ಈ ರೋಹಿಂಗ್ಯಾಗಳೂ ಬಾಂಗ್ಲಾ ವಲಸಿಗರಂತೆ ತಲೆನೋವಾಗದಿರರೇ?
ಆ ಮಹಮ್ಮದ್ ಘಜನಿ, ಘೋರಿ, ಅಕ್ಬರ್, ಬಾಬರ್… ಹೀಗೆ ಅನೇಕಾನೇಕ ರಾಜರು ಸಾಮ್ರಾಜ್ಯ ವಿಸ್ತರಣೆಗೆಂದು ಭಾರತಕ್ಕೆ ಬಂದು ದೇಶವನ್ನು ಕೊಳ್ಳೆೆ ಹೊಡೆಯುವ ಜತೆಗೆ ದೇವಾಲಯಗಳಲ್ಲಿದ್ದ ನಮ್ಮ ನಂಬಿಕೆಯ ಬೇರುಗಳನ್ನೇ ಅಲುಗಾಡಿಸಿದರು. ಬ್ರಿಟಿಷರು ತಕ್ಕಡಿ ಹಿಡಿದು ಬಂದು ದೇಶವನ್ನೇ ಹತೋಟೆಗೆ ಪಡೆದರು. ನಮ್ಮಿಂದ ಉದಯಿಸಿದ ಬಾಂಗ್ಲಾದೇಶ ನಮಗೇ ಸವಾಲಾಗಿದೆ. ತೀರಾ ಇತ್ತೀಚಿನ ಸಮಸ್ಯೆ ಹೇಳುವುದಾದರೆ, ಬಾಂಗ್ಲಾದ ಅಕ್ರಮ ವಲಸಿಗರು ಪಶ್ಚಿಮ ಬಂಗಾಳ ಸೇರೆ ಹಲವೆಡೆ ಇದ್ದು, ಇಲ್ಲಿಯ ಗುರುತಿನ ಚೀಟಿ ಪಡೆದು, ದೇಶಕ್ಕೇ ತಲೆನೋವಾಗಿದ್ದಾರೆ.
ಆದರೆ, ಇತಿಹಾಸ ಹಾಗೂ ಪ್ರಸ್ತುತದ ಪರಸ್ಥಿತಿ ಹೀಗಿರುವಾಗ…?
ಆಗಸ್ಟ್ 8ರಂದು ಸಂಸತ್‌ನ ಮುಂಗಾರು ಅಧಿವೇಶನ ನಡೆಯುತ್ತಿರುವಾಗ ಎದ್ದು ನಿಂತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ದೇಶದೊಳಕ್ಕೆ ನುಸುಳಿರುವ 40 ಸಾವಿರ ರೋಹಿಂಗ್ಯಾ ಮುಸ್ಲಿಮರನ್ನು ವಾಪಸು ಕಳುಹಿಸಬೇಕುಎಂದು ಮೊದಲ ಬಾರಿಗೆ ವಿಷಯ ಪ್ರಸ್ತಾಪಿಸಿದರು. ಕೇಂದ್ರ ಸರಕಾರವೂ ಈ ಕುರಿತು ಚಿಂತನೆ ನಡೆಸಿತು. ಆದರೆ, ರೋಹಿಂಗ್ಯಾ ಮುಸ್ಲಿಮರ ಅರ್ಜಿ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಈ ಕುರಿತು ವರದಿ ನೀಡುವಂತೆ ಸೂಚಿಸಿದೆ.
ಮಾನವೀಯತೆಯ ಆಧಾರದ ಮೇಲೆ ಅವರಿಗೆ ಆಶ್ರಯ ನೀಡಬೇಕು ಎಂದು ಬುದ್ಧಿ ಜೀವಿಗಳು ಬೊಬ್ಬೆ ಹಾಕುವ ಮುನ್ನ, ಅವರಿಗೆ ವೋಟರ್ ಐಡಿ ಕೊಟ್ಟರೆ ಮತಗಳಾಗಿ ಪರಿಣಮಿಸುತ್ತಾರೆ ಎಂದು ರಾಜಕಾರಣಿಗಳು ಕುತಂತ್ರ ಮಾಡುವ ಮುನ್ನ, ಅಲ್ಪ ಸಂಖ್ಯಾತರು, ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ಮೊಂಡು ವಾದ ಆರಂಭಿಸುವ ಮುನ್ನ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ರೋಹಿಂಗ್ಯಾಗಳ ಕುರಿತು, ಅವರು ದೇಶಕ್ಕೆ ಸವಾಲಾಗುವ ಕುರಿತು ವರದಿ ನೀಡಬೇಕು. ಮೊದಲು ಅವರನ್ನು ದೇಶದಿಂದ ಹೊರದಬ್ಬಬೇಕು.
ಹೀಗೆ ಬಾಂಗ್ಲಾದೇಶದಿಂದ ನಾನಾ ಕಾರಣಗಳನ್ನು ಹೊತ್ತುಕೊಂಡು, ಅಕ್ರಮವಾಗಿ ಒಳನುಸುಳಿರುವ ಬಾಂಗ್ಲಾ ದೇಶೀಯರ ಸಂಖ್ಯೆ ಬರೋಬ್ಬರಿ 4 ಲಕ್ಷ. ಅವರೆಲ್ಲ ಇಲ್ಲಿ ದುಡಿದು ತಿನ್ನುವವರಲ್ಲ. ಬದಲಾಗಿ ಮೂಲಭೂತವಾದದ ಬೀಜ ಬಿತ್ತುವವರು. ಅದಕ್ಕಾಗಿಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ಹಿಂಸೆ ತಾಂಡವವಾಡುತ್ತಿದೆ.
ಹಾಗಾಗಿ, ಈ ರೋಹಿಂಗ್ಯಾಗಳೂ ಮುಂದೆ ದೇಶಕ್ಕೆ ತಲೆನೋವಾಗಲಿದ್ದಾರೆ. ಅಷ್ಟಕ್ಕೂ,ಮ್ಯಾನ್ಮಾರ್‌ನಲ್ಲಿ ಹಿಂಸೆಯಾದರೆ, ಅದನ್ನು ಸರಿಪಡಿಸುವುದು ಆ ದೇಶದ ಕೆಲಸ. ಹೀಗೆ ಯಾವುದೋ ದೇಶದಲ್ಲಿ ಹಿಂಸೆಯಾದರೆ, ಅಲ್ಲಿಂದ ಬಂದವರನ್ನು ನಾವೇಕೆ ಸಾಕಬೇಕು? ಅದೂ ಬಾಂಗ್ಲಾ ವಲಸಿಗರಂಥ ಉದಾಹರಣೆ ಕಣ್ಣ ಮುಂದಿರುವಾಗ!
Leave A Reply