ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ… ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!

ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಇದೀಗ ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ. ರಾಮ ಮಂದಿರದಲ್ಲಿ ಮತ್ತೊಂದು ಅತೀ ದೊಡ್ಡ ಧಾರ್ಮಿಕ ಕಾರ್ಯಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 5 ರಂದು ರಾಮ ದರ್ಬಾರ್ ಪ್ರಾಣಪ್ರತಿಷ್ಟೆ ನಡೆಯಲಿದೆ. ಆ ಬಳಿಕ ರಾಮ ಮಂದಿರದ ಸಂಪೂರ್ಣ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಮತ್ತೊಂದು ಅತೀ ದೊಡ್ಡ ಧಾರ್ಮಿಕ ಕಾರ್ಯಕ್ಕೆ ಸಜ್ಜಾಗುತ್ತಿದೆ. 2024ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಟೆ ನೆರವೇರಿಸಲಾಗಿತ್ತು. ಆ ನಂತರ ಅಯೋಧ್ಯೆ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ ಮಹಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಧ್ವಜಸ್ತಂಭ ಸೇರಿದಂತೆ ಇತರ ಕಾಮಗಾರಿಗಳು ಪೂರ್ಣಗೊಂಡಿವೆ. ಮೇ ತಿಂಗಳ ಅಂತ್ಯಕ್ಕೆ ರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್ 5 ಕ್ಕೆ ರಾಮ ದರ್ಬಾರ್ ಪ್ರಾಣಪ್ರತಿಷ್ಟೆ ನಡೆಯಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಗಳು ಬಹುತೇಕ ಅಂತಿಮ ಹಂತಕ್ಕೆ ಬಂದು ತಲುಪಿವೆ. ಇದೀಗ ಧ್ವಜಸ್ತಂಭ, ಗರ್ಭಗುಡಿಯ ಮೇಲಿನ ಶಿಖರ್ ಸೇರಿದಂತೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಮೇ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಅಯೋಧ್ಯೆ ರಾಮ ಮಂದಿರವನ್ನು ಸಂಪೂರ್ಣ ಶುಚಿಗೊಳಿಸಲಾಗುತ್ತದೆ. ಜೂನ್ 3 ರಿಂದ ರಾಮ ದರ್ಬಾರ್ ಪ್ರಾಣಪ್ರತಿಷ್ಟೆ ಪೂಜಾಕಾರ್ಯಗಳು ಆರಂಭಗೊಳ್ಳಲಿದೆ. ಜೂನ್ 5 ರಂದು ರಾಮದರ್ಬಾರ್ ಪ್ರಾಣ ಪ್ರತಿಷ್ಟೆ ನೆರವೇರಲಿದೆ.
ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆ ಕುರಿತು ಹೆಚ್ಚಿನ ಮಾಹಿತಿ ನೀಡಿದ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರ ” ಅಯೋಧ್ಯೆಯ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ಕೇಂದ್ರ ಹಾಗೂ ರಾಜ್ಯದ ಯಾವುದೇ ರಾಜಕೀಯ ನಾಯಕರು, ಸಚಿವರು, ಶಾಸಕರಿಗೆ ಆಹ್ವಾನವಿಲ್ಲ ಎಂದಿದ್ದಾರೆ.
ರಾಮ ಮಂದಿರ ಕಳೆದ ವರ್ಷ ಜನವರಿಯಿಂದಲೇ ಭಕ್ತರಿಗೆ ಮುಕ್ತವಾಗಿದೆ. ಆದರೆ ಮಹಡಿ ನಿರ್ಮಾಣಗಳು ನಡೆಯುತ್ತಿತ್ತು. ಇದೀಗ ಎಲ್ಲಾ ಮಹಡಿಗಳ ನಿರ್ಮಾಣ ಕಾರ್ಯ ಮುಗಿದಿದೆ. ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆ ಬಳಿಕ ಒಂದು ವಾರದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಅಯೋಧ್ಯೆಯಲ್ಲಿ ಮತ್ತಷ್ಟು ಕಾಮಗಾರಿಗಳು ಆರಂಭಗೊಳ್ಳುತ್ತಿವೆ. ಇದೀಗ ಅಯೋಧ್ಯೆಯಲ್ಲಿ 20 ಕಿಲೋ ಮೀಟರ್ ಭರತ ಪಥ ನಿರ್ಮಾಣವಾಗುತ್ತಿದೆ. ರಾಮ ಪಥ, ಭಕ್ತಿ ಪಥ ಕಾಮಗಾರಿ ಬೆನ್ನಲ್ಲೇ ಭರತಪಥ ಕಾಮಗಾರಿ ಆರಂಭವಾಗುತ್ತಿದೆ. ಇದು 900 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಾಗಿದೆ. ಈಗಾಗಲೇ ಉತ್ತರ ಪ್ರದೇಶ ಸರಕಾರ ಈ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಹಂಚಿದೆ.
Leave A Reply