ಸೋನಿಯಾ ಗಾಂಧಿ ಅಂಗರಕ್ಷಕ ಗಾಯಬ್!
Posted On September 7, 2017

ದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ಸರ್ಕಾರದಿಂದ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆ(ಎಸ್‍ಪಿಜಿ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಸೆ.1ರಿಂದ ನಾಪತ್ತೆಯಾಗಿದ್ದ. ಅಂದು ಸೇವೆಗೆ ರಜೆಗ ಹಾಕಿದ್ದರೂ, ಮನೆಯಿಂದ ಪೊಲೀಸ್ ಸಮವಸ್ತ್ರ ತೊಟ್ಟು ಹೊರಬಿದ್ದಿದ್ದ ಆತ. ನಂತರ ಮನೆಗೆ ಮರಳಲೇ ಇಲ್ಲ.
ಹೌದು ಇದು ಕೌತುಕದ ಘಟನೆ. ಹಾಗಿದ್ದರೆ ರಕ್ಷಣಾ ಪಡೆ ಪೇದೆ ರಾಕೇಶ್ ಕುಮಾರ್ ವರ್ಮಾ ಎಲ್ಲಿಗೆ ಹೋದ?
ಸಾಲದ ಬಾಧೆಯಿಂದ ಪಾರ್ಕ್‍ನಲ್ಲಿ ಅಲೆದಾಡಿಕೊಂಡಿದ್ದ!
ನೋಡಿ ದೊಡ್ಡ ಪ್ರಭಾವಿಗಳ ಬಳಿಯೇ ಸದಾ ಇದ್ದರೂ ತಮ್ಮ ಕಿಂಚಿತ್ ಹಣಕಾಸಿನ ಮುಗ್ಗಟ್ಟಿಗೆ ಪರಿಹಾರ ಸಿಗದೇ ನರಳಾಡುವ ಮಂದಿ ಎಷ್ಟೋ. ಅದೇ ಥರದವನು ಪೇದೆ ರಾಕೇಶ್.
ಸುಮಾರು ರೂ.4ಲಕ್ಷ ಸಾಲ ಮಾಡಿಕೊಂಡಿದ್ದ ರಾಕೇಶ್ ಬಂದ ವೇತನ ಪೂರ್ತಿ ಸಾಲದ ಕಂತಿಗೆ ಆ.31ರಂದು ಜಮೆಮಾಡಿದ್ದ. ನಂತರ ಬರಿಗೈಲಿ ಮನೆಗೆ ಬಂದು ಯೋಚಿಸಿ, ಏಕಾಏಕಿ ಮನೆ ಬಿಟ್ಟು ಹೊರಡುವ ತೀರ್ಮಾನ ಮಾಡಿದ್ದ. ಯಾರಿಗೂ ಅನುಮಾನ ಬಾರದಂತೆ ಪೊಲೀಸ್ ಸಮವಸ್ತ್ರದಲ್ಲಿ ಮನೆ ಡ್ಯೂಟಿ ಸಮಯಕ್ಕೆ ಸರಿಯಾಗಿ ಮನೆ ಬಿಟ್ಟಿದ್ದ.
ಪಾರ್ಕ್‍ನಲ್ಲಿ ಭಿಕ್ಷೆ ಬೇಡುವಾಗ ಕಂಡಿತು ಐಡಿ ಕಾರ್ಡ್: ಒಂದು ವಾರದಿಂದ ಕುಟುಂಬದವರಿಂದ ಕಣ್ಮರೆಯಾಗಿದ್ದ ರಾಕೇಶ್ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದರು. ಆದರೆ ಪಾರ್ಕ್ ಒಂದರಲ್ಲಿ ಭಿಕ್ಷೆ ಆಹಾರಕ್ಕಾಗಿ ಅಂಗಲಾಚುತ್ತಿದ್ದಾಗ ರಾಕೇಶ್‍ನ ಪೊಲೀಸ್ ಐಡಿ ಕಾರ್ಡ್ ಕಂಡು ವ್ಯಕ್ತಿಯೊಬ್ಬ ಕಂಟ್ರೋಲ್ ರೂಮ್‍ಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ರಾಕೇಶ್‍ನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಕುಟುಂಬಕ್ಕೆ ಸೇರಿಸಿದ್ದಾರೆ.
- Advertisement -
Leave A Reply