ಆ ಕೈಗೆ ಲಕ್ವಾ ಹೊಡೆದದ್ದನ್ನು ಪ್ರಪಂಚ ನೋಡಬೇಕು!
ಹಿಂದೆ ಒಂದು ಕಾಲವಿತ್ತು. ಪ್ರೇಮಿಗಳು ತಾವು ಭೇಟಿಕೊಡುವ ಪ್ರವಾಸಿ ತಾಣಗಳ ಗೋಡೆಗಳ ಮೇಲೆ ತಮ್ಮ ಹೆಸರನ್ನು ಲವ್ ಮಾರ್ಕ್ ಬರೆದು ಬರುತ್ತಿದ್ದರು. ನಂತರ ಯಾರಾದರೂ ಅಲ್ಲಿ ಹೋದರೆ ಅದನ್ನು ನೋಡಿ ತಮ್ಮ ಹೆಸರು ಕೂಡ ಹಾಗೆ ಬರೆಯೋಣ ಎನ್ನುವ ಪ್ರೇರಣೆಯನ್ನು ಪಡೆಯುತ್ತಿದ್ದರು. ಅದು ಕಂಟಿನ್ಯೂ ಆಗುತ್ತಿತ್ತು. ನಮ್ಮ ರಾಜ್ಯದ ಅನೇಕ ಐತಿಹಾಸಿಕ ಸ್ಥಳಗಳ ಈ ಅ”ಮರ” ಪ್ರೇಮಿಗಳ ಹೆಸರು, ಪ್ರೀತಿ ಎದ್ದು ಕಾಣುತ್ತಿತ್ತು. ಅದೇ ಒಂದು ಅಸಹ್ಯ. ಆದರೆ ಆ ಅಸಹ್ಯ ಒಂದು ಹೆಜ್ಜೆ ಮುಂದೆ ಹೋಗಿ ಈಗ ನಮ್ಮ ದೈವ ದೇವತೆಗಳ ಮೂರ್ತಿಗಳ ಮೇಲೆ ಕುಚೇಷ್ಟೆ ಮಾಡುವ ಲೆವೆಲ್ಲಿಗೆ ಬಂದಿದೆ. ಬರಿ ಕುಚೇಷ್ಟೆ ಮಾತ್ರವಲ್ಲ, ಆ ಅಸಹ್ಯವನ್ನು ಫೋಟೋ ಕ್ಲಿಕ್ಕಿಸಿ ನಂತರ ಸಾಮಾಜಿಕ ತಾಣಗಳಲ್ಲಿ ಹಾಕುವ ಸಂಪ್ರದಾಯವೂ ಪ್ರಾರಂಭವಾಗಿದೆ. ಹಾಗೆ ಹಾಕುವ ಮೂಲಕ ಧರ್ಮಗಳ ನಡುವೆ ಕಂದಕ ದೊಡ್ಡದು ಮಾಡಿ ಅದರ ತಮಾಷೆಯನ್ನು ದೂರ ನಿಂತು ನೋಡುವ ಪ್ರಕ್ರಿಯೆ ಇದು. ಯಾವುದೋ ಒಬ್ಬ ಗಾಂಜಾ ಗಿರಾಕಿಗೆ ಗಾಂಜಾ ತಿನ್ನಿಸಿ ನಂತರ ಅವನಿಗೆ ದೇಯಿ ಬೈದೇತಿಯ ಎದೆಯ ಭಾಗವನ್ನು ಮುಟ್ಟಲು ಪ್ರೇರೆಪಿಸಿ ಫೋಟೋ ತೆಗೆದಿರುವ ಸಾಧ್ಯತೆ ಇದೆ. ಇಲ್ಲದೆ ಹೋದರೆ ಆತನಿಗೆ ತಾನು ಹೀಗೆ ಮಾಡುವುದರಿಂದ ತನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುವ ಭಂಡ ಧೈರ್ಯ ಇದ್ದಿರಬಹುದು.
