• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!

Tulunadu News Posted On May 29, 2025
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹಿಂದೂ ಮುಖಂಡರ, ಮುಸ್ಲಿಂ ನಾಯಕರ ಮತ್ತು ಯಾವುದರಲ್ಲಿಯೂ ಗುರುತಿಸದೇ ಪ್ರತೀಕಾರಕ್ಕೆ ಹತ್ಯೆಗೊಳಗಾದ ಯುವಕರ ಕಥೆಯನ್ನು ಹೇಳುತ್ತಾ ಹೋದರೆ ಅದೇ ಒಂದು ಪ್ರತ್ಯೇಕ ಅಧ್ಯಾಯವಾದಿತು. ಹಾಗೆ ಸುಮ್ಮನೆ ಈ ಕೆಳಕಂಡ ಹೆಸರುಗಳನ್ನು ಓದುತ್ತಾ ಹೋಗಿ. ನಿಮ್ಮ ಮನಸ್ಸಿನಂಗಳದಲ್ಲಿ ಆ ದಿನಗಳು ಹಾಗೆ ಸರಿದು ಹೋಗಬಹುದು.

2003 ಮೇ. ಎಂ ಡಿ ಜಬ್ಬಾರ್. ತಾಲೂಕು ಪಂಚಾಯತ್ ಅಧ್ಯಕ್ಷನಾಗಿದ್ದ ಎಂ ಡಿ ಜಬ್ಬಾರ್ ಅವರನ್ನು ಮಂಗಳೂರಿನ ತಾಲೂಕು ಪಂಚಾಯತ್ ಕಚೇರಿಯ ಆವರಣದಲ್ಲಿಯೇ ಹತ್ಯೆ ಮಾಡಲಾಗಿತ್ತು. 2003 ಅಗಸ್ಟ್ ನಲ್ಲಿ ಕಾಟಿಪಳ್ಳದ ಅಬ್ದುಲ್ ರವೂಫ್, ಅದೇ ವರ್ಷ ಡಿಸೆಂಬರ್ ನಲ್ಲಿ ನರಸಿಂಹ ಶೆಟ್ಟಿಗಾರ್, ಎರಡೇ ದಿನಗಳ ಅಂತರದಲ್ಲಿ ಫಾರೂಕ್ ಹತ್ಯೆಯಾಗಿತ್ತು. ಅದರ ಬಳಿಕ ಮರುವರ್ಷ ಕಾಟಿಪಳ್ಳದ ಉದಯ ಪೂಜಾರಿ ಹತ್ಯೆಯಾದರೆ 2005 ಜೂನ್ 7 ರಂದು ಪೊಳಲಿ ಅನಂತು ಪೂಜಾರಿ ಭೀಕರವಾಗಿ ಕೊಲೆಯಾಗಿ ಹೋಗಿದ್ದರು. ಮರುವರ್ಷ ಡಿಸೆಂಬರ್ 1 ರಂದು ಕುಳಾಯಿ ಸಮೀಪ ಹಿಂದೂ ಮುಖಂಡ ಸುಖಾನಂದ ಶೆಟ್ಟಿಯವರನ್ನು ಮತಾಂಧರು ಹತ್ಯೆ ಮಾಡಿದ್ದರು.

2008 ಜನವರಿ 20 ರಂದು ತಂಝೀಮ್ ಕಾಟಿಪಳ್ಳ, 2009 ಫೆಬ್ರವರಿಯಲ್ಲಿ ಕ್ಯಾಂಡಲ್ ಸಂತು ಪೂಜಾರಿ ಕೊಲೆಯಾಗಿದ್ದರು. ಅದರ ಬಳಿಕ ನಾಲ್ಕು ವರ್ಷ ಒಂದಿಷ್ಟು ಶಾಂತಿಯುತವಾಗಿ ಎಲ್ಲವೂ ನಿರಾಂತಕವಾಗಿ ಸಾಗುತ್ತಿದ್ದ ಕರಾವಳಿಯಲ್ಲಿ 2014 ಮಾರ್ಚ್ ನಲ್ಲಿ ರಾಜೇಶ್ ಪೂಜಾರಿ, 2015 ಸೆಪ್ಟೆಂಬರ್ 7 ರಂದು ಸಜೀಪ ನಾಸೀರ್, ಎರಡು ತಿಂಗಳ ಒಳಗೆ ಪ್ರಶಾಂತ ಪೂಜಾರಿ ಹಾಗೂ ಹರೀಶ್ ಪೂಜಾರಿ ಕೊಲೆಯಾಗಿ ಹೋಗಿದ್ದರು. 2016 ಏಪ್ರಿಲ್ 12 ರಂದು ರಾಜೇಶ್ ಪೂಜಾರಿ, ಅದೇ ತಿಂಗಳು ಸಫ್ವಾನ್ ಹತ್ಯೆಯಾಗಿದ್ದರೆ, ಮರುವರ್ಷ ಎರಡು ಹತ್ಯೆಗಳು ದಕ್ಷಿಣ ಕನ್ನಡದಲ್ಲಿ ನಡೆದು ಹೋಗಿದ್ದವು. ಅದರಲ್ಲಿ 2017 ಜೂನ್ ನಲ್ಲಿ ಅಶ್ರಫ್ ಕಲಾಯಿ ಹಾಗೂ ಜುಲೈನಲ್ಲಿ ಶರತ್ ಮಡಿವಾಳ. 2018 ಜನವರಿಯಲ್ಲಿ ಸುರತ್ಕಲ್ ನಲ್ಲಿ ದೀಪಕ್ ರಾವ್ ಕೊಲೆಯಾದರೆ ಅದಕ್ಕೆ ಪ್ರತಿಕಾರವಾಗಿ ಅದೇ ದಿನ ಅಬ್ದುಲ್ ಬಶೀರ್ ಹತ್ಯೆಯಾಗಿದ್ದರು.

