ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?

ಟೆಸ್ಟ್ ಕ್ರಿಕೆಟಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್ ಅವರು ನಿವೃತ್ತಿ ಘೋಷಿಸಿರುವುದರಿಂದ ಭಾರತದ ಹೊಸ ತಂಡಕ್ಕೆ ಕಪ್ತಾನ ಯಾರು ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಬಗ್ಗೆ ಮುಖ್ಯ ಆಯ್ಕೆಗಾರರಾದ ಅಜಿತ್ ಅರ್ಕರ್ ಅವರು ಮಾತನಾಡಿ ” ಭಾರತದ ಟೆಸ್ಟ್ ಕ್ರಿಕೆಟ್ ತಂಡ ಹೊಸ ಮನ್ವಂತರದತ್ತ ಸಾಗುತ್ತಾ ಇದೆ. ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಟೆಸ್ಟಿನಲ್ಲಿ ಮುನ್ನಡೆಸಲು ಸಮರ್ಥ ನಾಯಕತ್ವ ಬೇಕು. ಅದಕ್ಕಾಗಿ ಶುಬ್ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. 2011 ರ ಇಂಗ್ಲೆಡ್ ಪ್ರವಾಸದ ಸಂದರ್ಭದಲ್ಲಿಯೂ ರೋಹಿತ್, ಕೊಹ್ಲಿ, ಅಶ್ವಿನ್ ತಂಡದಲ್ಲಿ ಭಾಗವಹಿಸಿರಲಿಲ್ಲ. ಆದರೆ ಯಾವಾಗಲೂ ಪ್ರಮುಖ ಆಟಗಾರರ ಅನುಪಸ್ಥಿತಿ ನಿಜಕ್ಕೂ ದೊಡ್ಡ ಸವಾಲು. ಆದರೆ ಒಬ್ಬರ ಸ್ಥಾನವನ್ನು ಇನ್ನೊಬ್ಬರು ತುಂಬಲೇ ಬೇಕಾಗುತ್ತದೆ” ಎಂದು ಹೇಳಿದರು.
ಭಾರತದ ತಂಡ ಹೀಗಿದೆ: ಶುಬ್ಮಮ್ ಗಿಲ್ (ಕಪ್ತಾನ), ರಿಷಬ್ ಪಂಥ್ ( ಉಪಕಪ್ತಾನ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ದ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷ್ಟಿಂಗ್ಟನ್ ಸುಂದರ್, ಶರ್ದೂಲ್ ಠಾಕೂರ್, ಜಸ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಹರ್ಷದೀಪ್ ಸಿಂಗ್, ಕುಲದೀಪ್ ಯಾದವ್.
ಹೊಸ ತಂಡದೊಂದಿಗೆ ಹೊಸ ಸರಣಿಯನ್ನು ಆರಂಭಿಸಿರುವ ಬಗ್ಗೆ ಮಾತನಾಡಿರುವ ಅಗರ್ಕರ್ ” ಇದು ಹೊಸ ವಿಶ್ವ ಟೆಸ್ಟ್ ಕ್ರಿಕೆಟ್ ತಂಡ. ನಾವು ಎಲ್ಲವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ಇದೊಂದು ದೊಡ್ಡ ಸವಾಲು ಮತ್ತು ಬದಲಾವಣೆ. ಗಿಲ್ ಮೇಲೆ ಅಪಾರ ವಿಶ್ವಾಸವಿದೆ. ಅವರು ಟೆಸ್ಟ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವರು ಎನ್ನುವ ಭರವಸೆ ಇದೆ. ನಾವು ವಿಶ್ವಾಸದೊಂದಿಗೆ ನಡೆಯುತ್ತೇವೆ” ಎಂದು ಸುದ್ದಿಗೋಷ್ಟಿಯಲ್ಲಿ ಅಭಿಪ್ರಾಯಪಟ್ಟರು.
ಈ ಹೊಸ ತಂಡದಲ್ಲಿ ಮೊಹಮ್ಮದ್ ಶಮಿ ಅವರಿಗೆ ಜಾಗ ಸಿಕ್ಕಿಲ್ಲ. ಶಾರ್ದೂಲ್ ಠಾಕೂರ್ ಹಾಗೂ ಕರುಣ್ ನಾಯರ್ ಅವರಿಗೆ ಕಮ್ ಬ್ಯಾಕ್ ಅವಕಾಶ ನೀಡಲಾಗಿದೆ. ಹರ್ಷದೀಪ್ ಸಿಂಗ್ ಅವರಿಗೆ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದೆ.
Leave A Reply