ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
Posted On October 9, 2018
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರಿಗೆ ಅರ್ಜೆಂಟಾಗಿ ಮಾಧ್ಯಮಗಳಲ್ಲಿ ಮಿಂಚಬೇಕು ಎಂದು ಅನಿಸಿದೆ. ಅದಕ್ಕೆ ಸುದ್ದಿಗೋಷ್ಟಿ ಕರೆದು ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿ ಖಾನೆಯನ್ನು ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಏನನ್ನೊ ಸಾಧಿಸಲು ಹೊರಟಿದ್ದೇವೆ ಎಂದು ಜನರಿಗೆ ತಿಳಿಸುವ ಅಗತ್ಯ ಅವರಿಗೆ ಇದ್ದಂತೆ ಕಾಣುತ್ತಿತ್ತು. ಎಲ್ಲಿಂದ ಹಣ ತರುತ್ತೀರಿ ಸಚಿವರೇ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಸ್ಮಾರ್ಟ್ ಸಿಟಿ ಫಂಡ್ ಇದೆಯಲ್ಲ ಎಂದಿದ್ದಾರೆ. ಈ ಮೂಲಕ ಸ್ಮಾರ್ಟ್ ಸಿಟಿ ಫಂಡ್ ಎಂದರೆ ತಮ್ಮ ಪ್ಯಾಂಟ್ ಕಿಸೆಯಲ್ಲಿರುವ ಪರ್ಸ್ ತರಹ ಯಾವಾಗ ಬೇಕಾದರೂ ಕೈ ಹಾಕಿ ಹಣ ತೆಗೆದು ಖರ್ಚು ಮಾಡಬಹುದು ಎಂದು ತೋರಿಸಿಕೊಡಲು ಹೋದಂತೆ ಮಾಡಿದ್ದಾರೆ. ಅದಕ್ಕೆ ಸರಿಯಾಗಿ ಸೋಮವಾರ ಸಂಜೆ ಸುದ್ದಿಗೋಷ್ಟಿ ಮಾಡಿ ನಮ್ಮ ಜಿಲ್ಲೆಯ ಶಾಸಕರಿಗೆ, ಸಂಸದರಿಗೆ ಅನುಭವದ ಕೊರತೆ ಇದೆ ಎಂದು ಗೊತ್ತಿತ್ತು. ಈಗ ಸಾಮಾನ್ಯ ಜ್ಞಾನದ ಕೊರತೆ ಕೂಡ ಇದೆ ಎಂದು ಗೊತ್ತಾಗಿದೆ ಎಂದು ಟಾಂಗ್ ಕೊಡಲು ಹೋಗಿದ್ದಾರೆ. ಅನುಭವ ಮತ್ತು ಸಾಮಾನ್ಯ ಜ್ಞಾನ ಯಾರಿಗೆ ಕಡಿಮೆ ಇದೆ ಎಂದು ಈಗ ವಿವರಿಸುತ್ತೇನೆ.
