sept 14 – ಬುಲೆಟ್ ರೈಲು ಕನಸು ಸಾಕಾರಕ್ಕೆ ಮೋದಿ-ಅಬೆ ಶಂಕುಸ್ಥಾಪನೆ
>> ಆ.2022ಕ್ಕೆ ಬುಲೆಟ್ ರೈಲು ಸಂಚಾರ ಅರಂಭಕ್ಕೆ ಡೆಡ್‍ಲೈನ್ ಫಿಕ್ಸ್.
>> ಮುಂಬೈ-ಅಹಮದಾಬಾದ್ ನಡುವೆ ಕೇವಲ 2 ಗಂಟೆ ಪ್ರಯಾಣ!
>> ಸೆ.14ಕ್ಕೆ ಏರ್‍ಪೋರ್ಟ್‍ನಿಂದ ಸಾಬರಮತಿವರೆಗೆ ಜಪಾನ್ ಅಧ್ಯಕ್ಷ- ಪ್ರಧಾನಿ ಮೋದಿ ಮೆರವಣಿಗೆ
ದೆಹಲಿ : ಪ್ರತಿ ಭಾರತೀಯನ ಬುಲೆಟ್ ವೇಗದ ಸಾರಿಗೆ ಕನಸು ಸಾಕಾರಕ್ಕೆ ಪ್ರಧಾನಿ ಮೋದಿ ಜಪಾನ್ ಅಧ್ಯಕ್ಷ ಶಿಂಜೋ ಅಬೆ ಜತೆಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತದ ಬುನಿರೀಕ್ಷಿತ ಹೈಸ್ಪೀಡ್ ರೈಲಿನ(ಎಚ್‍ಎಸ್‍ಆರ್) ಯೋಜನೆ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಹೊಸ ಭಾಷ್ಯ ಬರೆಯಲಿದ್ದಾರೆ.
ಯೋಜನೆ ಚೊಚ್ಚಲ ಮಾರ್ಗವಾಗಿ ಮುಂಬೈನಿಂದ ಅಹಮದಾಬಾದ್‍ವರೆಗೆ ಬುಲೆಟ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಡಿ.2023ಕ್ಕೆ ಯೋಜನೆ ಮುಕ್ತಾಯದ ಗುರಿ ನಿಗದಡಿಪಡಿಸಲಾಗಿದ್ದರೂ, ಬುಲೆಟ್ ರೈಲು ಸಂಚಾರ ಪರೀಕ್ಷೆಯನ್ನು ಆ.2022ರಿಂದ ನಡೆಸಲು ಗುರಿ ಹಾಕಿಕೊಳ್ಳಲಾಗಿದೆ.
ಬ್ರಿಟೀಷರ ಕಾಲದ ಬಳಿಕ ರೈಲ್ವೆಯಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ, ಸಾಧನೆ ಮತ್ತು ಕ್ರಾಂತಿಯಾಗಿರಲೇ ಇಲ್ಲ. ಜಾಗತಿಕ ತಂತ್ರಜ್ಞಾನಕ್ಕೆ ಭಾರತೀಯ ರೈಲ್ವೆ ತೆರೆದುಕೊಳ್ಳುವ ಸಮಯ ಬಂದಿದೆ.
– ಪಿಯೂಷ್ ಗೋಯೆಲ್, ರೈಲ್ವೆ ಸಚಿವ
508 ಕಿ.ಮೀ ಕೇವಲ 2.07 ಗಂಟೆಯಲ್ಲಿ ಸಂಚಾರ!
ಪ್ರತಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸುವ ಬುಲೆಟ್ ರೈಲು ಮುಂಬೈ-ಅಹಮದಾಬಾದ್ ನಡುವಿನ ಅಂತರವನ್ನು ಕೇವಲ 2.07 ಗಂಟೆಯಲ್ಲಿ ಕ್ರಮಿಸಲಿದೆ. ಎಕ್ಸ್‍ಪ್ರೆಸ್ ರೈಲುಗಳು ಕೂಡ ಈ ಮಾರ್ಗವನ್ನು ಗರಿಷ್ಠ 7-8 ಗಂಟೆಯಲ್ಲಿ ಮಾತ್ರ ಕ್ರಮಿಸಲು ಸದ್ಯಕ್ಕೆ ಸಾಧ್ಯವಾಗುತ್ತಿದೆ.
ಯೋಜನೆ ವೆಚ್ಚ ರೂ. 108 ಸಾವಿರ ಕೋಟಿ !
ಈ ಯೋಜನೆಗೆ ಅಂದಾಜು ರೂ.108 ಸಾವಿರ ಕೋಟಿ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಶೇ.81ರಷ್ಟು ಹಣ ಸಾಲದ ರೂಪದಲ್ಲಿ ಜಪಾನ್ ಸರ್ಕಾರದ ವತಿಯಿಂದ 0.1% ಬಡ್ಡಿಗೆ ದೊರೆಯಲಿದೆ. ಮುಂದಿನ 50 ವರ್ಷಗಳಲ್ಲಿ ಭಾರತ ಈ ಸಾಲ ತೀರಿಸಬೇಕಿದೆ. ಯೋಜನೆ ಪೂರ್ಣಗೊಳ್ಳುವಷ್ಟರಲ್ಲಿ ವಡೋದರಾದಲ್ಲಿ ಸಿಬ್ಬಂದಿ ತರಬೇತಿ ಸಂಸ್ಥೆ ತೆರೆದು ಜಪಾನ್‍ನಿಂದ ನುರಿತ ತರಬೇತಿ ಕೊಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Leave A Reply