ಕಾಶ್ಮೀರ ಭಾರತ-ಪಾಕಿಸ್ತಾನದ ಮಾತುಕತೆಗೆ ಬಿಟ್ಟದ್ದು, ತಲೆ ಹಾಕಲ್ಲ: ಚೀನಾ
>> ಪಾಕ್ ಕೈಗೊಂಬೆಯಂತೆ ವರ್ತಿಸಿದ ಒಐಸಿಗೆ ಮುಖಭಂಗ
>> ಜಾಗತಿಕವಾಗಿ ಪಾಕಿಸ್ತಾನ ಮರ್ಯಾದೆ ಹರಾಜು
ಬೀಜಿಂಗ್ : ಕಾಶ್ಮೀರ ಸಮಸ್ಯೆ ಭಾರತ ಮತ್ತು ಪಾಕಿಸ್ತಾನಗಳ ಇತಿಹಾಸಕ್ಕೆ ನಂಟು ಹೊಂದಿರುವಂಥದ್ದು. ಹಾಗಾಗಿ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಉಭಯ ದೇಶಗಳೇ ಪರಿಹರಿಸಕೊಳ್ಳಬೇಕು ಎಂದು ಚೀನಾ ತನ್ನ ಹಸತಕ್ಷೇಪ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಆಗ್ರಹಿಸಲು ಚೀನಾ ಬೆಂಬಲ ಕೋರಿದ್ದಕ್ಕೆ ಹಿಂದೇಟು ಹಾಕುವ ಮೂಲಕ ಚೀನಾ ಪಾಕಿಸ್ತಾನವನ್ನು ಜಾಗತಿಕವಾಗಿ ಒಬ್ಬಂಟಿಯಾಗಿಸಿದೆ.
ಚೀನಾ ವಿದೇಶಾಂಗ ವಕ್ತಾರ ಲು ಕ್ಯಾಂಗ್ ” ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಯನ್ನು ಗಮನದಲ್ಲಿರಿಸಿ ಪಾಕಿಸ್ತಾನ ಇನ್ನೂ ಹೆಚ್ಚು ಮಾತುಕತೆಗೆ ಭಾರತದತ್ತ ಹಸ್ತ ಚಾಚಬೇಕಿದೆ” ಎಂದಿದ್ದಾರೆ.
ನ್ಯೂಯಾರ್ಕ್‍ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ರಾಜತಾಂತ್ರಿಕ ಒಪ್ಪಂದಗಳಲ್ಲಿ ಭಾರತ ತಲ್ಲೀನವಾಗಿದ್ದರೆ, ಪಾಕಿಸ್ತಾನ ಪ್ರಧಾನಿ ಮಾತ್ರ ಕಾಶ್ಮೀರ ಮಂತ್ರ ಜಪ ಮಾಡುತ್ತಾ ಭಾರತವನ್ನು ಹಳಿಯುವುದರಲ್ಲಿಯೇ ನಿರತರಾಗಿದ್ದಾರೆ. ವಿಶ್ವಸಂಸ್ಥೆ ಕಾಶ್ಮೀರದಲ್ಲಿ ವೀಕ್ಷಕರನ್ನು ನೇಮಿಸಿ ಭದ್ರತಾ ಮಂಡಳಿಯಿಂದ ನಿಗಾ ಇರಿಸಬೇಕು. ಅಲ್ಲಿ ಭಾರತ ಮಾನವ ಹಕ್ಕು ಉಲ್ಲಂಘಿಸಿದೆ ಎಂದು ಪಾಕ್ ಪ್ರಧಾನಿ ಶಾಹಿದ್ ಖಕ್ವಾನ್ ಅಬ್ಬಾಸಿ ಗುರುವಾರ ಹೇಳಿದ್ದರು. ಇದರ ಬೆನ್ನಲ್ಲೇ 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಐಒಸಿ ಕೂಡ ಚೀನಾಕ್ಕೆ ಬೆಂಬಲ ಕೋರಿತ್ತು. ಇದನ್ನು ಚೀನಾ ನಿರಾಕರಿಸಿರುವುದರಿಂದ ಜಾಗತಿಕ ವಿಶ್ವಸಂಸ್ಥೆ ವೇದಿಕೆಯಲ್ಲಿ ಪಾಕಿಸ್ತಾನ ಮಾನ ಮೂರಾಬಟ್ಟೆಯಾಗಿದೆ.
Leave A Reply