ಆಧಾರ್ ಲಿಂಕ್ ಆಗದ ಸಿಮ್ ಢಂ!
ಫೆ. 2018ರೊಳಗೆ ಮೊಬೈಲ್ ಸಿಮ್‍ಕಾರ್ಡ್‍ಗೆ ಆಧಾರ್ ಜೋಡಣೆ ಮುಕ್ತಾಯ
ದೆಹಲಿ : ಎಲ್ಲ ಚಾಲಿತ ಸಿಮ್‍ಕಾರ್ಡಗಳಿಗೆ ಅದನ್ನು ಬಳಸುತ್ತಿರುವ ಅಥವಾ ಸಂಬಂಧಿತ ಮೊಬೈಲ್ ಗ್ರಾಹಕನ ಸಿಮ್ ಜೋಡಣೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಫೆ.2018ರೊಳಗೆ ಈ ಪ್ರಕ್ರಿಯೆ ಮುಗಿಯಬೇಕಿದ್ದು, ಜೋಡಣೆ ಮಾಡಿಕೊಳ್ಳದ ಸಿಮ್‍ಗಳನ್ನು ನಿಷ್ಟ್ರಿಯಗೊಳಿಸಲು ಸರ್ಕಾರ ಆದೇಶಿಸಿದೆ.
ಕಳೆದ ಫೆಬ್ರವರಿಯಲ್ಲಿ ಲೋಕನೀತಿ ಪ್ರತಿಷ್ಠಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯ ಒಂದು ವರ್ಷದೊಳಗೆ ಎಲ್ಲ ಸಿಮ್‍ಗಳಿಗೆ ಆಧಾರ್ ಜೋಡಿಸಿ ಎಂದು ಆದೇಶಿಸಿತ್ತು. ಅದರನ್ವಯ ಕಾರ್ಯನಿರತವಾಗಿರುವ ದೂರಸಂಪರ್ಕ ಸಚಿವಾಲಯ ಮೊಬೈಲ್ ಸೇವಾದಾರ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಉಗ್ರರು, ವಂಚಕರು ಬೇರೆ ಯಾರದ್ದೋ ಹೆಸರಲ್ಲಿ ಸಿಮ್ ಖರೀದಿಸಿ ನಾಗರಿಕರ ಜೀವಹಾನಿಯ ಕೃತ್ಯ ಎಸಗುವುದನ್ನು ತಡೆಯಲು ಇದೊಂದು ಮಹತ್ವದ ಹೆಜ್ಜೆಯಾಗಿದೆ.
ನಿಮ್ಮ ಬೆರಳಚ್ಚು ಯಾರಿಗೂ ಸಿಗಲ್ಲ:
ಆಧಾರ್ ಆರಂಭವಾದಾಗಿನಿಂದ ಹಲವಾರು ಜನರು ನಮ್ಮ ಕಣ್ಣಿನ ಸ್ಕ್ಯಾನ್, ಬೆರಳಚ್ಚು ವಿವರಗಳನ್ನು ಹೊಂದಿರುವ ಆಧಾರ್ ಮಾಹಿತಿ ಸೋರಿಕೆಯಾದರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸುತ್ತಲೇ ಬಂದಿದ್ದಾರೆ. ಆಧಾರ್ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆಧಾರ್ ಒಳಪಡುವ ಇಲಾಖೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಕೂಡ ಯಾವುದೇ ಕಾರಣಕ್ಕೂ ನಾಗರಿಕ ವೈಯಕ್ತಿಕ ಮಾಹಿತಿ ಸೋರಿಕೆಯಾಗಲ್ಲ. ನಮ್ಮ ಜಾಲತಾಣ ಸೇವಗಳ ಭದ್ರತೆ ಹಾಗಿದೆ ಎಂದು ಸಂತೈಸುತ್ತಲೇ ಇದೆ. ಇಲ್ಲೂ ಕೂಡ ಸಿಮ್ ಕಾರ್ಡ್ ಜತೆಗ ಪಡೆಯಲಾದ ಬಯೋಮೆಟ್ರಿಕ್ ಮಾಹಿತಿಯನ್ನು ಮೊಬೈಲ್ ಸೇವಾ ಕಂಪನಿಗಳು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಆ ಥರದ್ದು ಕಂಡುಬಂದರೆ ಆಧಾರ್ ಕಾಯ್ದೆ ಅನ್ವಯ ಮೂರು ವರ್ಷ ಸೆರೆವಾಸ ಗಟ್ಟಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
Leave A Reply