ಪಾಕ್-ಚೀನಾದಿಂದ ಯಾವುದೇ ಕ್ಷಣಕ್ಕೂ ದಾಳಿ: ಜ.ರಾವತ್ ಎಚ್ಚರಿಕೆ
ಒಟ್ಟಿಗೆ ಒಂದೇ ಸಮಯಕ್ಕೆ ಯುದ್ಧ ಸಾರಿದರೂ ಆಶ್ಚರ್ಯವಿಲ್ಲ!
ದೆಹಲಿ : 73 ದಿನಗಳಿಂದ ಯುದ್ಧ ಕಾರ್ಮೋಡ ಕವಿಯುವಂತೆ ಉಲ್ಬಣಿಸಿದ್ದ ಸಿಕ್ಕಿಂ ಗಡಿ ಡೋಕ್ಲಾಮ್ ಬಿಕ್ಕಟ್ಟು ಶಮನವಾಗಿ ಪ್ರಧಾನಿ ಮೋದಿ ಚೀನಾ ಕ್ಸಿಯಾಮೆನ್‍ನಲ್ಲಿ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ-ಇಂಡಿಯಾ ಭಾಯಿ ಭಾಯಿ ಎಂದು ಬೀಗಿ ರಾಜತಾಂತ್ರಿಕ ಗೆಲುವು ಸಾಧಿಸಿದ್ದಾರೆ ಎನ್ನುವಾಗಲೇ ಭಾರತೀಯ ಸೇನಾ ಮುಖ್ಯಸ್ಥ ಎಚ್ಚರಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ಉತ್ತರದಲ್ಲಿ ಚೀನಾ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ರಾಷ್ಟ್ರಗಳದ್ದು ನಂಬಿಸಿ ಕುತ್ತಿಗೆ ಕುಯ್ಯುವ ಜಾಯಮಾನ. ಯಾವುದೇ ಕ್ಷಣದಲ್ಲಾದರೂ ಮತ್ತೆ ಕ್ಯಾತೆ ತೆಗೆದು ಎರಡೂ ರಾಷ್ಟ್ರಗಳು ಯುದ್ಧಕ್ಕೆ ಮುಂದಾಗಬಹುದು. ಚೀನಾ ಯುದ್ದಕ್ಕೆ ನಿಂತರೆ ಅದಕ್ಕೆ ಪಾಕ್ ಸಹಕಾರ ನಿಶ್ಚಿತ. ಅದೇ ರೀತಿ ಪಾಕಿಸ್ತಾನ ಭಾರತದ ವಿರುದ್ದ ಸಮರ ಸಾರಿದರೆ ಚೀನಾ ಕೂಡ ಅದಕ್ಕೆ ನೆರವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಪರಮಾಣು ಒಪ್ಪಂದ ಅಥವಾ ಪ್ರಜಾಪ್ರಭುತ್ವ ಅನುಸರಿಸುವ ನಾಡುಗಳೆಂದು ನೆರೆ ರಾಷ್ಟ್ರಗಳನ್ನು ಹಗುರವಾಗಿ ಪರಿಗಣಿಸಬೇಡಿ. ಏಕಕಾಲಕ್ಕೆ ಎರಡೂ ರಾಷ್ಟ್ರಗಳು ಭಾರತದ ಮೇಲೆ ಮುಗಿಬಿದ್ದು ಯುದ್ಧಕ್ಕೆ ಮುಂದಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆ ಏಲ್ಲದಕ್ಕೂ ಸನ್ನದ್ಧವಾಗಿದೆ ಎಂದ ರಾವತ್, ಯುದ್ಧಕ್ಕೆ ಮುನ್ನಡಿ ರಾಷ್ಟ್ರಗಳಿಂದಲೇ ಹೊರತು ಅದರ ಸೇನೆಗಳಿಂದಲ್ಲ ಎಂದು ಸರಕಾರಗಳ ಧೋರಣೆ ಕಡೆಗೆ ಬೆರಳು ಮಾಡಿದ್ದಾರೆ.
Leave A Reply