ಯೋಧರಿಗೆ ದೀಪಾವಳಿ ಉಡುಗೊರೆ, ಕುಟುಂಬದೊಂದಿಗೆ ಮಾತನಾಡಲು ರೂ.1/ನಿಮಿಷಕ್ಕೆ!
Posted On October 19, 2017

>> ಇದುವರೆಗೂ ರೂ.5/ನಿಮಿಷಕ್ಕಿದ್ದ ದರ ಇಳಿಕೆ
>> ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಮಾತನಾಡಿದ ಸಂತೃಪ್ತಿ ದೇಶ ಕಾಯೋ ಸಿಪಾಯಿಗೆ
ನ್ಯೂಡೆಲ್ಲಿ : ಸಶಸ್ತ್ರ ಮೀಸಲು ಪಡೆ ಮತ್ತು ಅರೆಸೈನಿಕ ಪಡೆ ಯೋಧರು ತಮ್ಮಕುಟುಂಬದೊಂದಿಗೆ ಮಾತನಾಡಲು ಹಿಮಾಲಯದ ಕೊರೆಯುವ ಚಳಿಯ ನಿರ್ಜನ ಗಡಿಯಲ್ಲಿ ಸೇವಯಲ್ಲಿರುವಾಗ ಬಳಸುವ ಸ್ಯಾಟೆಲೈಟ್ ಫೋನ್ ಕರೆಗಳಿಗೆ ಕೇವಲ ರೂ.1 / ನಿಮಿಷಕ್ಕೆ ಪಾವತಿಸಿದರೆ ಸಾಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಗುರುವಾರದಿಂದ ಅನ್ವಯವಾಗುವ ಈ ನೂತನ ದರಗಳು ಕುಟುಂಸ್ಥರೊಂದಿಗೆ ಹೆಚ್ಚು ಸನಯ ಮಾತನಾಡಲು ಯೋಧರಿಗೆ ಸಹಾಯವಾಗುತ್ತದೆ ಎಂದು ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಜತೆಗೆ ಮಾಸಿಕ ಬಾಡಿಗೆಯೆಂದು ಯೋಧರ ವೇತನದಿಂದ ಕಡಿತಮಾಡುತ್ತಿದ್ದ ರೂ.500ಕ್ಕೆ ವಿನಾಯಿತಿ ನೀಡಲಾಗಿದೆ. ಬಾಡಿಗೆ ರಹಿತ ಸೇವೆ ಯೋಧರಿಗೆ ಲಭ್ಯವಿದೆ.
ಇದುವರೆಗೂ ಪ್ರತಿ ನಿಮಿಷಕ್ಕೆ ರೂ.5 ಪಾವತಿಸಲಾಗುತ್ತಿತ್ತು. ಟಾಟಾ ಕಮ್ಯೂನಿಕೇಷನ್ಸ್ ಇದುವರೆಗೂ ಸೇವೆ ಒದಗಿಸುತ್ತಿತ್ತು. ಇನ್ಮುಂದೆ ಬಿಎಸ್‍ಎನ್‍ಎಲ್ ಸೇವೆ ಮುಂದುವರಿಸಲಿದೆ. 5 ಸಾವಿರ ಸ್ಯಾಟಲೈಟ್ ಫೋನ್ ಸಂಪರ್ಕಗಳನ್ನು ಒದಗಿಸಲು ಸಿದ್ಧವಿರುವುದಾಗಿ ಬಿಎಸ್‍ಎನ್‍ಎಲ್ ಸೇನೆಗೆ ಪ್ರಸ್ತಾವನೆ ಸಲ್ಲಿಸಿದೆ.
- Advertisement -
Leave A Reply