ಒಂದು ವೇಳೆ ಗೌರಿ ಹತ್ಯೆ ಆದಾಗ ಬಿಜೆಪಿ ಅಧಿಕಾರದಲ್ಲಿದ್ದರೆ!
ಒಮ್ಮೆ ಯೋಚಿಸಿ. ಗೌರಿ ಲಂಕೇಶ್ ಅವರ ಹತ್ಯೆಯಾದ ಸಂದರ್ಭದಲ್ಲಿ ಒಂದು ವೇಳೆ ಈಗ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಿದ್ದರೆ ಏನಾಗುತ್ತಿತ್ತು? ಸಂಶಯವೇ ಇಲ್ಲ. ಮರುದಿನ ಬೆಳಿಗ್ಗೆನೆ ಕಾಂಗ್ರೆಸ್ ತನ್ನ ಮುಖಂಡರನ್ನು ಕರೆಸಿ ತುರ್ತು ಸಭೆ ಮಾಡಿ ಸಂಜೆಯೊಳಗೆ ಬೃಹತ್ ಪ್ರತಿಭಟನೆ ಮಾಡುತ್ತಿತ್ತು. ಸಂಜೆನೆ ಯಾಕೆ, ಎಡಪಂಥಿಯ ಪತ್ರಕರ್ತೆಯೊಬ್ಬಳು ಹತ್ಯೆಯಾಗಿದ್ದಾಳೆ ಎಂದು ಗೊತ್ತಾದ ತಕ್ಷಣ ಮರುದಿನ ಅಷ್ಟು ಕಾಂಗ್ರೆಸ್ ಮುಖಂಡರು ಎಲ್ಲಿದ್ದರೂ ಕಾಂಗ್ರೆಸ್ ಕಚೇರಿಗೆ ಬರುತ್ತಿದ್ದರು. ಅದರೊಂದಿಗೆ ಕಮ್ಯೂನಿಸ್ಟ್ ಮುಖಂಡರನ್ನು ಕೂಡ ಸಂಪರ್ಕಿಸಿ ಬರಲು ತಿಳಿಸುತ್ತಿದ್ದರು. ಎಲ್ಲರೂ ಸೇರಿ ಎಡಪಂಥಿಯ ಚಿಂತನೆ ಉಳ್ಳ ಸಾಹಿತಿಗಳನ್ನು ಎದುರಿಗೆ ನಿಲ್ಲಿಸಿ ಅವರಿಂದ ಭಾಷಣ ಮಾಡಿಸಿ ಹಿಂದೆ ನಿಂತು ಘೋಷಣೆ ಕೂಗುತ್ತಿದ್ದರು.
ಅದರೊಂದಿಗೆ ಕೆಲವು ಎಡಪಂಥಿಯ ಲೇಖಕರಿಗೆ ಅವರ ಪ್ರಶಸ್ತಿಗಳನ್ನು ಹಿಂತಿರುಗಿಸಲು ಹೇಳುತ್ತಿದ್ದರು. ಈಗ ಹಿಂತಿರುಗಿಸಿ ನಂತರ ನಾವು ಅಧಿಕಾರಕ್ಕೆ ಬಂದ ಬಳಿಕ ಕೊಡಿಸುತ್ತೇವೆ ಎಂದು ಭರವಸೆ ಕೊಡುತ್ತಿದ್ದರು. ಬಿಜೆಪಿ ಅಧಿಕಾರದಲ್ಲಿ ಎಡಪಂಥಿಯರಿಗೆ ಬದುಕುವ ಹಕ್ಕಿಲ್ಲವೇ ಎನ್ನುವ ವಿಷಯದಲ್ಲಿ ಮಾಧ್ಯಮಗಳಲ್ಲಿ ಚರ್ಚೆ ಇಡಿಸುತ್ತಿದ್ದರು. ಗಂಟೆಗೊಂದು ಕಡೆ ಬೇರೆ ಬೇರೆ ನಾಯಕರಿಂದ ಸುದ್ದಿಗೋಷ್ಟಿ ಮಾಡಿಸಿ ಕೇವಲ ಹಿಂದೂತ್ವದ ಚಿಂತನೆ ಇದ್ದವರು ಮಾತ್ರ ಬದುಕಲು ಇದೇನು ಬಿಜೆಪಿಯವರ ದುರಂಕಾರಿ ಆಡಳಿತನಾ ಎಂದು ಹೇಳುತ್ತಿದ್ದರು. ರಾಜ್ಯ ಬಂದ್ ಗೆ ಕರೆ ಕೊಡಲಾಗುತ್ತಿತ್ತು. ರಾಷ್ಟ್ರೀಯ ನಾಯಕರು ಕರ್ನಾಟಕವನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆನೋ ಎನ್ನುವಂತೆ ದಿನಕ್ಕೆ ನಾಲ್ಕು ಜನ ವಿಮಾನದಲ್ಲಿ ಬಂದು ಬೆಂಗಳೂರಿನ ಬೇರೆ ಬೇರೆ ಅತಿಥಿ ಗೃಹಗಳಲ್ಲಿ ನಿಂತು ಅಲ್ಲಿಂದ ಗೌರಿ ಲಂಕೇಶ್ ಮನೆಗೆ ಪೇರೆಡ್ ಮಾಡಿ ತಮ್ಮ ಮೊಸಳೆ ಕಣ್ಣೀರು ಹಾಕುತ್ತಿದ್ದರು. ರಾಜ್ಯ ಬಂದ್ ಗೆ ಕರೆ ಕೊಡಲಾಗುತ್ತಿತ್ತು. ಬಸ್ಸುಗಳಿಗೆ ಕಲ್ಲು ಹೊಡೆಯಲಾಗುತ್ತಿತ್ತು. ಒಂದೆರಡು ಚೂರಿ ಇರಿತ ಪ್ರಕರಣ ನಡೆಯುತ್ತಿತ್ತು. ಇಷ್ಟೆಲ್ಲ ಆದ ಮೇಲೆ ಬೆಂಗಳೂರು ಚಲೋ ಮಾಡಿ ಬಿಜೆಪಿ ಆಡಳಿತ ದುಷ್ಟ ಎಂದು ಎಲ್ಲರಿಗೂ ಮನವರಿಕೆ ಮಾಡಿಬಿಡುತ್ತಿದ್ದರು.
