ಸಾಮಾಜಿಕ ತಾಣಗಳ ಪತ್ರಕರ್ತರು ಮುಖ್ಯವಾಹಿನಿ ಪತ್ರಕರ್ತರ ಮುಖಕ್ಕೆ ಸತ್ಯ ತೋರಿಸಬೇಕು- ಬಗ್ಗಾ
Special Coverage from Belgavi:
ಯಾವಾಗ ಸಮಾಜದ ಮುಖ್ಯವಾಹಿನಿಯ ಪತ್ರಕರ್ತರು ದೇಶದ ಅಭಿವೃದ್ಧಿಗೆ ಪೂರಕವಲ್ಲದ ಸುದ್ದಿಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುತ್ತಾರೋ ಆವಾಗ ನಾವು ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿ ಅದಕ್ಕೆ ಸೂಕ್ತ ಉತ್ತರ ಕೊಟ್ಟು ದೇಶದ ಹೆಸರು ಹಾಳಾಗದಂತೆ ತಡೆಯಬೇಕು ಎಂದು ಸಾಮಾಜಿಕ ತಾಣಗಳಲ್ಲಿ ತಮ್ಮ ಅಪ್ರತಿಮ ಲೇಖನಗಳಿಂದ ಮನೆಮಾತಾಗಿರುವ #Tejinder Pal Singh Bagga ಹೇಳಿದ್ದಾರೆ.
ಅವರು ಯುವ ಬ್ರಿಗೇಡ್ ಸಮರ್ಪಿಸುವ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಕೊನೆಯ ಹಂತದ ಕಾರ್ಯಕ್ರಮದ ಮೊದಲ ದಿನ ಪತ್ರಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಗೌರೀಶ್ ಲಂಕೇಶ್ ಹತ್ಯೆಯ ಬಗ್ಗೆ ನಮಗೆಲ್ಲರಿಗೂ ಬೇಸರವಿದೆ. ಆದರೆ ಅದನ್ನು ಇಡೀ ದಿನ ಮತ್ತು ನಂತರವೂ ಹೆಚ್ಚು ತೋರಿಸುವ ನಮ್ಮ ವಾಹಿನಿಗಳು ಅದೇ ಮೈಸೂರಿನ ರಾಜು, ಮಡಿಕೇರಿಯ ಕುಟ್ಟಪ್ಪ ಅಥವಾ ಮಂಗಳೂರಿನ ಶರತ್ ಹತ್ಯೆಯಾದಾಗ ಅದನ್ನು ಎಷ್ಟು ಹೊತ್ತು ತೋರಿಸಿದ್ದರು ಎನ್ನುವುದು ನಮಗೆಲ್ಲರಿಗೂ ಗೊತ್ತೆ ಇದೆ. ಅಂತಹ ಸಮಯದಲ್ಲಿ ಸಾಮಾಜಿಕ ತಾಣಗಳಲ್ಲಿ ನಾವು ಸಕ್ರಿಯರಾಗಿ ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವಿಕರಿಸುತ್ತಿದ್ದ ಮಾಧ್ಯಮಗಳ ಮುಖಕ್ಕೆ ಕನ್ನಡಿ ಹಿಡಿದು ಅವರು ಅನಿವಾರ್ಯವಾಗಿ ವಾಸ್ತವವನ್ನು ತೋರಿಸಲು ಮುಂದಾಗುವಂತೆ ಮಾಡಬೇಕು ಎಂದು ಬಗ್ಗಾ ಹೇಳಿದ್ದಾರೆ. ದೇಶವನ್ನು ವಿರೋಧಿಸಿ ಮಾತನಾಡುವ ವ್ಯಕ್ತಿಗಳ ಭಾಷಣವನ್ನು ಇಡೀ ದಿನ ತೋರಿಸುವ ನಮ್ಮ ಮಾಧ್ಯಮಗಳು ಅದೇ ದೇಶಕ್ಕಾಗಿ ಹೋರಾಡಿ ಆ ಮೂಲಕ ಭಯೋತ್ಪಾದಕರ ಕೆಂಗೆಣ್ಣಿಗೆ ತುತ್ತಾಗಿ ಹತ್ಯೆಯಾದ ದೇಶಪ್ರೇಮಿಗಳ ಹತ್ಯಾ ಸುದ್ದಿಗಳನ್ನು ಮರೆ ಮಾಚುತ್ತವೆ ಎಂದು #Tejinder Pal Singh Bagga ಹೇಳಿದರು.
