ಮೋದಿ ತಾಯಿ ಬಗ್ಗೆ ನನಗೆ ಹೆಮ್ಮೆಯಿದೆ ಜಿಗ್ನೇಶ್
ಎಡಪಂಥೀಯರಿಗೆ ಮೋದಿ ಬಯ್ಯುವ ವ್ಯಾಧಿ. ದೇಶದಲ್ಲಿ ಏನೇ ಆಗಲಿ ಅದಕ್ಕೆ ಅವರು ಬಯ್ಯುವುದೇ ಮೋದಿಯನ್ನು. ಮೋದಿ ಅವರನ್ನು ಎಷ್ಟರಮಟ್ಟಿಗೆ ವ್ಯಾಪಿಸಿಕೊಂಡಿದ್ದಾರೆ, ಮೋದಿ ಪ್ರಭಾವದ ಬಗ್ಗೆ ಅವರೆಷ್ಟು ‘ಅಸೂಯೆ ಪಟ್ಟುಕೊಂಡಿದ್ದಾರೆ ಎಂಬುದನ್ನು ಅದು ತೋರಿಸುತ್ತದೆ. ಬಹುಶಃ ಮೋದಿ ಭಕ್ತರಿಗಿಂತ ಹೆಚ್ಚು ಎಡಪಂಥೀಯರು ಮೋದಿಯ ಬಗ್ಗೆ ಯೋಚಿಸುತ್ತಾರೆ. ಭಕ್ತರಿಗಿಂತ ಹೆಚ್ಚು ಮೋದಿಯ ಹೆಸರು ಜಪಿಸುತ್ತಾರೆ.
ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಸೆಪ್ಟೆಂಬರ್ ೧೨ರಂದು ನಡೆಸಲಾದ ಪ್ರತಿರೋಧ ರ್ಯಾಲಿಯಲ್ಲಿ ಆಗಿದ್ದೂ ಇದೇ. ಅಲ್ಲಿ ಗೌರಿಗಿಂತ ಹೆಚ್ಚಾಗಿ ಇವರೆಲ್ಲ ನೆನಪಿಸಿಕೊಂಡಿದ್ದು ಮೋದಿಯನ್ನು. ಎಡಬಿಡಂಗಿ ಬುದ್ಧಿಯ ಜಿಗ್ನೇಶ್ ಮೇವಾನಿ ಅತಿರೇಕಕ್ಕೆ ಹೋಗಿ, ಮೋದಿಯಂತಹ ಮಗನನ್ನು ಯಾಕೆ ಹೆತ್ತಿರಿ? ಎಂದು ಮೋದಿ ತಾಯಿಯನ್ನು ಪ್ರಶ್ನಿಸಬೇಕು. ಅವರೇ ಮೋದಿಯನ್ನು ಕರೆದು ಬುದ್ಧಿ ಹೇಳಬೇಕು ಎಂದಿದ್ದಾನೆ.
ಇವನಂತಹ ಬುದ್ಧಿಗೇಡಿ ಇನ್ನೊಬ್ಬ ಇರಲು ಸಾಧ್ಯಯವಿಲ್ಲ.
ಆದರೆ ಮೋದಿಯಂತಹ ಮಗನ ಹೆತ್ತಿದ್ದಕ್ಕೆ, ನನ್ನ ದೇಶಕ್ಕೊಬ್ಬ ಉತ್ತಮ ಪ್ರಧಾನಿಯಾಗುವ ವ್ಯಕ್ತಿಯನ್ನು ಹೆತ್ತಿದ್ದಕ್ಕೆ ಅವರ ತಾಯಿಯ ಬಗ್ಗೆ ನನಗೆ ಹೆಮ್ಮೆಯಿದೆ. ಮೋದಿ ಇಂದು ಅತ್ಯಂತ ಸಂಸ್ಕಾರಯುತ ವ್ಯಕ್ತಿಯಾಗಿದ್ದರೆ ಅದಕ್ಕೆ ಅವರ ತಾಯಿ ನೀಡಿದ ಸಂಸ್ಕಾರವೂ ಪ್ರಮುಖ ಕಾರಣ. ಮೋದಿ ಇಂದು ಒಬ್ಬ ದೇಶಪ್ರೇಮಿಯಾಗಿ ಬೆಳೆದಿದ್ದರೆ, ಬಾಲ್ಯದಲ್ಲಿ ತಾಯಿ ನೀಡಿದ ಶಿಕ್ಷಣವೇ ಅದಕ್ಕೆ ಕಾರಣ. ಮೋದಿ ಇಂದೊಬ್ಬ ಪ್ರಮಾಣಿಕ ಪ್ರಧಾನಿ ಅನ್ನಿಸಿಕೊಂಡಿದ್ದರೆ, ಅದರಲ್ಲೂ ಅವರ ತಾಯಿಯ ಗುಣಗಳ ಪ್ರಭಾವವಿದೆ.