ಖಾದರ್ ಸುಳ್ಳಿನ ಕಂತೆ…
ಸ್ಮಾರ್ಟ್ ಸಿಟಿ ಫಂಡ್ ಎಂದರೆ ಅದು ಯಾವುದೇ ವ್ಯಕ್ತಿಯ ಮನೆಯ ತಿಜೋರಿ ಅಲ್ಲ. ಸ್ಮಾರ್ಟ್ ಸಿಟಿ ಯಾವ ನಗರಕ್ಕೆ ಒಲಿದಿದೆಯೋ ಅಲ್ಲೊಂದು ಸ್ಪೆಶಲ್ ಪರ್ಪಸ್ ವೆಹಿಕಲ್ ಎಂದು ರಚಿಸುತ್ತಾರೆ. ಅದರಲ್ಲಿ ಬೋರ್ಡ್ ಆಫ್ ಡೈರೆಕ್ಟರ್ ಇರುತ್ತಾರೆ. ಅದರಲ್ಲಿ ಆರು ಜನ ರಾಜ್ಯ ಸರಕಾರದ ಅಧೀನ ಬರುವ ಅಧಿಕಾರಿಗಳು, ಓರ್ವ ಕೇಂದ್ರ ಸರಕಾರದ ಅಧಿಕಾರಿ, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಮೇಯರ್, ಇಬ್ಬರು ಆಡಳಿತ ಪಕ್ಷದ ಸದಸ್ಯರು ಮತ್ತು ಓರ್ವರು ಪಾಲಿಕೆಯ ವಿಪಕ್ಷದ ನಾಯಕ ಇರುತ್ತಾರೆ. ಯಾವುದೇ ಅಭಿವೃದ್ಧಿ ಕಾಮಗಾರಿ ಈ ಬೋರ್ಡ್ ನಲ್ಲಿ ಇಟ್ಟು ನಂತರ ಅದು ಓಕೆ ಆದರೆ ವರದಿ ತಯಾರಿಸಿ ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಅದು ಕೇಂದ್ರ ಸರಕಾರಕ್ಕೆ ಹೋಗುತ್ತದೆ. ಅದು ಮಂಜೂರಾತಿ ಆದರೆ ನಂತರ ಅದು ಅನುಷ್ಟಾನಕ್ಕೆ ಬರುತ್ತದೆ. ಈ ಬೋರ್ಡ್ ನಲ್ಲಿ ಯಾವುದೇ ಸಚಿವ, ಶಾಸಕ, ಸಂಸದ ಇರುವುದಿಲ್ಲ. ಹಾಗಿದ್ದ ಮೇಲೆ ಖಾದರ್ ಸ್ಮಾರ್ಟ್ ಸಿಟಿಯ ಫಂಡ್ ನ 64 ಕೋಟಿಯಲ್ಲಿ ಕದ್ರಿ ಪಾರ್ಕ್ ರಸ್ತೆ ಮಾಡುತ್ತೇನೆ, ಇಂಟರ್ ನ್ಯಾಶನಲ್ ಬ್ಯಾಡ್ ಮಿಟನ್, ಕಬಡ್ಡಿ ಕೋರ್ಟ್ ಮಾಡುತ್ತೇನೆ, ಕಸಾಯಿ ಖಾನೆಗೆ ಹದಿನೈದು ಕೋಟಿ ಇಡುತ್ತೇನೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅದು ಅವರ ಕೈಯಲ್ಲಿ ಇಲ್ಲ. ಇದು ಗೊತ್ತಿದ್ದೋ, ಗೊತ್ತಿಲ್ಲದೆಯೋ ಖಾದರ್ ಸುದ್ದಿಗೋಷ್ಟಿ ಕರೆದು ತಮಟೆ ಬಾರಿಸಿದ್ದು ಅನುಭವದ ಕೊರತೆಯಾ ಅಥವಾ ಸಾಮಾನ್ಯ ಜ್ಞಾನದ ಕೊರತೆಯಾ ಎಂದು ಅವರೇ ಹೇಳಬೇಕು.
