ಮಾಯಾ ಕೊಡ್ನಾನಿ ನರೋಡಾದಲ್ಲಿರಲಿಲ್ಲ : ಷಾ ಸಾಕ್ಷ್ಯ
ಸೂರತ್ : ಗುಜರಾತ್ ಮಾಜಿ ಸಚಿವೆ ಹಾಗೂ ನರೋಡಾ ಗಾಮ್ ಘರ್ಷಣೆ ಪ್ರಕರಣದ ಪ್ರಮುಖ ಆರೋಪಿ ಮಾಯಾ ಕೊಡ್ನಾನಿ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಕ್ಷಿ ಹೇಳಿದ್ದಾರೆ. ಅಹಮದಾಬಾದ್‍ನ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಡಿಫೆನ್ಸ್ ಸಾಕ್ಷಿಯಾಗಿ ಅವರು ಹಾಜರಾದರು. ಘರ್ಷಣೆ ನಡೆದ ಫೆ.28, 2002ರಂದು ನಾನು ಮಾಯಾ ಅವರನ್ನು ಗುಜರಾತ್ ವಿಧಾನಸಭೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೆ. ಅವರು ನರೋಡಾ ಗಾಮ್‍ನಲ್ಲಿ ಇರಲಿಲ್ಲ ಎಂದ ಷಾ ಕೋರ್ಟ್‍ಗೆ ತಿಳಿಸಿದ್ದಾರೆ. 40 ನಿಮಿಷಗಳ ಕೋರ್ಟ್ ವಿಚಾರಣೆಯಲ್ಲಿ ಅವರು ಭಾಗವಹಿಸಿದ್ದರು.
ಪ್ರಕರಣ?
2002ರಲ್ಲಿ ನರೋಡಾ ಗಾಮ್‍ನಲ್ಲಿ ಕೋಮುವಾದ ಘರ್ಷಣೆಯಲ್ಲಿ 11 ಮುಸ್ಲಿಮರನ್ನು ಹತ್ಯೆಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವೆ ಮಾಯಾ ಸೇರಿದಂತೆ 82 ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿತ್ತು. ನರೋಡಾ ಪಟಿಯಾದಲ್ಲಿಯೂ ನಡೆ ಘರ್ಷಣೆಗೆ ಸಂಬಂಧಿಸಿದಂತೆ ಮಾಯಾ ಅಪರಾಧಿ ಎಂದು ಈಗಾಗಲೇ ಕೋರ್ಟ್ ತೀರ್ಪು ನೀಡಿದೆ. ಇಲ್ಲಿ 97 ಮುಸ್ಲಿಮರು ಸತ್ತಿದ್ದರು, ಮಾಯಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
Leave A Reply