ಮನೆಯೆ ಮೊದಲ ಪಾಠಶಾಲೆ ಅನ್ನುವುದಿಲ್ಲವೇ. ಚಿಕ್ಕಂದಿನಲ್ಲಿ ದೊರೆತ ಸಂಸ್ಕಾರವೇ ಇಂದಿನ ಮೋದಿಯಾಗಲು ಅಡಿಪಾಯ. ನಮ್ಮ ದೇಶಕ್ಕೆ ಇಷ್ಟು ಅತ್ಯುತ್ತಮ ಪ್ರಧಾನಿಯನ್ನು ಕೊಟ್ಟಿದ್ದಕ್ಕೆ ನನಗೆ ತಾಯಿಯ ಬಗ್ಗೆ ಹೆಮ್ಮೆಯಿದೆ. ದೃಢ ನಿಲುವಿನ, ಆರೋಗ್ಯವಂತ ಮೋದಿಯಾಗಲು ಅವರ ತಾಯಿಯೇ ಕಾರಣವಲ್ಲವೇ. ತಾಯಿಯ ಸತ್ವವೇ ಮಗನಲ್ಲಿ ಬರುವುದು.
ಮೋದಿಯಂತಹ ವ್ಯಕ್ತಿಯನ್ನು ಹೆತ್ತಿದ್ದಕ್ಕೆ ನನಗೆ ಖಂಡಿತ ಹೆಮ್ಮೆಯಿದೆ. ಅದಕ್ಕಾಗಿ ನಾನು ಆ ತಾಯಿಯ ಪಾದಕ್ಕೆರಗಲು ಬಯಸುತ್ತೇನೆ. ಬಹುಶಃ ನನ್ನಂತೆ ಕೋಟ್ಯಂತರ ಜನಕ್ಕೆ ಮೋದಿ ತಾಯಿ ಬಗ್ಗೆ ಹೆಮ್ಮೆಯಿದೆ. ಜಿಗ್ನೇಶ್‌ಗೆ ಅವರ ಬಗ್ಗೆ ಗೌರವ ಇಲ್ಲದಿದ್ದರೆ ಏನೇನೂ ನಷ್ಟವಿಲ್ಲ.
ಹಾಗೆಯೇ ಜಿಗ್ನೇಶ್‌ನಂತಹ ಬುದ್ಧಿಗೇಡಿ ಹಾಗೂ ದೇಶದ್ರೋಹಿ ಮಗನನ್ನು ಯಾಕೆ ಹೆತ್ತೆ ಎಂದು ಜಿಗ್ನೇಶ್ ತಾಯಿಯನ್ನು ಕೇಳಬಯಸುವುದಿಲ್ಲ. ಯಾಕೆಂದರೆ ನಾನು ಜಿಗ್ನೇಶ್‌ನಂತೆ ಇನ್ನೊಬ್ಬರ ತಾಯಿಯನ್ನು ಅವಮಾನಿಸುವುದಿಲ್ಲ. ನಾನು ಎಲ್ಲ ತಾಯಂದಿರನ್ನೂ ಗೌರವಿಸುತ್ತೇನೆ. ಯಾಕೆಂದರೆ ಯಾವ ತಾಯಿಯೂ ನನ್ನ ಮಗ ದೇಶದ್ರೋಹಿಯಾಗಲಿ, ಅಪ್ರಾಮಾಣಿಕನಾಗಲಿ, ತನ್ನ ದೇಶವನ್ನೇ ಅಗೌರವದಿಂದ ಕಾಣಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆರಳಿನಲ್ಲಿ ಇನ್ನೊಬ್ಬರ ಮನನೋಯಿಸಲಿ ಎಂದು ಬಯಸುವುದಿಲ್ಲ. ಎಲ್ಲ ತಾಯಿಗೂ ತನ್ನ ಮಕ್ಕಳು ಒಳ್ಳೆಯವರಾಗಲಿ ಎಂದೇ ಇರುತ್ತದೆ.
ಯಾರಿಗೆ ಗೊತ್ತು ಮುಂದೊಂದು ದಿನ ಜಿಗ್ನೇಶ್ ಹೀಗಾಗುತ್ತಾರೆಂದು ಅವರ ತಾಯಿಗೆ ಗೊತ್ತಿದ್ದರೆ ಆ ತಾಯಿ ಹೆರುತ್ತಲೇ ಇರಲಿಲ್ಲವೇನೊ. ಅಥವಾ ಹುಟ್ಟಿದಾಗಲೇ ಕತ್ತು ಹಿಸುಕುತ್ತಿದ್ದರೇನೊ. ಪಾಪ ಆ ತಾಯಿಗೇನು ಗೊತ್ತು ಜಿಗ್ನೇಶ್ ಭವಿಷ್ಯದಲ್ಲಿ ಹೀಗಾಗುತ್ತಾನೆಂದು. ಇಷ್ಟಕ್ಕೂ ಜಿಗ್ನೇಶ್‌ನ ಬುದ್ಧಿಗೇಡಿತನಕ್ಕೆ ಅವರ ತಾಯಿಯನ್ನು ದೂರಿ ಪ್ರಯೋಜನವಿಲ್ಲ. ಹಾಗಾಗಿ ಮೋದಿ ತಾಯಿಯನ್ನು ಕೇಳುವ ಮೊದಲು ಜಿಗ್ನೇಶ್ ತನ್ನ ತಾಯಿಯನ್ನು ಒಮ್ಮೆ ಕೇಳಲಿ. ಅಮ್ಮಾ ನಾನು ಮೋದಿ ತಾಯಿಯ ಬಗ್ಗೆ ಹೀಗೆ ಮಾತನಾಡಿದ್ದೇನೆ. ಇದಕ್ಕೆ ನಿನ್ನ ಸ್ಮತಿಯಿದೆಯೇ. ನಾನು ಮಾಡುತ್ತಿರುವುದು ಸರಿ ಎಂದು ನಿನಗೆ ಅನ್ನಿಸುತ್ತದೆಯೇ ಎಂದು.
