ಕನೆಕ್ಷನ್ ಬಳಕೆ ಶುಲ್ಕಕ್ಕೆ ಟ್ರಾಯ್ ಕತ್ತರಿ, ಮೊಬೈಲ್ ಬಿಲ್‍ಗಳು ಅಗ್ಗ
ನವದೆಹಲಿ : ಇದುವರೆಗೂ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿಹಾಕುತ್ತಿದ್ದ ಕರೆ ಸಂಪರ್ಕ ಬಳಕೆ ಶುಲ್ಕ (ಐಯುಸಿ) ವನ್ನು 14 ಪೈಸೆಯಿಂದ 6 ಪೈಸೆಗೆ ಇಳಕೆಮಾಡಲಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಗ್ರಾಹಕರ ಪರವಾಗಿ ಈ ನಿರ್ಧಾರ ತೆಗದುಕೊಂಡು ಮಂಗಳವಾರ ಪ್ರಕಟಿಸಿದೆ.
ಪರಿಣಾಮ ಪ್ರೀಪೇಯ್ಡ್ ಮತ್ತು ಪೋಸ್ಟ್‍ಪೇಯ್ಡ್ ಗ್ರಾಹಕರಿಗೆ ಕರೆ ಶುಲ್ಕ ಇಳಿಕೆಯಾಗಿ ಜೇಬಿಗೆ ಕತ್ತರಿ ಬೀಳುವುದು ಕಡಿಮೆಯಾಗಲಿದೆ.
ಅ.1ರಿಂದ ನೂತನ ಶುಲ್ಕ ಜಾರಿಯಾಗಲಿದೆ.
ಮತ್ತೆ ಜ.1, 2020ರಿಂದ ಕರೆ ಮುಕ್ತಾಯ ಶುಲ್ಕವನ್ನು ಸಂಪೂರ್ಣ ರದ್ದು ಮಾಡುವಂತೆಯೂ ಟ್ರಾಯ್ ಹೇಳಿದೆ. ಇದು ಕೇವಲ ದೇಶೀಯ ಸಿಮ್ ಬಳಕೆದಾರರಿಗೆ ಮಾತ್ರ.
ಬೇರೆ ನೆಟ್‍ವರ್ಕ್‍ಗಳಿಂದ ಒಳಬರುವ ಕರೆಗಳಿಗೆ ಮೊಬೈಲ್ ಕಂಪೆನಿಗಳು ಸಂಪರ್ಖ ಬಳಕೆ ಶುಲ್ಕ ವಿಧಿಸುತ್ತವೆ.
ಏರ್‍ಟೆಲ್ ಐಯುಸಿ ಶುಲ್ಕವನ್ನು ಏರಿಕೆ ಮಾಡುವಂತೆ ಬೇಡಿಕೆಯಿಟ್ಟರೆ, ಜಿಯೊ ಈಗ ನಿಗದಿಯಾಗಿರುವ 6 ಪೈಸೆಯನ್ನೂ ಕಿತ್ತೊಗೆಯಿರಿ ಎಂದು ಟ್ರಾಯ್‍ಗೆ ಒತ್ತಾಯಿಸಿತ್ತು ಎಂದು ಮೂಲಗಳು ತಿಳಿಸಿವೆ. ಕೇವಲ ಐಯುಸಿ ಒಂದರಿಂದಲೇ ಮೊಬೈಲ್ ಕಂಪೆನಿಗಳು ವಾರ್ಷಿಕ ರೂ. 1 ಲಕ್ಷ ಕೋಟಿ ದೋಚುತ್ತಿವೆ ಎಂದು ರಿಲಯನ್ಸ್ ಟ್ರಾಯ್‍ಗೆ ವರದಿ ಸಲ್ಲಿಸಿತ್ತಂತೆ.
Leave A Reply