ಇನ್ನು ಎರಡನೇಯದಾಗಿ ಕಸಾಯಿಖಾನೆಗೆ ಹದಿನೈದು ಕೋಟಿ ರೂಪಾಯಿ ಇಡುವ ಬಗ್ಗೆ ಆಕ್ಷೇಪ ಇದ್ದರೆ ಬೋರ್ಡ್ ಆಫ್ ಡೈರೆಕ್ಟರ್ ಸಭೆಯಲ್ಲಿ ಪಾಲಿಕೆಯ ವಿಪಕ್ಷ ನಾಯಕರು ಹೇಳಬೇಕಿತ್ತು ಎಂದು ಖಾದರ್ ಭಾರತೀಯ ಜನತಾ ಪಾರ್ಟಿಯ ಮುಖಂಡರಿಗೆ ಟೀಕಿಸಿದ್ದಾರೆ. ಅವರು ಅಂದುಕೊಂಡಿರಬಹುದು, ಹೀಗೆ ಹೇಳಿದರೆ ಎಲ್ಲರೂ ಬಿಜೆಪಿದ್ದೇ ತಪ್ಪು ಎಂದು ಅಂದುಕೊಳ್ಳುತ್ತಾರೆ ಎಂದು ಯೋಚಿಸಿರಬಹುದು. ಆದರೆ ಯಾವಾಗ ಖಾದರ್ ಹೀಗೆ ಬಿಜೆಪಿಯ ಮೇಲೆ ತಪ್ಪು ಹಾಕಿದ ಹಾಗೆ ಮಾಡಿ ತಾವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದರೋ ತಕ್ಷಣ ಪಾಲಿಕೆಯಲ್ಲಿ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಮಂಗಳೂರಿನ ಸ್ಮಾರ್ಟ್ ಸಿಟಿ ಅನುಷ್ಟಾನದ ಮುಖ್ಯಸ್ಥರಾಗಿರುವ ಪೊನ್ನುರಾಜ್ ಅವರಿಗೆ ಪತ್ರ ಬರೆದು ಫ್ಯಾಕ್ಸ್ ಮಾಡಿದ್ದಾರೆ. ಬೋರ್ಡ್ ಆಫ್ ಡೈರೆಕ್ಟರ್ಸ್ ನ ಯಾವುದೇ ಸಭೆಯಲ್ಲಿ ಕಸಾಯಿಖಾನೆಗೆ ಹಣ ಇಡುವುದರ ಬಗ್ಗೆ ಯಾವುದೇ ಚರ್ಚೆಯಾಗದೇ ಇದ್ದಾಗ ಈಗ ಸಡನ್ನಾಗಿ ಸಚಿವ ಖಾದರ್ ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ಹೇಗೆ ಎಂದು ಕೇಳಿದ್ದಾರೆ. ಈ ಮೂಲಕ ಖಾದರ್ ಅವರು ದೊಡ್ಡ ಸುಳ್ಳೊಂದನ್ನು ತೇಲಿಸಿಬಿಟ್ಟಿರುವುದು ಸ್ಪಷ್ಟವಾಗಿದೆ.
ಹಂದಿ ಎಲ್ಲಿ ಕಟ್ ಮಾಡುತ್ತೀರಿ ಅಂದರೆ ಕೋಳಿ ವಿಷಯ ತೆಗೆಯುತ್ತಾರೆ…
ಇನ್ನು ಹೈಜೆನಿಕ್ ಫುಡ್ ಬೇಕಾದರೆ ಕುದ್ರೋಳಿ ಕಸಾಯಿಖಾನೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಖಾದರ್ ಪ್ರಶ್ನಿಸುತ್ತಿದ್ದಾರೆ. ಈಗ ಇಲ್ಲಿ ಕಸಾಯಿಖಾನೆ ಹೈಜೆನಿಕ್ ಮಾಡಿ ಅದನ್ನು ಅತ್ಯಂತ ಕೊಳಕಾಗಿರುವ ಸ್ಟಾಲ್ ಗಳಲ್ಲಿ ಮಾರಲು ಇಟ್ಟರೆ ಏನು ಪ್ರಯೋಜನ ಸಚಿವರೇ. ನೀವು ಅದಕ್ಕಿಂತ ಮೊದಲು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಜೂರಾಗಿರುವ ಸೆಂಟ್ರಲ್ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಿ. ಮಂಗಳೂರಿನಲ್ಲಿ ತರಕಾರಿ, ಹಣ್ಣುಹಂಪಲು ತೆಗೆದುಕೊಳ್ಳಲು ಬರುವ ಜನರಿಗೆ ಅಲ್ಲಿ ಕೆಸರಿನಲ್ಲಿ ಕಾಲಿಡುವುದಾ ಅಥವಾ ನೀರಿನಲ್ಲಿ ಕಾಲಿಡುವುದಾ ಎನ್ನುವ ಪ್ರಶ್ನೆ ಬರುವ ಹಾಗೆ ಮಾರುಕಟ್ಟೆ ಇದೆ. ಬಸ್ ನಿಲ್ದಾಣವನ್ನು ಕೇಳುವುದೇ ಬೇಡಾ. ಇನ್ನು ಮಾಂಸ ಮಾರುವ ಸ್ಟಾಲ್ ಗಳಲ್ಲಿ ನೀವು ಹೋದರೆ ಖರೀದಿಸುವುದೇ ಬೇಡಾ ಎಂದು ಅನಿಸುತ್ತದೆ. ಇಷ್ಟೆಲ್ಲ ಇರುವಾಗ ಖಾದರ್ ತಮ್ಮ ಒಣ ಪ್ರತಿಷ್ಟೆಗಾಗಿ ಸುಳ್ಳು ಹೇಳಿಕೊಂಡು ಕಸಾಯಿ ಖಾನೆ ಅಭಿವೃದ್ಧಿ ಮಾಡಲು ಪ್ರಚಾರಗಿಟ್ಟಿಸುವುದು ಬೇಕಾ?