ಹಾಗೆಯೇ, ಅಮ್ಮಾ ನಾನು ಈಗಿರುವ ಸ್ಥಿತಿ, ಮಾತನಾಡುತ್ತಿರುವ, ಪಾಲಿಸುತ್ತಿರುವ ಸಿದ್ಧಾಂತ ಇದೆಲ್ಲದರ ಬಗ್ಗೆ ನಿನಗೆ ಹಮ್ಮೆ ಇದೆಯೇ? ಸಮಾಧಾನ ಇದೆಯೇ? ಎಂದು ಪ್ರಶ್ನಿಸಲಿ. ಆ ನಂತರ ಮೋದಿ ತಾಯಿಯ ಬಳಿಗೆ ಹೋಗುವ ಮಾತನಾಡಲಿ.
ತನ್ನ ತಾಯಿಯನ್ನೇ ಕೇಳದವನಿಗೆ ಇನ್ನೊಬ್ಬರ ತಾಯಿಯನ್ನು ಕೇಳುವ ಹಕ್ಕೆಲ್ಲಿದೆ?
ತಾಯಿ ಕರೆದು ಒಂದು ಮಾತು ಹೇಳಿದರೆ ಮೋದಿ ಕೇಳಿಯಾರು. ಆದರೆ ಮಗನೇ ನೀನು ಹೇಳಿದ್ದು ಸರಿಯಿಲ್ಲ. ಮೋದಿ ತಾಯಿಯನ್ನು ಟೀಕಿಸಿದ್ದು ಸುತಾರಾಂ ಇಷ್ಟವಾಗಲಿಲ್ಲ. ನೀನು ದೇಶವನ್ನು ವಿನಾಶದತ್ತ ಕೊಂಡೊಯ್ಯುವ ಸಿದ್ಧಾಂತಕ್ಕೆ ಗಂಟುಬಿದ್ದು, ದ್ರೋಹವೆಸಗುತ್ತಿದ್ದೀಯಾ ಎಂದು ಜಿಗ್ನೇಶ್ ಮೇವಾನಿಯ ತಾಯಿಯೇ ಹೇಳಿದರೂ ಆತ ಕೇಳಲು ಸಿದ್ಧನಿದ್ದಾನಾ? ಖಂಡಿತ ಇಲ್ಲಾ. ಯಾಕೆಂದರೆ ಸ್ವಂತ ತಾಯಿಯನ್ನು ಗೌರವಿಸಿ ಗೊತ್ತಿರುವವನು ಇನ್ನೊಬ್ಬರ ತಾಯಿಯನ್ನು ದೂಷಿಸಲಾರ. ತನ್ನ ದೇಶಕ್ಕೆ ದ್ರೋಹ ಬಗೆಯಲಾರ.
ಜಿಗ್ನೇಶ್ ಮೇವಾನಿಯನ್ನು ನೋಡಿದರೆ ಹಾಗನ್ನಿಸುವುದಿಲ್ಲ.
ತಾಯಿ ಹೆಮ್ಮೆ ಪಡುವಂತಹ ಮಗನಾಗಿರುವ ಬಗ್ಗೆ ನನಗೆ ಮೋದಿಯ ಬಗ್ಗೆಯೂ ಗೌರವವಿದೆ. ಯಾಕೆಂದರೆ ತಾಯಿಗೆ, ತಾಯ್ನಾಡಿಗೆ ಹೆಮ್ಮೆಮೂಡಿಸುವ ವ್ಯಕ್ತಿಯಾಗಿ ಬೆಳೆಯುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಮೋದಿ ಇಷ್ಟು ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅಂತಹ ವ್ಯಕ್ತಿಯನ್ನು ಹೆತ್ತಿದ್ದಕ್ಕೆ ನಮಗೆ ಹೇಗೆ ಆ ತಾಯಿಯ ಬಗ್ಗೆ ಹೆಮ್ಮೆಯಿದೆಯೋ, ಮೋದಿಯಂತಹ ಮಗನನ್ನು ಹೆತ್ತಿದ್ದಕ್ಕೆ ಆ ತಾಯಿಗೂ ಹೆಮ್ಮೆಯಿದೆ.
Leave A Reply