ರೋಹಿಂಗ್ಯಾ ಹೊರಹಾಕದಿದ್ದರೆ ದೇಶಕ್ಕೆ ಅಪಾಯ ಗ್ಯಾರೆಂಟಿ
Posted On September 19, 2017

ನವದೆಹಲಿ : ಅಕ್ರಮವಾಗಿ ದೇಶದೊಳಗೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರಿಂದ ರಾಷ್ಟ್ರೀಯ ಭದ್ರತೆಗೆ ಸವಾಲು ಎದುರಿಸುವಂತಾಗಿದೆ ಎಂದು ಸುಪ್ರೀಂಕೋರ್ಟ್‍ಗೆ ಕೇಂದ್ರ ಸರ್ಕಾರ ಸೋಮವಾರ ಅಫಿಡವಿಟ್ ಸಲ್ಲಿಸಿದೆ. ಪಾಕ್ ಪೋಷಿತ ಉಗ್ರ ಸಂಘಟನೆಗಳೊಂದಿಗೆ ಈಗಾಗಲೇ ವಲಸಿಗ ರೋಹಿಂಗ್ಯಾ ಮುಸ್ಲಿಮರು ನಂಟು ಹೊಂದಿದ್ದಾರೆ. ಮುಂದೆಯೂ ಅವರಿಗೆ ಯಾವುದೇ ಪರಿಶೀಲನೆ ರಹಿತ ಆಶ್ರಯ ಕಲ್ಪಿಸಿದರೆ ದೊಡ್ಡ ಅಪಾಯ ಕಾದಿದೆ ಎಂದು 15 ಪುಟಗಳ ವರದಿಯನ್ನು ಗೃಹ ಸಚಿವಾಲಯ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪೀಠದಲ್ಲಿದ್ದರು. ಮ್ಯಾನ್ಮಾರ್‍ನಲ್ಲಿ ಬೌದ್ಧರು ಕಂಡಕಂಡಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಕೊಚ್ಚುತ್ತಿರುವ ಬೆನ್ನಲ್ಲೇ ಗುಳೆಹೊರಟು ಬಾಂಗ್ಲಾದೇಶ ಮತ್ತು ಭಾರತದಲ್ಲಿ ಅಕ್ರಮವಾಗಿ ನುಸುಳಿ ಆಶ್ರಯ ಪಡೆದಿದ್ದಾರೆ. ಇವರನ್ನು ಗಡಿಪಾರು ಮಾಡದಂತೆ ವಿಶ್ವಸಂಸ್ಥೆ ಕೂಡ ಸೂಚಿಸಿತ್ತು. ಆದರೆ ಭಾರತ ಇದಕ್ಕೆ ಒಪ್ಪಿರಲಿಲ್ಲ. ಅ.3ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.
ಏನಿದೆ ವರದಿಯಲ್ಲಿ ವಿವರಣೆ ?
>> ಯುಪಿಎ -2 ಅವಧಿಯಲ್ಲಿ ರೋಹಿಂಗ್ಯಾ ಮುಸ್ಲಿಮರ ಅಕ್ರ,ಮ ನುಸುಳುವಿಕೆ ಆರಂಭವಾಯಿತು.
>> ಏಜೆಂಟರ ಮೂಲಕ ಪಶ್ಚಿಮ ಬಂಗಾಳದ ಗಡಿ ಭಾಗ ಹರಿದಾಸಪುರ, ಹಿಲಿ ಮತ್ತು ತ್ರಿಪುರಾದ ಸೊನಾಮುರಾದಿಂದ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾ ಮುಸ್ಲಿಮರು ದೇಶದೊಳಕ್ಕೆ ನುಸುಳಿದ್ದಾರೆ.
>> ದೇಶದ ನಾಗರಿಕರ ಮೂಲಭೂತ ಮಾನವ ಹಕ್ಕಿನ ಮೇಲೆ ವಿದೇಶಿ ವಲಸಿಗರ ಅಕ್ರಮ ನುಸುಳುವಿಕೆಯಿಂದ ಕೆಟ್ಟ ಪರಿಣಾಮ.
>> ನಕಲಿ ಆಧಾರ್, ಪಾನ್ ಕಾರ್ಡ್‍ಗಳನ್ನು ರೋಹಿಂಗ್ಯಾ ಮುಸ್ಲಿಮರು ಪಡೆದುಕೊಂಡಿದ್ದಾರೆ.
>> ಐಎಸ್‍ಐ ಮತ್ತು ಐಸಿಸ್ ಜೊತೆಗೆ ನಿರಂತರ ಸಂಪರ್ಕಿದಲ್ಲಿದ್ದಾರೆ. ಜಮ್ಮು, ದಎಹಲಿ, ಹೈದರಾಬಾದ್, ಮೇವಾತ್‍ನಲ್ಲಿ ಸಕ್ರಿಯರಾಗಿದ್ದಾರೆ.
>> ರೋಹಿಂಗ್ಯಾಗೆ ಆಶ್ರಯ ನೀಡಿದರೆ ಈಶಾನ್ಯದಲ್ಲಿನ ಬೌದ್ಧರು ಸಿಡಿದೇಳಬಹುದು.
- Advertisement -
Leave A Reply