• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!

Tulunadu News Posted On May 2, 2025
0


0
Shares
  • Share On Facebook
  • Tweet It

ಬಾಂಗ್ಲಾ ದೇಶದಲ್ಲಿ ಧರ್ಮ ಪ್ರಚಾರದಲ್ಲಿ ನಿರತರಾಗಿದ್ದ, ಇಸ್ಕಾನ್ ಪ್ರಮುಖರಲ್ಲಿ ಒಬ್ಬರಾದ ಚಿನ್ಮಯ್ ದಾಸ್ ಅವರು ಬಾಂಗ್ಲಾ ನ್ಯಾಯಾಲಯದಿಂದ ಬಿಡುಗಡೆಗೊಂಡಿದ್ದಾರೆ. ಅವರು ಬಾಂಗ್ಲಾ ದೇಶದ ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದರು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಕಳೆದ ಐದು ತಿಂಗಳುಗಳಿಂದ ಬಾಂಗ್ಲಾ ಜೈಲಿನಲ್ಲಿದ್ದ ಚಿನ್ಮಯ್ ದಾಸ ಅವರಿಗೆ ಬಾಂಗ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದೇಶದ್ರೋಹದ ಕಾರಣ ನೀಡಿ ಅವರನ್ನು ಬಾಂಗ್ಲಾದ ಚಿಟ್ಟಾಗೊಂಗ್ ನಲ್ಲಿ ಅಕ್ಟೋಬರ್ 30 ರಂದು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಅಕ್ಟೋಬರ್ 25 ರಂದು ಚಿಟ್ಟಾಗ್ರಾಮ್ ಎನ್ನುವ ಪ್ರದೇಶದಲ್ಲಿ ಲಾಲ್ ದಿಗ್ಗಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಗ್ಲಾ ದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಬಾವುಟ ಹಾರಿಸಲಾಗಿತ್ತು. ಅವರನ್ನು ಬಂಧಿಸಿದ ಅಲ್ಲಿನ ಸರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಅಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಆಗ ಚಿನ್ಮಯ್ ದಾಸ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜಗತ್ತಿನ ಬೇರೆ ಬೇರೆ ಕಡೆ ವ್ಯಾಪಕವಾಗಿ ಪ್ರತಿಭಟನೆ ನಡೆದಿತ್ತು.

ಚಿನ್ಮಯ್ ಕೃಷ್ಣದಾಸ್ ಯಾರು?

ಚಿನ್ಮಯ್ ಕೃಷ್ಣದಾಸ್ ಅವರು ಬಾಂಗ್ಲಾದೇಶ ಸಮ್ಮಿಳಿತ ಸನಾತನಿ ಜಾಗರಣ ಸಂಘಟನೆಯ ವಕ್ತಾರರಾಗಿದ್ದರು. ಈ ಸಂಘಟನೆ ಆ ದೇಶದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ಹಕ್ಕಿನ ಬಗ್ಗೆ ಹೋರಾಟ ಮಾಡುತ್ತಾ ಬರುತ್ತಿದೆ. ಅವರು ಬಾಂಗ್ಲಾದಲ್ಲಿರುವ ಸನಾತನಿಗಳ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಚಿನ್ಮಯ್ ದಾಸ್ ಅವರು ಬಾಂಗ್ಲಾದ ಅಲ್ಪಸಂಖ್ಯಾತ ರಕ್ಷಣಾ ಕಾನೂನು, ಅಲ್ಪಸಂಖ್ಯಾತ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳಿಗೆ ಪ್ರತ್ಯೇಕವಾಗಿ ಸಚಿವಾಲಯ ಸಹಿತ ಹಿಂದೂಗಳಿಗೆ ಅಗತ್ಯವಾಗಿರುವ ವಿವಿಧ ಕಾನೂನುಗಳನ್ನು ಜಾರಿಗೆ ತರಲು ಅವರು ಒತ್ತಾಯಿಸುತ್ತಿದ್ದರು.

ದಾಸ್ ಬಾಂಗ್ಲಾ ದೇಶದಲ್ಲಿ ಹಿಂದೂಪರ ಬೃಹತ್ ರ್ಯಾಲಿಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಕ್ಟೋಬರ್ 25 ರಂದು ಚಿಟ್ಟಗೊಂಗ್ ನಲ್ಲಿ, ನವೆಂಬರ್ 22 ರಂದು ರಂಗಪುರ್ ನಲ್ಲಿ ಬೃಹತ್ ಸಮ್ಮೇಳನಗಳನ್ನು ಆಯೋಜಿಸಿ ಬಾಂಗ್ಲಾ ದೇಶದಲ್ಲಿರುವ ಸರಕಾರದ ಕೆಂಗೆಣ್ಣಿಗೆ ಗುರಿಯಾಗಿದ್ದರು.

ಅವರು ಚಿಟ್ಟಗಾಂಗ್ ನಲ್ಲಿರುವ ಸಟ್ಕಾನೀಯ ಉಪಾಜ್ಜೀಲ ಎನ್ನುವ ಗ್ರಾಮೀಣ ಭಾಗದ ಮೂಲದವರು. ಇವರು 2016 ರಿಂದ 2022 ರತನಕ ಇಸ್ಕಾನ್ ನ ಚಿಟ್ಟಗಾಂಗ್ ವಲಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ತಮ್ಮ ಪ್ರಬಲ ಧಾರ್ಮಿಕ ಭಾಷಣಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಅವರು ಶಿಶು ಬೊಕ್ತಾ ಎನ್ನುವ ನಿಕ್ ನೇಮ್ ನಿಂದ ಅಲ್ಲಿನ ಮಾಧ್ಯಮಗಳಲ್ಲಿ ಪ್ರಖ್ಯಾತರಾಗಿದ್ದಾರೆ.

0
Shares
  • Share On Facebook
  • Tweet It




Trending Now
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
Tulunadu News December 18, 2025
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Tulunadu News December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
  • Popular Posts

    • 1
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 2
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 3
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 4
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 5
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search