ಒಂದಂತೂ ನಿಜ, ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಯಾವುದು ಅಭಿವೃದ್ಧಿ ಆಗಬೇಕೋ ಅದು ಆಗುತ್ತಿಲ್ಲ. ಇವರು 90 ಲಕ್ಷ ಖರ್ಚು ಮಾಡಿ ಕ್ಲಾಕ್ ಟವರ್ ಮಾಡುತ್ತಿದ್ದಾರೆ. ಟ್ರಾಫಿಕ್ ಅಡಚಣೆಯಿಂದ ಅಲ್ಲೊಂದು ಗೋಪುರ ಬೇಡಾ ಎಂದೇ ಹಿಂದಿನ ಜಿಲ್ಲಾಧಿಕಾರಿ ಭರತಲಾಲ್ ಮೀನಾ ಅದನ್ನು ತೆಗೆಸಿದ್ದರು. ಈಗ ಕೋಟಿ ಹತ್ತಿರ ಖರ್ಚು ಮಾಡಿ ಇವರು ಮತ್ತೆ ಕಟ್ಟಿಸುತ್ತಿದ್ದಾರೆ. ಸರಿಯಾಗಿರುವ ರಸ್ತೆಗಳನ್ನು ಅಗೆದು ಸ್ಮಾರ್ಟ್ ಮಾಡಿಸುತ್ತಿದ್ದಾರೆ. ಮಂಗಳೂರಿನ ಬಸ್ ಸ್ಟಾಂಡ್, ಮಾರುಕಟ್ಟೆಗಳು ಕಪ್ಪು ಚುಕ್ಕೆ ಇಟ್ಟಂತೆ ಇವೆ. ಖಾದರ್ ಕಸಾಯಿ ಖಾನೆಯ ಅಭಿವೃದ್ಧಿಯ ವಿಷಯ ಮಾತನಾಡುತ್ತಾರೆ. ಇತ್ತ ಕ್ರಿಶ್ಚಿಯನ್ನರು ತಮ್ಮ ಮುಖ್ಯ ಆಹಾರದಲ್ಲಿ ಒಂದಾಗಿರುವ ಹಂದಿಯನ್ನು ಎಲ್ಲಿ ಕತ್ತರಿಸಿ ಕೊಡುತ್ತೀರಿ ಎಂದು ಕೇಳಿದರೆ ಕಾಂಗ್ರೆಸ್ ಮುಖಂಡರ ಬಳಿ ಉತ್ತರ ಇಲ್ಲ. ಅದರ ನಡುವೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಖಾದರ್ ಕಸಾಯಿಖಾನೆಯಲ್ಲಿ ಕೋಳಿ ಕಟ್ ಮಾಡಲು ಒಳ್ಳೆಯ ವ್ಯವಸ್ಥೆ ಬೇಕಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಹಣವನ್ನು ಸರಿಯಾದವರ ಕೈಯಲ್ಲಿ ಕೊಡದಿದ್ದರೆ ನಾಳೆ ಖಾದರ್ ಆ ಹಣದಿಂದ ನಾಲ್ಕು ಶಾದಿ ಮಹಾಲ್ ಕಟ್ಟಿಸಿ ಕೊಡುತ್ತೇನೆ ಎಂದು ಹೇಳಿದರೂ ಆಶ್ಚರ್ಯ ಇಲ್ಲ!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply