ಬೆಳಗಾವಿಯಲ್ಲಿ ಆದ್ದೂರಿಯಾಗಿ ಪ್ರಾರಂಭವಾದ ಶೋಭಾಯಾತ್ರೆ
Special Coverage from Belgavi:
ಕರ್ನಾಟಕದ ದಕ್ಷಿಣದ ಹೆಬ್ಬಾಗಿಲು ಮಂಗಳೂರಿನಿಂದ ಪ್ರಾರಂಭವಾದ ಯುವ ಬ್ರಿಗೇಡ್ ಸಮರ್ಪಿಸುವ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ರಾಜ್ಯದ ಮುಕುಟ ಬೆಳಗಾವಿಯಲ್ಲಿ ತನ್ನ ಸಮಾರೋಪ ಸಮಾರಂಭವನ್ನು ಕಾಣಲು ಕ್ಷಣಗಣನೆ ಆರಂಭವಾಗಿದೆ. ಬೆಳಿಗ್ಗೆ 9 ಗಂಟೆಗೆ ಬೆಳಗಾವಿಯಲ್ಲಿರುವ ಶ್ರೀ ರಾಮಕೃಷ್ಣಾಶ್ರಮದ ಉಪಕೇಂದ್ರದಿಂದ ಹೊರಟ ಅದ್ದೂರಿ ಶೋಭಾಯಾತ್ರೆಯ ಉದ್ಘಾಟನೆಯನ್ನು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೋ|ಕರಿಸಿದ್ದಪ್ಪ ನೆರವೇರಿಸಿದರು. ಅವರೊಂದಿಗೆ EX-ರಾಜ್ಯಸಭಾ ಸದಸ್ಯರೂ, ಸಮ್ಮೇಳನಾಧ್ಯಕ್ಷರೂ ಆಗಿರುವ ತರುಣ್ ವಿಜಯ್ ಹಾಗೂ ಶ್ರೀರಾಮಕೃಷ್ಣ ಆಶ್ರಮದ ಅನೇಕ ಸಂತರು ಭಾಗವಹಿಸಿದರು. ಯುವ ಬ್ರಿಗೇಡಿನ ಮಾರ್ಗದಶ್ಯಕ ಮತ್ತು ಪ್ರೇರಣಾ ಶಕ್ತಿಯಾಗಿರುವ ಚಕ್ರವರ್ತಿ ಸೂಲಿಬೆಲೆಯವರು ಮೆರವಣಿಗೆಯ ಉದ್ದಕ್ಕೂ ಯುವಕರಿಗೆ ಮಾರ್ಗದಶ್ಯನ ನೀಡುತ್ತಿದ್ದರು.
ಶೋಭಾಯಾತ್ರೆಯಲ್ಲಿ ಅಶ್ವಗಳೊಂದಿಗೆ ರಥದಲ್ಲಿ ವಿರಾಜಮಾನವಾಗಿರುವ ವಿವೇಕಾನಂದರ ಮೂರ್ತಿಯನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಇನ್ನು ಪಲ್ಲಕ್ಕಿಯಲ್ಲಿ ವಿವೇಕಾನಂದ ಹಾಗೂ ನಿವೇದಿತಾ ಅವರ ಪುಸ್ತಕಗಳನ್ನು ಇಟ್ಟು ಅದನ್ನು ಯುವ ಬ್ರಿಗೇಡ್ ಕಾರ್ಯಕತ್ಥರು ಹೊತ್ತು ಸಾಗಿದರು. ಅದರೊಂದಿಗೆ ಉತ್ತರ ಕರ್ನಾಟಕದ ವೀರಗಾಸೆ, ಡೊಳ್ಳು ಕುಣಿತ ಸಹಿತ ಜಾನಪದ ಪ್ರದರ್ಶನ ಕೂಡ ನಡೆಯಿತು. ದಾರಿಯುದ್ದಕ್ಕೂ ಜನರು ವಿವೇಕಾನಂದರ ಮೂರ್ತಿಗೆ ಹೂವಿನ ಎಸಳುಗಳನ್ನು ಎಸೆಯುವ ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.
ಬಹಳ ಅಚ್ಚುಕಟ್ಟಾಗಿ ನಡೆದ ಸಂಪೂರ್ಣ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡಿನ ನೂರಾರು ಕಾರ್ಯಕತ್ಥರು ಶ್ವೇತ ವಸ್ತ್ರಧಾರಿಗಳಾಗಿ ಭಾಗವಹಿಸಿ ಶೋಭಾಯಾತ್ರೆಯ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಿದರು.
Leave A Reply