• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡಾಕಾ ರದ್ದು ನಿಶ್ಚಿತ, 8 ಸಾವಿರ ಭಾರತೀಯ ಡ್ರೀಮರ್ಸ್ ಗಡಿಪಾರಿಗೆ ಶಪಥ

TNN Correspondent Posted On September 6, 2017


  • Share On Facebook
  • Tweet It

ಸೂಕ್ತ ವಲಸಿಗ ದಾಖಲೆ ರಹಿತ 8 ಲಕ್ಷ ಮಂದಿಯನ್ನು ಕುತ್ತಿಗೆ ಹಿಡಿದು ನೂಕಲು ಸಜ್ಜಾಗಿದೆ ಟ್ರಂಪ್ ಸರಕಾರ

ಹಠಮಾರಿ ಟ್ರಂಪ್ ಆತುರದ ನಿರ್ಧಾರಕ್ಕೆ ಮೆಕ್ಸಿಕೊದಿಂದ ಹೊರಬಿತ್ತು ಮೊದಲ ಖಂಡನೆ

ವಾಷಿಂಗ್ಟನ್: ಸುಮಾರು 8 ಸಾವಿರ ಅಮೆರಿಕ ನಿವಾಸಿ ಭಾರತೀಯರಿಗೆ ಗಡಿಪಾರಿನ ಆತಂಕಕ್ಕೆ ಕಾರಣವಾಗಿದ್ದ ಡಾಕಾ (ಡೆಫರ್ಡ್ ಆಕ್ಷನ್ ಫಾರ್ ಚೈಲ್ಡ್‍ಹುಡ್ ಅರೈವಲ್ಸ್) ಯೋಜನೆಗೆ ಟ್ರಂಪ್ ಸರಕಾರ ಇತಿಶ್ರೀ ಹಾಡುತ್ತದೆ ಎಂಬ ವದಂತಿ ಕೊಬೆಗೂ ನಿಜವಾಗಿದೆ. ಈ ಕುರಿತು ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಸ್ಪಷ್ಟಪಡಿಸಿದ್ದು ವಲಸಿಗರ ಕಾನೂನಿನ ಬಗ್ಗೆ ಅಂತಿಮ ನಿರ್ಧಾರ ಆಡಳಿತದ್ದಾಗಿರುತ್ತದೆ. ಪಕ್ಷ ಇದರಲ್ಲಿ ಮೂಗು ತೂರಿಸುವುದು ಬೇಡ. ಅಧ್ಯಕ್ಷರು ಯೋಜನೆಯ ಸ್ಥಗಿತಕ್ಕೆ ತೀರ್ಮಾನಿಸಿದ್ದಾರೆ. ಈ ಹಿಂದಿನ ಒಬಾಮ ಸರಕಾರ ಅಧಿಕಾರ ದುರುಪಯೋಗದಿಂದ ವಲಸಿಗರಿಗೆ ನೆರವಿನ ಹಸ್ತ ಎಂಬ ಮುಖವಾಡ ತೊಟ್ಟು ಯೋಜನೆ ಜಾರಿಗೆ ತಂದಿತ್ತು. ಇದು ರಾಷ್ಟ್ರೀಯ ಭದ್ರತೆಗೆ ಭಾರಿ ಅಪಾಯ ತರುವ ನಡೆ ಎಂದಿದ್ದಾರೆ. ದಾಖಲೆ ಹೊಂದಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಸುಮಾರು 8 ಲಕ್ಷ ವಲಸಿಗರಿಗೆ ಒಬಾಮ ಸರಕಾರ ಡಾಕಾ ಂಯೋಜನೆ ಅಡಿ ಎರಡು ವರ್ಷ ನೆಲೆಸಲು ಅವಕಾಶ ಮಾಡಿಕೊಟ್ಟಿತ್ತು. ವಲಸಿಗರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿರುವುದರಿಂದ(ಡ್ರೀಮರ್ಸ್-ಕನಸುಗಾರರು ಎಂದು ಇವರನ್ನು ಕರೆಂiಯಲಾಗುತ್ತದೆ) ಅವರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಎರಡು ವರ್ಷಗಳ ವಲಸಿಗರ ಪರವಾನಗಿ ನವೀಕರಣಕ್ಕೂ ಡಾಕಾದಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು.

ಪಕ್ಷದಿಂದ ಮುಜುಗರ ತಪ್ಪಿಸಿಕೊಳ್ಳಲು ಆರು ತಿಂಗಳ ನಂತರ ಜಾರಿ

ಸ್ವಪಕ್ಷದಿಂದ ಡಾಕಾ ನಿರ್ಬಂಧಕ್ಕೆ ಭಾರಿ ಖಂಡನೆ ವ್ಯಕ್ತವಾಗುವುದನ್ನು ಮನಗಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ತಿಂಗಳು ಕಾದು ನೋಡುವ ತಂತ್ರಕ್ಕೆ ಅನುಸರಿಸಲಿದ್ದಾರೆ. ಹಾಗಾಗಿಯೇ ಶ್ವೇತಭವನದಿಂದ ಡಾಕಾ ರದ್ದು ಕುರಿತು ಅಧಿಕೃತ ಆದೇಶ ಹೊರಬಿದ್ದರೂ, ಜಾರಿ ಮಾತ್ರ ಆರು ತಿಂಗಳ ನಂತರ ಮಾಡಲು ಟ್ರಂಪ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಡಾಕಾ ವಿರುದ್ಧ ಟ್ರಂಪ್ ಗುಡುಗು

ಮೂಲ ಅಮೆರಿಕನ್ನರ ಆಶಾಕಿರಣ ಎಂದು ಬಿಂಬಿಸಿಕೊಂಡು ಚುನಾವಣೆ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಅಮೆರಿಕ ಅಧ್ಯಕ್ಷರ ಹುದ್ದೆಗೇರಿದ ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ಡಾಕಾ ರದ್ದು ಮಾಡುವುದನ್ನೇ ಪ್ರತಿಸ್ಪರ್ಧಿ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿದ್ದರು. ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸೋಲಿಗೆ ವಲಸಿಗರ ವಿರುದ್ಧ ಆಕೆ ಧ್ವನಿಯೆತ್ತದಿರುವುದೇ ಕಾರಣ ಎಂದು ಹಲವು ವಿಶ್ಲೇಷಕರು ಹೇಳಿದ್ದರು.

  • Share On Facebook
  • Tweet It


- Advertisement -
DACA BAN


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Tulunadu News March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search