2022 ರ ದಕ್ಷಿಣ ಕನ್ನಡ ಜಿಲ್ಲೆ ನಾಲ್ಕು ಕೋಮು ಸಂಬಂಧಿತ ಹತ್ಯೆಗಳಿಗೆ ಸಾಕ್ಷಿಯಾದದ್ದು ಮಾತ್ರ ದುರಂತ. 2022 ಜುಲೈ 19 ಮಸೂದ್ ಬೆಳ್ಳಾರೆ, ಜುಲೈ 26 ಪ್ರವೀಣ್ ನೆಟ್ಟಾರು, ಜುಲೈ 28 ಫಾಜಿಲ್, ಡಿಸೆಂಬರ್ 24 ಅಬ್ದುಲ್ ಜಲೀಲ್ ಹತ್ಯೆಗೊಳಗಾದರು. ಎರಡು ವರ್ಷ ಮೌನವಾಗಿದ್ದ ದಕ್ಷಿಣ ಕನ್ನಡ 2025 ರಲ್ಲಿ ಹೆಚ್ಚು ಕಡಿಮೆ ಒಂದೇ ತಿಂಗಳ ಅವಧಿಯಲ್ಲಿ ಅಶ್ರಫ್, ಸುಹಾಸ್ ಶೆಟ್ಟಿ, ಅಬ್ದುಲ್ ರೆಹಮಾನ್ ಹತ್ಯೆಗಳ ಮೂಲಕ ಮತ್ತೆ ರಾಜ್ಯದಲ್ಲಿ ಸುದ್ದಿಯಲ್ಲಿದೆ.

ಪ್ರತಿ ಬಾರಿ ಇಂತಹ ಹತ್ಯೆಗಳಾದಾಗ ಮಂಗಳೂರು ಕಂಪಿಸಿದೆ. ಜನಸಾಮಾನ್ಯರು ತತ್ತರಿಸಿದ್ದಾರೆ. ಹೊರಗಿನ ಜನ ಮಂಗಳೂರಿಗೆ ಏನೇನೋ ಹಣೆಪಟ್ಟಿ ಕಟ್ಟಿದ್ದಾರೆ. ಇಲ್ಲಿ ಬರಬೇಕಿದ್ದ ಕಂಪೆನಿಗಳು ಹಿಂದೇಟು ಹಾಕಿವೆ. ಶಿಕ್ಷಣ ಸಂಸ್ಥೆಗಳು ನರಳಿವೆ. ಬಸ್ಸು ವ್ಯವಸ್ಥೆ ಅತಂತ್ರಕ್ಕೆ ಒಳಗಾಗಿದೆ. ಮತ್ತೆ ಎಲ್ಲವನ್ನು ಉದರದಲ್ಲಿ ಇಟ್ಟುಕೊಂಡು ಮಂಗಳೂರು ಮುಂದುವರೆದಿದೆ. ಆದರೆ ಈ ಎಲ್ಲಾ ಕಥೆಗಳ ಹಿಂದೆ ಮೃತಪಟ್ಟವರ ಮನೆಯವರ ದು:ಖ ಅಡಗಿದೆ. ಅದನ್ನು ಅಳಿಸಲು ಯಾವತ್ತೂ ಸಾಧ್ಯವಿಲ್ಲ. ಅದರೊಂದಿಗೆ ಎಲ್ಲವೂ ಇದ್ದು, ಎಲ್ಲಿಗೋ ಬೆಳೆಯಬೇಕಿದ್ದ ದಕ್ಷಿಣ ಕನ್ನಡ ಇವತ್ತಿಗೂ ಅಲ್ಲಿಯೇ ಇದೆ ಎನ್ನುವುದು ಮಾತ್ರ ಸತ್ಯ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search