ಹಿಂದೂಗಳಲ್ಲಿ ಕೋಟಿ ಚೆನ್ನಯ್ಯರಿಗೆ ವಿಶಿಷ್ಟ ಸ್ಥಾನವಿದೆ. ಅದರೊಂದಿಗೆ ದೇವಪೂಂಜಾ, ಕಾಂತಬಾರೆ-ಬೂದಬಾರೆ ಅವರನ್ನು ಆರಾಧಿಸುವ ದೊಡ್ಡ ಸಮೂಹವೇ ನಮ್ಮ ಸಂಸ್ಕೃತಿಯಲ್ಲಿ ಇದೆ. ಕೋಟಿ ಚೆನ್ನಯ್ಯರಿಗೆ ಜನ್ಮಕೊಟ್ಟು ತುಳುನಾಡಿಗೆ ಅಭಯ ಪ್ರಧಾನ ಮಾಡಿ ಧರ್ಮವನ್ನು ರಕ್ಷಿಸಲು ಭಗವಂತ ಆಗಾಗ ದೈವ-ದೇವತೆಗಳನ್ನು ಕಳುಹಿಸಿ ಇಲ್ಲಿ ಅಧರ್ಮ ತಲೆ ಎತ್ತದಂತೆ ಮಾಡುವ ದಂತಕಥೆಗಳು ನಮ್ಮಲ್ಲಿ ಇವೆ. ಹಾಗೆ ಕೋಟಿ ಚೆನ್ನಯ್ಯರಿಗೆ ಜನ್ಮ ನೀಡಿದ ಮಹಾತಾಯಿಯೇ ದೇಯಿ ಬೈದೇತಿ. ದೇಯಿ ಬೈದೇತಿ ಕೇವಲ ಕೋಟಿ ಚೆನ್ನಯ್ಯರಿಗೆ ಜನ್ಮ ಕೊಟ್ಟದ್ದು ಮಾತ್ರವಲ್ಲ ಆ ಮಹಾತಾಯಿಯೊಳಗೆ ಒಬ್ಬ ವಿಶಿಷ್ಟ ವೈದ್ಯನಿದ್ದ. ಆಕೆ ಔಷಧಗಳನ್ನು ನೀಡಿ ಆ ಕಾಲಕ್ಕೆ ಜನರ ರೋಗ ರುಜಿನಗಳನ್ನು ಪರಿಹರಿಸುತ್ತಿದ್ದರು ಎಂದು ಇತಿಹಾಸಕಾರರು ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ಕಂಕನಾಡಿಯ ಗರೋಡಿಯಲ್ಲಿ ಕೋಟಿ ಚೆನ್ನಯ್ಯರಿಗೆ, ದೇಯಿ ಬೈದೇತಿಗೆ ಪೂಜೆ ನಡೆಯುತ್ತದೆ.