ಫರಿದಾಬಾದ್ ನಲ್ಲಿ ಗುಡಿಸಲೊಳಗೆ ಇದ್ದ ಎರಡು ಮಕ್ಕಳ ಹತ್ಯೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕತ್ತರು ಕಾರಣ ಎಂದು ಸುದ್ದಿ ಮಾಧ್ಯಮಗಳು ಸುಳ್ಳು ಸುದ್ದಿ ದಿನವೀಡಿ ಪ್ರಚಾರಪಡಿಸಿದವು. ನಂತರ ತನಿಖೆಯ ಬಳಿಕ ಅದು ಶಾರ್ಟ್ ಸರ್ಕಿಟ್ ನಿಂದ ಆದ ಸಾವು ಎಂದು ಗೊತ್ತಾದ ನಂತರ ಅದೇ ಮಾಧ್ಯಮಗಳು ಬಾಯಿ ಮುಚ್ಚಿಕೊಂಡವು. ಹಾಗಂತ ಸತ್ಯ ಸುದ್ದಿಯನ್ನು ತೋರಿಸಲು ಹೋಗಲಿಲ್ಲ. ಹತ್ತು ವರ್ಷಗಳ ಹಿಂದೆ ಮಾಧ್ಯಮಗಳು ಹೇಳಿದ್ದೇ ನಿಜ ಎಂದು ಅಂದುಕೊಳ್ಳುವ ಕಾಲವಿತ್ತು. ಆದರೆ ಈಗ ಸಾಮಾಜಿಕ ತಾಣಗಳ ಪತ್ರಕರ್ತರು ಮನಸ್ಸು ಮಾಡಿದರೆ ಸತ್ಯಗಳನ್ನು ಪ್ರಪಂಚದ ಮುಂದೆ ಎತ್ತಿ ಹಿಡಿಯಬಹುದು. ದೆಹಲಿಯಲ್ಲಿ ಚರ್ಚ್ ಮೇಲೆ ಕಲ್ಲು ತೂರಾಟ ಆಯಿತು, ಅಸಹಿಷ್ಣುತೆ ಎಂದು ಮಾಧ್ಯಮಗಳು ಮೋದಿ ಸರಕಾರದ ವಿರುದ್ಧ ಗೂಬೆ ಕೂರಿಸಿದವು. ನಂತರ ಗೊತ್ತಾಯಿತು, ಅದು ಮಕ್ಕಳು ಕ್ರಿಕೆಟ್ ಆಡುವಾಗ ಬಾಲ್ ತಾಗಿದ್ದು ಎಂದು. ಆದರೆ ಅಷ್ಟರಲ್ಲಿ ಮಾಧ್ಯಮಗಳು ತಮ್ಮ ಸೈಡಿನ ಮಾತುಗಳನ್ನು ಹೇಳಿ ಆಗಿರುತ್ತದೆ. ಈಗ ಅದನ್ನು ಸುಳ್ಳೆಂದು ಸಾಬೀತು ಪಡಿಸುವ ಜವಾಬ್ದಾರಿ ಸಾಮಾಜಿಕ ತಾಣಗಳ ಪತ್ರಕರ್ತರ ಮೇಲಿದೆ ಎಂದು ಸಿಂಗ್ ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರವಾಗುತ್ತದೆ. ಅದನ್ನು ಸಂಘ ಪರಿವಾರದ ತಲೆಗೆ ಕಟ್ಟಲಾಗುತ್ತದೆ. ಆ ಬಳಿಕ ಬಾಂಗ್ಲಾ ದೇಶದ ಮುಸಲ್ಮಾನನೊಬ್ಬ ಮಾಡಿದ್ದು ಎಂದು ಗೊತ್ತಾದ ನಂತರ ಅದೇ ಮಾಧ್ಯಮಗಳು ಮೌನಕ್ಕೆ ಶರಣಾಗುತ್ತವೆ. ಮಾಧ್ಯಮಗಳಿಗೆ ಬಂಗಾಲದ, ಕೇರಳದ ಕೊಲೆಗಳು ಕಾಣಿಸಲ್ಲ, ಅದನ್ನು ನಾವು ಮಾಡೇಕು. 2014 ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲು ಸಾಮಾಜಿಕ ತಾಣಗಳಲ್ಲಿ ಹೆಚ್ಚೆಚ್ಚು ಕಾರ್ಯಕತ್ತರು ಸಕ್ರಿಯವಾಗಿದ್ದೇ ಕಾರಣ, ಆದ್ದರಿಂದ ಮುಂದಿನ ಬಾರಿಯೂ ಯುವಕರು ಸತ್ಯದ ಶೋಧ ಮಾಡಿ ಜನರ ಮುಂದಿಟ್ಟು ಮುಖ್ಯವಾಹಿನಿಯ ಮಾಧ್ಯಮಗಳ ಹಿಡನ್ ಏಜೆಂಡಾವನ್ನು ಬಯಲಿಗೆ ತರಬೇಕು ಎಂದು ಹೇಳಿದರು. ಚಕ್ರವರ್ತಿ ಸೂಲಿಬೆಲೆ #Tejinder Pal Singh Bagga ಅವರ ಪರಿಚಯ ಮಾಡಿದರು. ಶ್ರೀನಾಥ ಮಾನೆ ಅತಿಥಿಯವರನ್ನು ಗೌರವಿಸಿದರು.
Leave A Reply