ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!

ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರು ಇತ್ತೀಚೆಗೆ ಮೀಡಿಯಾಗೆ ಒಂದಕ್ಕೆ ಸಂದರ್ಶನ ನೀಡುವಾಗ ಅದರಲ್ಲಿ ಅವರು ಚೀನಾ ನಿರ್ಮಿತ ಡ್ರೋಣ್ ಒಂದನ್ನು ಕೈಯಲ್ಲಿ ಹಿಡಿದು “ಭಾರತದಲ್ಲಿ ಈ ಡ್ರೋಣ್ ನ ಬಿಡಿಭಾಗಗಳನ್ನು ಉತ್ಪಾದಿಸುವ ಕಂಪೆನಿಗಳೇ ಇಲ್ಲ. ಇಂತಹ ಕ್ಷೇತ್ರದಲ್ಲಿ ಭಾರತ ಕೆಲಸ ಮಾಡಬೇಕಿದೆ” ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದರು. ರಾಹುಲ್ ಗಾಂಧಿ ಹೇಳಿರುವ ಈ ಹೇಳಿಕೆಯನ್ನು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ (ಡಿಎಫ್ ಐ) ಇದರ ಅಧ್ಯಕ್ಷ ಸ್ಮಿತ್ ಶಾ ವಿರೋಧಿಸಿದ್ದಾರೆ.
ಭಾರತದಲ್ಲಿ ಆಮದು ಆಗಲು ನಿಷೇಧಿತವಾಗಿರುವ ಡ್ರೋಣ್ ಒಂದನ್ನು ಹಿಡಿದು ಭಾರತ ಬೇರೆ ದೇಶಗಳೊಂದಿಗೆ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ ಇಂತಹ ಕ್ಷೇತ್ರದಲ್ಲಿಯೂ ಕೆಲಸ ಮಾಡಬೇಕು ಎಂದು ಹೇಳಿರುವ ರಾಹುಲ್ ಗಾಂಧಿಯವರಿಗೆ ಭಾರತದ ವಾಸ್ತವದ ಪರಿಚಯವೇ ಇಲ್ಲ ಎಂದು ಸ್ಮಿತ್ ಶಾ ಹೇಳಿದ್ದಾರೆ. ಯಾಕೆಂದರೆ ಇದೇ ಕ್ಷೇತ್ರದಲ್ಲಿ 518 ಕಂಪೆನಿಗಳು ವಿವಿಧ ರೀತಿಯ ಡ್ರೋಣ್ ಗಳನ್ನು ಉತ್ಪಾದಿಸುವಲ್ಲಿ ನಿರತವಾಗಿವೆ. ಇನ್ನು ಡ್ರೋಣ್ ಕಾಂಪೋನೆಂಟ್ ತಯಾರಿಕಾ ಸಂಸ್ಥೆಗಳೇ 50 ಕ್ಕೂ ಹೆಚ್ಚಿವೆ. ಅವು ಡ್ರೋನ್ ಬ್ಯಾಟರಿ, ಫ್ಲೈಟ್ ಕಂಟ್ರೋಲರ್ಸ್, ಮೋಟಾರ್ಸ್, ಪ್ರೋಪೆಲ್ಲರ್ಸ್, ರಿಸಿವರ್ಸ್, ಟ್ರಾನ್ಸ್ ಮೀಟರ್ ಹೀಗೆ ವಿವಿಧ ಬಿಡಿಭಾಗಗಳನ್ನು ತಯಾರಿಸುತ್ತವೆ. ಹಾಗಿರುವಾಗ ಆಮದು ನಿಷೇಧವಾಗಿರುವ ಚೈನೀಸ್ ಡ್ರೋನ್ ಒಂದನ್ನು ಹಿಡಿದು ಭಾರತ ಈ ಬಗ್ಗೆ ಯೋಚಿಸಬೇಕು, ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಹೇಳಿ ಆ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಾವಿರಾರು ತಜ್ಞರನ್ನು ಅವಮಾನಿಸಿದಂತೆ ಆಗಿದೆ ಎನ್ನುವುದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಇದರ ಅಧ್ಯಕ್ಷರ ಮಾತುಗಳು. ಒಟ್ಟಿನಲ್ಲಿ ಚೀನಾದಲ್ಲಿ ನಿರ್ಮಿತವಾಗಿರುವ ಭಾರತದಲ್ಲಿ ಆಮದು ನಿಷೇಧವಾಗಿರುವ ದ್ರೋಣ್ ಒಂದನ್ನು ಕೈಯಲ್ಲಿ ಹಿಡಿದು ಈ ಕ್ಷೇತ್ರದಲ್ಲಿ ಭಾರತ ಕೆಲಸ ಮಾಡಬೇಕು ಎಂದು ಹೇಳಿರುವುದು ಎಷ್ಟು ಸರಿ ಎನ್ನುವುದು ಡ್ರೋಣ್ ನಿರ್ಮಾಣ ಕ್ಷೇತ್ರದಲ್ಲಿರುವವರ ಪ್ರಶ್ನೆ.