ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
ಭಾರತೀಯ ವನಿತಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಅವರು ತಮ್ಮ ಮದುವೆ ಅಧಿಕೃತವಾಗಿ ರದ್ದುಗೊಂಡ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾರೆ. ವೈವಾಹಿಕ ಬದುಕು ಆರಂಭಗೊಳ್ಳುವ ಮೊದಲೇ ಅಂತ್ಯಗೊಂಡಿರುವುದರಿಂದ ಸಹಜವಾಗಿ ದು:ಖದಲ್ಲಿದ್ದ ಸ್ಮೃತಿ ಈಗ ಕ್ರಿಕೆಟ್ ಜೀವನಕ್ಕೆ ಮತ್ತೆ ಒಗ್ಗಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕಾಗಿ ನೆಟ್ ಪ್ರಾಕ್ಟೀಸ್ ನಡೆಸುತ್ತಿರುವ ಫೋಟೋ ಈಗ ವೈರಲ್ ಆಗಿದೆ. ತಮ್ಮ ಬದುಕು ಖಾಸಗಿಯಾಗಿದ್ದು, ಈ ಬಗ್ಗೆ ಊಹಾಪೋಹಾ ಮಾಡದಂತೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿದ್ದರು.

ಅಷ್ಟಕ್ಕೂ ಅವರ ಮದುವೆ ಸಡನ್ನಾಗಿ ಹೈಪ್ ಪಡೆದಿರುವುದು ಯಾಕೆ ಎನ್ನುವುದನ್ನು ನೋಡುತ್ತಾ ಹೋದರೆ ಮೊದಲನೇಯದಾಗಿ ಇತ್ತೀಚೆಗೆ ತಾನೆ ಭಾರತೀಯರು ಮಹಿಳಾ ಕ್ರಿಕೆಟಿಗರು ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದಿದ್ದರು. ಅದರಿಂದ ಸಹಜವಾಗಿ ಮಹಿಳಾ ಕ್ರಿಕೆಟಿಗರ ಸಾಧನೆಯನ್ನು ದೇಶಾದ್ಯಂತ ಹೊಗಳಲಾಗಿತ್ತು. ಇನ್ನು ಈ ತಂಡದ ಭಾಗವಾಗಿರುವ ಸ್ಮೃತಿ ಈ ಗೆಲುವಿನೊಂದಿಗೆ ಲೈಮ್ ಲೈಟಿಗೆ ಬಂದಿದ್ದರು. ಅದರ ಬೆನ್ನಲ್ಲೇ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಒಂದು ಮೈದಾನದಲ್ಲಿ ಇವರಿಗೆ ಹೂಗುಚ್ಚ ನೀಡಿ ಪ್ರಪ್ರೋಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದರಿಂದ ಸ್ಮೃತಿ ಮಂಧಾನ ಅವರ ಮದುವೆ ಮುಖ್ಯ ವಾಹಿನಿಯಲ್ಲಿಯೂ ಸಾಕಷ್ಟು ಸುದ್ದಿಯಾಗಿತ್ತು. ಇನ್ನು ವಿಶ್ವ ವಿಜೇತ ಮಹಿಳಾ ಕ್ರಿಕೆಟಿಗರು ಈ ಖುಷಿಯನ್ನು ಎಂಜಾಯ್ ಮಾಡುತ್ತಿರುವ ದೃಶ್ಯ ಸಾಕಷ್ಟು ರೀತಿಯಲ್ಲಿ ಮನಸ್ಸು ಸೊರೆಗೊಂಡಿತ್ತು. ಆದ್ದರಿಂದ ಈ ಮದುವೆಗೆ ದೇಶಾದ್ಯಂತ ಪ್ರಚಾರ ಸಿಕ್ಕಿತು.

ಆದರೆ ಮದುವೆಯ ದಿನ ಆಕೆಯ ತಂದೆ ಸಡನ್ನಾಗಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದು, ನಂತರ ಆಕೆಯ ಭಾವಿ ಪತಿ ಪಲಾಶ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದು ಎಲ್ಲವೂ ನಡೆದು ಮದುವೆ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಮದುವೆ ರದ್ದಾಗಿದೆ. ಅದು ಮುಗಿದ ಅಧ್ಯಾಯ ಎಂದು ಸ್ಮೃತಿ ಬರೆದುಕೊಂಡಿದ್ದಾರೆ. ಅದಕ್ಕೆ ಕಾರಣಗಳು ಏನೇ ಇರಲಿ, ಆದರೆ ಮದುವೆಯ ಮೊದಲೇ ಅದು ಆಕೆಗೆ ತಿಳಿಯಿತಾ, ಇದರಿಂದ ಆಕೆಯೇ ಅದನ್ನು ಕ್ಯಾನ್ಸಲ್ ಮಾಡಿದ್ದಾ ಎನ್ನುವುದು ಗೌಪ್ಯತೆಯ ವಿಚಾರ. ಆದರೆ ಅದೆಲ್ಲಾ ಮುಗಿದು ಈಗ ಸ್ಮೃತಿ ಮತ್ತೆ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ಆಕೆಯ ಸಹೋದರ ಶ್ರವನ್ ಮಂಧನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರತ ಮಹಿಳಾ ತಂಡ ಡಿ 21 ರಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಇದಕ್ಕಾಗಿ ಸ್ಮೃತಿ ನೆಟ್ಸ್ ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇದು ಒಂದು ರೀತಿಯಲ್ಲಿ ಉತ್ತಮ ಬೆಳವಣಿಗೆ. ಯಾಕೆಂದರೆ ಒಂದು ಕಹಿ ವಿಷಯ ಬದುಕಿನಲ್ಲಿ ಆದ ನಂತರ ಅದನ್ನೇ ಹಿಡಿದುಕೊಂಡು ಕೊರಗುವುದಕ್ಕಿಂತ ಹೊಸ ಅಧ್ಯಾಯವನ್ನು ಆರಂಭಿಸುವುದು ನಿಜಕ್ಕೂ ಯೋಗ್ಯ ಬೆಳವಣಿಗೆ.










