ಶಿವದೂತ ಗುಳಿಗೆ ನಾಟಕದ “ಭೀಮರಾವ್” ರಮೇಶ್ ಕಲ್ಲಡ್ಕ ನಿಧನ!
Posted On July 23, 2025
0

ಖ್ಯಾತ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಕಲಾವಿದರಾಗಿ ಕೆಲಸ ಮಾಡುತ್ತಿದ್ದ ಚಿ.ರಮೇಶ್ ಕಲ್ಲಡ್ಕ ವಿಧಿವಶರಾಗಿದ್ದಾರೆ. ಅವರು ಶಿವದೂತ ಗುಳಿಗೆಯ ಭೀಮರಾವ್ ಎಂಬ ಬ್ರಾಹ್ಮಣ ಪಾತ್ರದಿಂದ ಸಾಕಷ್ಟು ಚರ್ಚೆಯಲ್ಲಿದ್ದರು. ಅವರು ಕಲಾ ಸಂಗಮದ ಎಲ್ಲಾ ಸಾಮಾಜಿಕ, ಧಾರ್ಮಿಕ ನಾಟಕಗಳಲ್ಲಿ ನಟಿಸಿದ್ದರೂ ಅವರಿಗೆ ಶಿವದೂತ ಗುಳಿಗೆ ನಾಟಕ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತು. ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಅವರು ತುಳು ನಾಟಕ ಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರಿಗೆ 68 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತಿದೆ. ಅವರು ಛತ್ರಪತಿ ಶಿವಾಜಿ ನಾಟಕದಲ್ಲಿ ದಾದಾಜಿ ಕೊಂಡದೇವ ಪಾತ್ರವನ್ನು ನಿಭಾಯಿಸುತ್ತಿದ್ದರು. ರಮೇಶ್ ಕಲ್ಲಡ್ಕ ನಿಧನಕ್ಕೆ ಹಿರಿಕಿರಿ ಕಲಾವಿದರು ಕಂಬನಿ ಮಿಡಿದಿದ್ದಾರೆ.
Trending Now
SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
July 25, 2025