: ದೇಶದ ರಾಷ್ಟ್ರಪತಿಯಾದವರಿಗೆ ಅಲ್ಲ ಎಂದು ಹೇಳಿ ಸಬೂಬು ನೀಡಿದರು ಎಂದು ಶರ್ಮಿಷ್ಟಾ ಕಿಡಿಕಾರಿದ್ದಾರೆ. ಆದರೆ ತಮ್ಮ ತಂದೆಯ ಡೈರಿಯನ್ನು ತಾವು ಓದಿದಾಗ ಅದರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದ, ಹಿರಿಯ ಕಾಂಗ್ರೆಸ್ಸಿಗ ಕೆ.ಆರ್. ನಾರಾಯಣನ್ ಅವರು ನಿಧನರಾದಾಗ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಿಂದ ಸಂತಾಪ ಸೂಚಕ ಸಭೆ ನಡೆಸಲಾಗಿತ್ತು ಮತ್ತು ಅದರ ಡ್ರಾಫ್ಟ್ ರಚಿಸಿದ್ದು ಸ್ವತ: ಪ್ರಣಬ್ ಮುಖರ್ಜಿಯಾಗಿದ್ದರು ಎಂದು ಶರ್ಮಿಷ್ಟಾ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ಮುಖಂಡ ಸಿ ಆರ್ ಕೇಶವನ್ ಅವರ ಏಕ್ಸ್ ಪೋಸ್ಟ್ ಅನ್ನು ಉಲ್ಲೇಖಿಸಿ ಶರ್ಮಿಷ್ಠಾ ಮುಖರ್ಜಿ ಹೇಗೆ ಕಾಂಗ್ರೆಸ್ಸಿನಲ್ಲಿರುವ ಹಿರಿಯ ಮುಖಂಡರು ಗಾಂಧಿ ಕುಟುಂಬದವರಲ್ಲ ಎನ್ನುವ ಕಾರಣಕ್ಕೆ ಗೌರವಾದರಗಳಿಂದ ವಂಚಿತರಾಗುತ್ತಾರೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
2004 ರಿಂದ 2009 ರ ತನಕ ಡಾ. ಮನಮೋಹನ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ, ಫೈನಾನ್ಸಿಯಲ್ ಏಕ್ಸಪ್ರೆಸ್ ಮಾಜಿ ಎಡಿಟರ್ ಇನ್ ಚೀಫ್ ಡಾ ಸಂಜಯ್ ಬಾರು ಅವರು ಬರೆದಿರುವ ” ದಿ ಎಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್” ಪುಸ್ತಕದಲ್ಲಿ ಆಗಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರು 2004 ರಲ್ಲಿ ನಿಧನ ಹೊಂದಿದ್ದರೂ 2004 ರಿಂದ 2014 ರ ತನಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ರಾವ್ ಅವರ ಸ್ಮರಣಾರ್ಥ ಒಂದೇ ಒಂದು ಸ್ಮಾರಕವನ್ನು ಕೂಡ ಕಟ್ಟಿಲ್ಲ. ಎಲ್ಲಿಯ ತನಕ ಅಂದರೆ ದೆಹಲಿಯಲ್ಲಿ ರಾವ್ ಅವರ ಅಂತ್ಯ ಸಂಸ್ಕಾರ ನಡೆಸಲು ಕೂಡ ಬಿಡದೇ, ಕಾಂಗ್ರೆಸ್ ಕಚೇರಿಯಲ್ಲಿಯೂ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ, ಸಂತಾಪ ಸಭೆ ನಡೆಸದೇ ಹೇಗೆ ವರ್ತಿಸಿತ್ತು ಎಂದು ಸಂಜಯ್ ಬಾರು ಬರೆದಿದ್ದಾರೆ. ಕೊನೆಗೆ ಪಿ.ವಿ.ನರಸಿಂಹ ರಾವ್ ಅವರ ಅಂತ್ಯ ಸಂಸ್ಕಾರ ಹೈದ್ರಾಬಾದಿನಲ್ಲಿ ಮಾಡಬೇಕಾಯಿತು ಎಂದು ಅವರು ಪುಸ್ತಕದಲ್ಲಿ ಆ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಗಾಂಧಿ ಕುಟುಂಬಕ್ಕೆ ಯಾರು ನಿಷ್ಟರಾಗಿರುತ್ತಾರೋ ಅವರಿಗೆ ಮಾತ್ರ ಕಾಂಗ್ರೆಸ್ಸಿನಲ್ಲಿ ಮರ್ಯಾದೆ ಎನ್ನುವ ನೀತಿ ಇವರ ಪುಸ್ತಕದ ಅದ್ಯಾಯದಲ್ಲಿ ಪರೋಕ್ಷವಾಗಿ ಉಲ್ಲೇಖವಾದಂತೆ ಆಗಿದೆ.

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Tulunadu News July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Tulunadu News July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search