ಅಂತಹ ದೇವಿಗೆ ಅವಮಾನ ಮಾಡುವುದು ಬಿಡಿ, ಅವಮಾನ ಮಾಡಲು ಯೋಚಿಸುವುದು ಕೂಡ ಮಹಾಪಾಪ. ಆದರೆ ಅದು ನಡೆದು ಹೋಗಿದೆ. ಪುತ್ತೂರಿನಿಂದ 22 ಕಿಮೀ ದೂರದ ಪಡುಮಲೆಗೆ ಹೋಗುವ ದಾರಿಯಲ್ಲಿ ದೇಯಿ ಬೈದೇತಿ ವನವೊಂದಿದೆ. ಅಲ್ಲಿ ಅನೇಕ ಅಪರೂಪದ ಗಿಡಮೂಲಿಕೆಗಳಿವೆ. ಹಾಗೆ ಅಲ್ಲಿರುವ ಸಸ್ಯ ಸಂಕುಲದಿಂದ ಆ ಪರಿಸರ ವಿಶಿಷ್ಟ ಸಕರಾತ್ಮಕ ಶಕ್ತಿಯಿಂದ ಶೋಭಿಸುತ್ತದೆ. ಆ ವನದಲ್ಲಿ ಆ ಕಾಲದಲ್ಲಿ ದೇಯಿ ಬೈದೇತಿಯ ಮನೆ, ಆಕೆ ಔಷಧ ಅರೆಯಲು ತಯಾರಾಗುತ್ತಿದ್ದ ರೀತಿ, ಕೋಟಿ ಚೆನ್ನಯ್ಯರು ಹೀಗೆ ಒಂದು ಕಾಲ್ಪನಿಕ ಸೃಷ್ಟಿ ಇದೆ. ಅಲ್ಲಿ ಇತ್ತೀಚೆಗೆ ಅಬ್ದುಲ್ ಹನೀಫ್ ಎನ್ನುವ ಅಸಹ್ಯ ಮನಸ್ಸಿನ ಕೆಟ್ಟ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಅಲ್ಲಿ ದೇಯಿ ಬೈದೇತಿಯ ಮೂರ್ತಿಯ ಎದೆಯ ಕಡೆ ಕೈ ಹಾಕಿ ಫೋಟೋ ತೆಗೆದಿದ್ದಾನೆ. ಫೋಟೋ ತೆಗೆದದ್ದು ಬೇರೆಯವರು ಇರಬಹುದು ಎನ್ನುವುದು ನಿರೀಕ್ಷೆ. ಸಮಾಧಾನದ ವಿಷಯ ಎಂದರೆ ಪೊಲೀಸರು ಈ ಬಾರಿ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನನ್ನ ಮನವಿ ಏನೆಂದರೆ ಆರೋಪಿ ಯಾರೇ ಆಗಿರಲಿ, ಅವನನ್ನು ಹಾಗೆ ಸುಮ್ಮನೆ ಬಿಡಬಾರದು. ಸೂಕ್ತರೀತಿಯಲ್ಲಿ ಶಿಕ್ಷೆಯಾಗುವಂತೆ ಇಲಾಖೆ ಪ್ರಯತ್ನಿಸಬೇಕು. ಅವನು ಮಾಡಿದ ಕರ್ಮವನ್ನು ಅವನು ಯಾವತ್ತಾದರೂ ತಿನ್ನಲು ಇದೆ. ಆದರೆ ಅದನ್ನು ಪ್ರಪಂಚ ನೋಡಬೇಕು. ಅಂದರೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕು. ಆಗ ಅವನಿಗೆ ಬಿಡಿ, ಅವನ ಒಟ್ಟಿಗೆ ಆವತ್ತು ಇದ್ದವರಿಗೆ ಬೆವರು ಹರಿಯಬೇಕು. ಅಷ್ಟೇ ಅಲ್ಲ ಹನೀಫ್ ನೊಂದಿಗೆ ಅವನ ಆಶ್ಲೀಲ ಭಂಗಿಯ ಫೋಟೊ ತೆಗೆದ ಯುವಕ ಕೂಡ ಸಮಾನ ದೋಷಿ. ಅವನಿಗೂ ಶಿಕ್ಷೆಯಾಗಲಿ. ಹಿಂದೂ ಸಂಘಟನೆಗಳು ಅಲ್ಲಿ ಶುದ್ಧಿ ಕಾರ್ಯ ಮಾಡಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಗೆ ಮನವಿ ಮಾಡಿ ಆರೋಪಿಗೆ ಸೂಕ್ತ ಶಿಕ್ಷೆಯಾಗಲು ಪ್ರಯತ್ನಿಸಬೇಕಾಗಿ ವಿನಂತಿಸಿದ್ದಾರೆ. ಇಂತಹ ಘಟನೆಗಳು ನಿಲ್ಲಬೇಕಾದರೆ ಒಂದೇ ದಾರಿ, ಆರೋಪಿಗೆ ಸೂಕ್ತ ಶಿಕ್ಷೆಯಾಗುವುದು ಏನು ಹೇಳುತ್ತೀರಿ!
Leave A Reply