ಆದರೆ ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ. ಬಿಜೆಪಿ ವಿಪಕ್ಷದಲ್ಲಿದೆ. ಕಾಂಗ್ರೆಸ್ ಮಾಡಬಹುದಾಗಿದ್ದನ್ನು ಮಾಡುತ್ತಾ? ಇಲ್ಲ. ಹಾಗಾದರೆ ಜನರಿಗೆ ಇವರ ಸರಕಾರದ ಬಗ್ಗೆ ಹೇಗೆ ಗೊತ್ತಾಗಬೇಕು!
ಸೆಪ್ಟೆಂಬರ್ 5 ರಂದು ನಡೆದ ಮೂರು ಘಟನೆಗಳು:
ಬೆಳಿಗ್ಗೆ: ಬಿಜೆಪಿಗರಿಂದ “ಮಂಗಳೂರು ಚಲೋ ಬೈಕ್ ರ್ಯಾಲಿಗೆ ಚಾಲನೆ” ರಾಜ್ಯದಲ್ಲಿ ಆಡಳಿತವಿರುವ ಕಾಂಗ್ರೆಸ್ ಸರಕಾರದಿಂದ ಪೊಲೀಸರ ದುರ್ಬಳಕೆ ಮತ್ತು ರ್ಯಾಲಿ ಹತ್ತಿಕ್ಕಲು ಯತ್ನ. ರ್ಯಾಲಿ ತಾತ್ಕಾಲಿಕವಾಗಿ ನಿಂತರೂ ಅಪಾರ ಜನಬೆಂಬಲ ಗಳಿಸಿಕೊಂಡ ರ್ಯಾಲಿ. ಮಾಧ್ಯಮಗಳಲ್ಲಿ ಕಾಂಗ್ರೆಸ್ ದಬ್ಬಾಳಿಕೆಯ ಬಗ್ಗೆ ಬಿಸಿಬಿಸಿ ಚರ್ಚೆ. ಕಾಂಗ್ರೆಸ್ ಗೆ ಮುಖಭಂಗ
ಮಧ್ಯಾಹ್ನ: ಸುಪ್ರೀಂ ಕೋರ್ಟಿಂದ “ಡಿವೈಎಸ್ ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶ”. ಮಾಧ್ಯಮಗಳಲ್ಲಿ ಕೆಜೆ ಜಾರ್ಜ್ ಗೆ ಕ್ಲೀನ್ ಚಿಟ್ ಕೊಡಿಸುವಲ್ಲಿ ರಾಜ್ಯ ಸರಕಾರದ ಹಸ್ತಕ್ಷೇಪ ಕುರಿತು ಬಿಸಿಬಿಸಿ ಚರ್ಚೆ. ಜನರಿಂದ ಸರಕಾರದ ವಿರುದ್ಧ ಆಕ್ರೋಶ. ಕಾಂಗ್ರೆಸ್ ಗೆ ಮುಖಭಂಗ
ಸಂಜೆ: “ದುಷ್ಕರ್ಮಿಗಳಿಂದ ಪತ್ರಕತ್ತೆ ಗೌರಿ ಲಂಕೇಶ್ ಗುಂಡಿಕ್ಕಿ ಹತ್ಯೆ” ಸ್ಥಳದಲ್ಲಿ ಜಮಾವನೆಗೊಂಡ ಎಡಪಂಥಿಯರಿಂದ ಬಲಪಂಥ, ಸಂಘಪರಿವಾರ ಮತ್ತು ಮೋದಿ ವಿರುದ್ಧ ಘೋಷಣೆ. ಮಾಧ್ಯಮಗಳಲ್ಲಿ ಹತ್ಯೆಯ ಕುರಿತು ನಿರಂತರ ವರದಿ. ತನಿಖೆಗೆ ಮುಂಚೆಯೇ ಆಧಾರರಹಿತವಾದ ಆರೋಪಗಳು. ಜನಸಾಮಾನ್ಯರಲ್ಲಿ ಹತ್ಯೆಯ ಹಿಂದಿನ ಕಾರಣದ ಬಗ್ಗೆ ಗೊಂದಲ. ಎಲ್ಲ ಕಡೆ ಹತ್ಯೆಯದ್ದೇ ಚರ್ಚೆ. ಮೊದಲ ಎರಡು ಪ್ರಕರಣ ಮರೆತ ಜನ. ಕಾಂಗ್ರೆಸ್ ನಿರಾಳ.
Leave A Reply