ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
ಮಂಗಳೂರು: ದುಬೈ ಹಾರಲು ವಿಮಾನಿಲ್ದಾಣದಲ್ಲಿ ತಪಾಸಣೆ ಕೌಂಟರ್‍ನಲ್ಲಿದ್ದ ವ್ಯಕ್ತಿಯೊಬ್ಬನ ಲಗ್ಗೇಜ್‍ನಲ್ಲಿ ಅನುಮಾನಾಸ್ಪದ ಬಾಂಬ್ ಪತ್ತೆಯಾಗಿದೆ. ಪವರ್ ಬ್ಯಾಂಕ್ / ಮೊಬೈಲ್ ಕವರ್ ಒಳಗೆ ವೈರ್‍ಗಳಿಂದ ಹೆಣೆದ ಸ್ಪೋಟಕದ ಮಾದರಿ ಸಾಧನ ಎಂದು ಪೊಲೀಸರು ತಿಳಿಸಿದ್ದಾರೆ. ಶ್ವಾನ ದಳ ತಪಾಸಣೆ ನಡೆಸಿ ರಾಸಾಯನಿಕ ಅಥವಾ ಸ್ಫೋಟಕ ಸಾಧನ ಇರಬಹುದು ಎಂದಿದೆ. ಇಂಡಿಗೋ ವಿಮಾನದಲ್ಲಿ ಮಂಗಳವಾರ ರಾತ್ರಿ 10ಕ್ಕೆ ಎಂ.ಮೊಹಮ್ಮದ್ ಎಂಬ ವ್ಯಕ್ತಿ ದುಬೈಗೆ ಹೊರಟಾಗ ಆತನ ಲಗ್ಗೇಜ್‍ನಲ್ಲಿ ಸ್ಫೋಟಕದ ಮಾದರಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.
ನಾಗರಿಕ ವಿಮಾನ ನಿಲ್ದಾಣಗಳ ತಪಾಸಣೆ ಉಸ್ತುವಾರಿ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ನಡೆಸಿದ ಸ್ಫೋಟಕ ತನಿಖಾ ಪರೀಕ್ಷೆಯಲ್ಲಿ ನೆಗಟೀವ್ ಎಂದು ವರದಿ ಬಂದಿದೆ. ಆದರೂ ನಾಗರಿಕ ವಿಮಾನಯಾನ ರಕ್ಷಣೆ ಸಂಸ್ಥೆ (ಬಿಸಿಎಎಸ್)ಗೆ ವರದಿ ಸಲ್ಲಿಸಲಾಗಿದ್ದು, ವಸ್ತುವಿನ ಕೂಲಂಕಷ ಪರೀಕ್ಷೆಗೆ ಇಂಡಿಗೋದಿಂದ ದೂರು ದಾಖಲಿಸಲು ಸೂಚಿಸಲಾಗಿದೆ.
ಕೇಂದ್ರದಿಂದ ರಾಸಾಯನಿಕ ದಾಳಿಯ ಎಚ್ಚರ ಇತ್ತು
ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಮೊದಲೇ ದೇಶದಲ್ಲಿ ಉಗ್ರರು ರಾಸಾಯನಿಕ ದಾಳಿಯ ಸಂಚು ರೂಪಿಸಿದ್ದಾರೆ ಎಂದು ಎಚ್ಚರಿಸಿತ್ತು.
Leave A Reply