ಸುಭಾಷರನ್ನು ಯುದ್ಧ ಅಪರಾಧಿ ಎಂದು ಚಿತ್ರಿಸಿದ ನೆಹರೂ ಭಾರತದ ಸ್ವಾಭಿಮಾನವನ್ನು ಅಡ ಇಟ್ಟರು- ರಾಜಶ್ರೀ
ರಾಜಶ್ರೀ ಚೌಧರಿ, ಸುಭಾಷ್ ಚಂದ್ರ ಬೋಸರ ಮರಿಮೊಮ್ಮೊಗಳು. ಆಕೆ ಕೊಲ್ಕತ್ತಾದಿಂದ ಬಂದು ಬೆಳಗಾವಿಯ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸುಭಾಷರ ವಿಷಯದಲ್ಲಿ ಸತ್ಯಗಳು ಒಂದೊಂದೇ ಹೊರಗೆ ಬರುತ್ತಿರುವುದರ ಕುರಿತು ಆಕೆಯಲ್ಲಿ ಸಮಾಧಾನವಿತ್ತು. ಎಲ್ಲದಕ್ಕಿಂತ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ದುರ್ಘಟನೆಯಲ್ಲಿ ಮೃತಪಟ್ಟಿಲ್ಲ ಎನ್ನುವ ವಾಸ್ತವ ನೇತಾಜಿಯ ಇಡೀ ಕುಟುಂಬಕ್ಕೆ ಗ್ಯಾರಂಟಿಯಾಗಿದೆ. ಆ ಕುರಿತು ರಾಜಶ್ರೀ ಚೌಧರಿ ಮಾತನಾಡಿದ್ದಾರೆ. ಅವರೊಂದಿಗೆ ತುಳುನಾಡು ನ್ಯೂಸ್ ಮಾಡಿದ ಸಂದರ್ಶನವನ್ನು ಸರಣಿಯಲ್ಲಿ ಪ್ರಕಟಿಸಲಾಗುವುದು.
ಪ್ರಶ್ನೆ: ಇಷ್ಟು ವರ್ಷಗಳ ಬಳಿಕವೂ ನೇತಾಜಿ ಸುಭಾಷ್ ಚಂದ್ರ ಬೋಸರ ಕುರಿತು ಜನರು ವ್ಯಕ್ತಪಡಿಸುವ ಭಾವನೆಗಳನ್ನು ನೋಡುವಾಗ ಏನು ಅನಿಸುತ್ತದೆ?
ರಾಜಶ್ರೀ ಚೌಧರಿ: ಇಲ್ಲಿನ ವಾತಾವರಣ ನೋಡಿ ತುಂಬಾ ಖುಷಿಯಾಯಿತು. ನೇತಾಜಿಯವರ ಉಪಸ್ಥಿತ, ವ್ಯಕ್ತಿತ್ವ, ಚರಿಷ್ಮಾ ಇವತ್ತಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ದೇಶಪ್ರೇಮ ಎನ್ನುವ ಬೆಂಕಿ ಸುಭಾಷರು. ನಾನು ಅವರ ಬಗ್ಗೆ ಮಾತನಾಡುವಾಗ ಇಡೀ ಸಭಾಂಗಣ ತದೇಕಚಿತ್ತದಿಂದ ಮಾತುಗಳನ್ನು ಕೇಳುತ್ತಿತ್ತು. ಜನ ಈಗಲೂ ನ್ಯಾಯ ಕೇಳುತ್ತಿದ್ದಾರೆ.
ತುಳುನಾಡು ನ್ಯೂಸ್: ನಿಮಗೆ ಈಗಿನ ಕೇಂದ್ರ ಸರಕಾರದಿಂದ ನ್ಯಾಯ ಸಿಗಬಹುದು ಎನ್ನುವ ನಿರೀಕ್ಷೆ ಹೆಚ್ಚಾದಂತೆ ಕಾಣುತ್ತದೆ?
ರಾಜಶ್ರೀ ಚೌಧರಿ: ಹೌದು, ಈ ಬಾರಿ ನ್ಯಾಯ ಸಿಕ್ಕೆ ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ಇದೆ. ಜನರ ಒತ್ತಡ ಹೆಚ್ಚಾಗುತ್ತಿದ್ದಂತೆ ಯಾವುದೇ ಸರಕಾರವೇ ಇರಲಿ, ಉತ್ತರ ಕೊಡಲೇಬೇಕಾಗುತ್ತದೆ.
ತುಳುನಾಡು ನ್ಯೂಸ್: ನೇತಾಜಿ ಕುಟುಂಬ ಇಷ್ಟು ಧೀರ್ಘ ಕಾಲ ಮೌನವಾಗಿದ್ದಂತೆ ಕಾಣುತ್ತಿದ್ದದ್ದು ಈಗ ಅಚಾನಕ್ ಆಗಿ ನ್ಯಾಯ ಬೇಗ ಸಿಗಬೇಕು ಎಂದು ಅಪೇಕ್ಷಿಸುತ್ತಿರುವುದು ಯಾಕೆ ಎಂದು ಕೇಳಬಹುದಾ?
ರಾಜಶ್ರೀ ಚೌಧರಿ: ಇಲ್ಲ, ನಮ್ಮ ಕುಟುಂಬದವರು ಇದೇ ಮೊದಲಲ್ಲ. ಹಲವು ವರ್ಷಗಳಿಂದ ಒತ್ತಡ ಹಾಕುತ್ತಿದ್ದೇವೆ. ನಾವು ಮಾತ್ರವಲ್ಲ, ಸಾಹಿತಿಗಳು, ಸಂಶೋಧಕರು ಒತ್ತಡ ಹಾಕಿ ನ್ಯಾಯ ಕೇಳಿದ್ದಾರೆ.
ತುಳುನಾಡು ನ್ಯೂಸ್: ಈಗ ನೇತಾಜಿಯವರ ಕಣ್ಮರೆಯ ಕುರಿತಾದ ಕಡತಗಳನ್ನು ನಿಮ್ಮ ಎದುರೇ ವರ್ಗೀಕರಣ ಮಾಡಿದ್ದಾರೆ. ನಿಮಗೆ ಅದರಿಂದ ಏನಾದರೂ ಸಂಗತಿಗಳು ಗೊತ್ತಾಗಿದೆಯಾ?
ರಾಜಶ್ರೀ ಚೌಧರಿ: ಆವತ್ತಿನ ಕಡತಗಳು ಏನು ಹೇಳುತ್ತವೆ ಎಂದರೆ ವಿಮಾನ ದುರ್ಘಟನೆ ಎನ್ನುವುದೇ ಒಂದು ಕಟ್ಟುಕಥೆ. ನಮ್ಮ ದೇಶದ ಪ್ರಥಮ ರಾಷ್ಟ್ರಪ್ರಧಾನ್ ಆಗಿರುವ ನೇತಾಜಿಯವರು ವಿಮಾನ ಅಪಘಾತದಲ್ಲಿ ಮೃತಪಟ್ಟರು ಎನ್ನುವ ಸುಳ್ಳು ಸುದ್ದಿಯನ್ನು ಎಲ್ಲಾ ಕಡೆ ಹಬ್ಬಿಸಿದ್ದು ನೆಹರೂ. ವಿಮಾನ ಅಪಘಾತದಲ್ಲಿ ಸುಭಾಷರು ಮೃತಪಟ್ಟಿಲ್ಲ ಎಂದಾಗಿದ್ದರೆ ಇಲ್ಲಿ ತನಕ ದೇಶವನ್ನು ಕಾಂಗ್ರೆಸ್ ತಪ್ಪು ದಾರಿಗೆ ತೆಗೆದುಕೊಂಡು ಹೋದದ್ದೇಕೆ? ನೆಹರೂ ನೇತಾಜಿಯನ್ನು ಯುದ್ಧ ಅಪರಾಧಿ ಎಂದು ಘೋಷಿಸಲು ಸಂಚು ಮಾಡಿದ್ದರು ಎಂದು ಜಗಜಾಹೀರವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡುವ ಒಪ್ಪಂದವಾದಾಗ ಆವತ್ತಿನ ಹಸ್ತಾಂತರ ಕಡತಗಳ ಪುಟ ಸಂಖ್ಯೆ 138, 139, 140 ರಲ್ಲಿ ನೇತಾಜಿಯನ್ನು ಯುದ್ಧ ಅಪರಾಧಿ ಎಂದು ಘೋಷಿಸಿದ್ದು, ಅವರ ವಿಚಾರಣೆ ಆಗಬೇಕಾದ ಸ್ಥಳ, ಶಿಕ್ಷೆಯ ಕುರಿತಾಗಿ ಭಾರತ ಒಪ್ಪಿದ ಸಮಗ್ರ ಮಾಹಿತಿಗಳಿವೆ. ನೆಹರೂ ನಮ್ಮ ದೇಶದ ಅಪ್ರತಿಮ ಸೇನಾನಿಯೊಬ್ಬನ ವ್ಯಕ್ತಿತ್ವವನ್ನು ಯುದ್ಧ ಅಪರಾಧಿಯ ಮಟ್ಟಕ್ಕೆ ನಿಲ್ಲಿಸಿ ಬ್ರಿಟಿಷರ ಎದುರು ನಮ್ಮ ದೇಶದ ಸ್ವಾಭಿಮಾನವನ್ನು ಅಡ ಇಟ್ಟರು.
– ಮುಂದುವರೆಯುತ್ತದೆ
Leave A Reply